ಕನ್ನಡಪ್ರಭ ವಾರ್ತೆ ಬೆಳಗಾವಿ ಕುಂದಾ ನಗರಿ ಬೆಳಗಾವಿಯಲ್ಲಿ ರಾಜ್ಯಮಟ್ಟದ ಪತ್ರಿಕಾ ವಿತರಕರ ರಾಜ್ಯಮಟ್ಟದ 6 ನೇ ಸಮ್ಮೇಳನವನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಕಳೆದ 5 ವರ್ಷಗಳಿಂದ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಪತ್ರಿಕಾ ವಿತರಕರಾಗಿ ಕೆಲಸ ಮಾಡುತ್ತಿದೆ. ಪತ್ರಿಕಾ ವಿತರಕರ ಸಂಕಷ್ಟ, ಭಾವನೆಗಳನ್ನು ಈಡೇರಿಸುವ ಸಲುವಾಗಿ ಸಮ್ಮೇಳನವನ್ನು ಹಮ್ಮಿಕೊಳ್ಳುತ್ತಿದ್ದೇವೆ ಎಂದು ರಾಜ್ಯ ಪತ್ರಿಕಾ ವಿತಕರ ಒಕ್ಕೂಟದ ರಾಜ್ಯಧ್ಯಕ್ಷ ಕೆ.ಶಂಭುಲಿಂಗ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಕುಂದಾ ನಗರಿ ಬೆಳಗಾವಿಯಲ್ಲಿ ರಾಜ್ಯಮಟ್ಟದ ಪತ್ರಿಕಾ ವಿತರಕರ ರಾಜ್ಯಮಟ್ಟದ 6 ನೇ ಸಮ್ಮೇಳನವನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಕಳೆದ 5 ವರ್ಷಗಳಿಂದ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಪತ್ರಿಕಾ ವಿತರಕರಾಗಿ ಕೆಲಸ ಮಾಡುತ್ತಿದೆ. ಪತ್ರಿಕಾ ವಿತರಕರ ಸಂಕಷ್ಟ, ಭಾವನೆಗಳನ್ನು ಈಡೇರಿಸುವ ಸಲುವಾಗಿ ಸಮ್ಮೇಳನವನ್ನು ಹಮ್ಮಿಕೊಳ್ಳುತ್ತಿದ್ದೇವೆ ಎಂದು ರಾಜ್ಯ ಪತ್ರಿಕಾ ವಿತಕರ ಒಕ್ಕೂಟದ ರಾಜ್ಯಧ್ಯಕ್ಷ ಕೆ.ಶಂಭುಲಿಂಗ ಹೇಳಿದರು.

ಬೆಳಗಾವಿಯ ಶಿವಾಜಿ ನಗರದ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಹಾಗೂ ಜಿಲ್ಲಾ ವಿತರಕರ ಸಂಘದ ಪತ್ರಿಕಾ ವಿತರಕರ 6ನೇ ರಾಜ್ಯಮಟ್ಟದ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಪತ್ರಿಕಾ ವಿತರಕರ ಹಲವಾರು ಬೇಡಿಕೆಗಳು ಸರ್ಕಾರದ ಮುಂದಿವೆ. ಅವೆಲ್ಲವೂ ಅಸ್ತಿತ್ವಕ್ಕೆ ಬರಬೇಕಾಗಿದೆ. ಮಹಾಮಾರಿ ಕರೋನಾ ಸಮಯದಲ್ಲಿ 300ಕ್ಕೂ ಅಧಿಕ ಪತ್ರಿಕಾ ವಿತಕರನ್ನು ಕಳೆಕೊಂಡಿದ್ದೇವೆ. ಆ ನೊಂದ ಕುಟುಂಬಗಳಿಗೆ ಸರ್ಕಾರದಿಂದ ನೆರವು ಕೊಡಿಸುವುದು ನಮ್ಮ ಸಂಘಟನೆ ಜವಾಬ್ದಾರಿ. ಹಲವಾರು ಬೇಡಿಕೆಗಳನ್ನ ನಾವು ಸರ್ಕಾರದ ಮುಂದೆ ಇಟ್ಟಿದ್ದೇವೆ. ಪತ್ರಿಕಾ ವಿತರಕರ ಬೇಡಿಕೆಗಳು ಹಾಗೂ ಸಮ್ಮೇಳನವನ್ನು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘವು ನಮ್ಮೊಂದಿಗೆ ಕೈಜೋಡಿಸಿರುವುದು ತುಂಬಾ ಸಂತೋಷವನ್ನುಂಟು ಮಾಡಿದೆ ಎಂದರು.

ಪತ್ರಿಕಾ ವಿತರಕರ ಸಂಘದ ಬೆಳಗಾವಿ ಜಿಲ್ಲಾಧ್ಯಕ್ಷ ದೀಪಕ ರಾಜಗೊಳ್ಕರ ಮಾತನಾಡಿ, ಬೆಳಗಾವಿ ಜಿಲ್ಲೆಯಲ್ಲಿ ರಾಜ್ಯಮಟ್ಟದ 6ನೇ ಪತ್ರಿಕಾ ವಿತರಕರ ಸಮ್ಮೇಳನ ಜರುಗುವುದು ತುಂಬಾ ಖುಷಿಯಾಗಿದೆ. ಜಿಲ್ಲೆಯಲ್ಲಿ 15 ಜಿಲ್ಲೆಗಳಲ್ಲಿ ಪೂರ್ವಬಾವಿ ಸಭೆಯನ್ನು ಮಾಡುತ್ತೇವೆ. ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘಟನೆಯ ಸಹಕಾರ ಪಡೆಯುತ್ತೇವೆ. ರಾಜ್ಯಮಟ್ಟ 6ನೇ ಪತ್ರಿಕಾ ವಿತರಕರ ಸಮ್ಮೇಳನವನ್ನು ವಿಶೇಷ, ವಿನೂತನವಾಗಿ ಆಚರಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಶ್ರೀಕಾಂತ ನೇವಗಿ, ಪತ್ರಿಕಾ ವಿತರಕರ ರಾಷ್ಟ್ರೀಯ ಕಾರ್ಯಕಾರಿಣಿ ಮಂಡಳಿ ಸದಸ್ಯ ರಾಜು ಭೋಸಲೆ, ಶಿವಾಜಿ ಮೇತ್ರಿ, ರಾಜು ಮುಚ್ಚಂಡಿ, ಭೀಮಶಂಕರ ಕೋಟೂರ, ಯಾಸಿನ್ ಕಿತ್ತೂರ, ಶಿವಾಜಿ ಸಿಂಧು, ರಮೇಶ ಹಿರೇಮಠ, ಸಜೀವ್ ಪಟ್ಟಣಶೆಟ್ಟಿ, ಪ್ರಶಾಂತ ಶಹಾಪುರಕರ, ರಾಜು ಜಾಧವ, ಮಹಾದೇವ ನಡುವಿನಕೇರಿ, ನಾಗರಾಜ ಹಿರೇಮಠ, ಶಿವಾನಂದ ಹಲಗಿ, ಸತೀಶ ನಾಯಿಕ, ವಿಶ್ವನಾಥ ಮಾಯನಟ್ಟಿ, ಸತೀಶ ಗುಂಡೂಚ್ಚೆ, ಹನೀಪ್ ಜಾರೆ, ಸುಧೀರ್ ಕುಲಕರ್ಣಿ, ಪ್ರಫುಲ್ ಕುಂಡ್ಲೆ ಇತರರು ಇದ್ದರು.

ಪತ್ರಿಕಾ ವಿತರಕರ ರಾಷ್ಟ್ರೀಯ ಕಾರ್ಯಕಾರಣಿ ಮಂಡಳಿಯ ಸದಸ್ಯ ರಾಜು ಭೋಸಲೇ ಸ್ವಾಗತಿಸಿದರು. ಸಂಘಟನೆಯ ಜಿಲ್ಲಾಧ್ಯಕ್ಷ ದೀಪಕ್ ರಾಜಗೋಳ್ಕರ ನಿರೂಪಿಸಿದರು. ಸತೀಶ ನಾಯಿಕ ವಂದಿಸಿದರು