27 ಕ್ಕೆ ರಾಜ್ಯ ಸರ್ಕಾರಿ ನೌಕರರ ಸಂಘದ ಮಹಾ ಸಮ್ಮೇಳನ

| Published : Feb 18 2024, 01:33 AM IST

ಸಾರಾಂಶ

ಫೆ. ೨೭ ರ ಮಂಗಳವಾರ ಸರ್ಕಾರಿ ನೌಕರರ ಮೂರು ಪ್ರಮುಖ ಬೇಡಿಕೆಗಳ ಕುರಿತು ಸರ್ಕಾರಕ್ಕೆ ಮನವಿ ಸಲ್ಲಿಸುವ ಜತೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಮಹಾ ಸಮ್ಮೇಳನ ಆಯೋಜನೆ ಮಾಡಲಾಗಿದ್ದು, ತಾಲೂಕಿನಿಂದ ಸುಮಾರು ಒಂದು ಸಾವಿರ ಮಂದಿ ತೆರಳುತಿರುವುದಾಗಿ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಟಿ.ಎಸ್.ಕುಮಾರಸ್ವಾಮಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ಫೆ. ೨೭ ರ ಮಂಗಳವಾರ ಸರ್ಕಾರಿ ನೌಕರರ ಮೂರು ಪ್ರಮುಖ ಬೇಡಿಕೆಗಳ ಕುರಿತು ಸರ್ಕಾರಕ್ಕೆ ಮನವಿ ಸಲ್ಲಿಸುವ ಜತೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಮಹಾ ಸಮ್ಮೇಳನ ಆಯೋಜನೆ ಮಾಡಲಾಗಿದ್ದು, ತಾಲೂಕಿನಿಂದ ಸುಮಾರು ಒಂದು ಸಾವಿರ ಮಂದಿ ತೆರಳುತಿರುವುದಾಗಿ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಟಿ.ಎಸ್.ಕುಮಾರಸ್ವಾಮಿ ತಿಳಿಸಿದರು. ಪಟ್ಟಣದ ಕ್ಷೇತ್ರ ಸಂಪನ್ಮೂಲ ಕೇಂದ್ರ ಸಭಾಂಗಣದಲ್ಲಿ ತಾಲೂಕು ಘಟಕದ ಸರ್ಕಾರಿ ನೌಕರರ ಸಂಘದ ವಿವಿಧ ಸಂಘಟನೆಗಳ ಅಧ್ಯಕ್ಷರುಗಳ ಉಪಸ್ಥಿತಿಯಲ್ಲಿ ಜರುಗಿದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ನಮ್ಮಗಳ ನೆಮ್ಮದಿಯ ಬದುಕಿಗಾಗಿ ನಮ್ಮ ಹಕ್ಕು ಎಂಬ ಶೀರ್ಷಿಕೆಯಡಿ ಬೇಡಿಕೆಗಳಾದ ಹಳೇ ಪಿಂಚಣಿ ಯೋಜನೆ ಮರು ಜಾರಿ, ಏಳನೇ ವೇತನ ಆಯೋಗದ ವರದಿಯನ್ನು ಅನುಷ್ಟಾನಗೊಳಿಸಬೇಕು ಮತ್ತು ಸರ್ಕಾರಿ ನೌಕರರಿಗೆ ಆರೋಗ್ಯ ಸಂಜೀವಿನಿ ಯೋಜನೆಯನ್ನು ಆರಂಭಿಸಬೇಕೆಂದು ಒತ್ತಾಯಿಸುವ ಜತೆಗೆ ನಮ್ಮ ಮನವಿಗೆ ಸ್ಪಂಧಿಸುವಂತೆ ಸರ್ಕಾರದ ಗಮನ ಸೆಳೆಯುವ ಸಲುವಾಗಿ ಸಮ್ಮೇಳನ ಆಯೋಜನೆ ಮಾಡಲಾಗಿದೆ ಎಂದರು.

೨೭ ರಂದು ಸಮ್ಮೇಳನಕ್ಕೆ ತೆರಳುವ ಸರ್ಕಾರಿ ನೌಕರರಿಗೆ ಸರ್ಕಾರದಿಂದ ಒಒಡಿ ಕಲ್ಪಿಸಲು ರಾಜ್ಯ ಸರ್ಕಾರಿ ನೌಕರರ ಸಂಘ ನಿರ್ಧರಿಸಿದೆ. ಆದ್ದರಿಂದ ಈ ಸಮ್ಮೇಳನಕ್ಕೆ ಎಲ್ಲ ಸರ್ಕಾರಿ ನೌಕರರುಗಳು ಭಾಗವಹಿಸಿ ನಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಸೆ ನೀಡಬೇಕೆಂದು ಮನವಿ ಮಾಡಿದರು. ನಮ್ಮ ತಾಲೂಕಿನಿಂದ ಸಮ್ಮೇಳನಕ್ಕೆ ತೆರಳುವ ಸರ್ಕಾರಿ ನೌಕರರಿಗೆ ತಾ. ಸಂಘವು ಹೋಗಿ ಬರಲು ವಾಹನ ಸೌಕರ್ಯದ ವ್ಯವಸ್ಥೆ ಮಾಡಿದೆ. ಆದ್ದರಿಂದ ನಮ್ಮಸರ್ಕಾರಿ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಸಮ್ಮೆಳನಕ್ಕೆ ಆಗಮಿಸಿ, ಸಹಕರಿಸಬೇಕೆಂದು ಮನವಿ ಮಾಡಿದರು. ರಾಜ್ಯಾಧ್ಯಕ್ಷ ಷಡಾಕ್ಷರಿ ರಾಜ್ಯದ ಜಿಲ್ಲೆ ಮತ್ತು ತಾಲೂಕು ಸಂಘಗಳಿಗೆ ಬೇಟಿ ನೀಡಿ, ಸರ್ಕಾರಿ ನೌಕರರ ಕುಂದು ಕೊರತೆಗಳನ್ನು ಖುದ್ದಾಗಿ ಆಲಿಸಿದ್ದಾರೆ. ೨೦೨೩ ರ ಮಾರ್ಚಿ ೧ರಂದು ರಾಜ್ಯ ಸರ್ಕಾರಿ ನೌಕರರ ನಡೆಸಿದ ಮುಷ್ಕರದ ಫಲವಾಗಿ ಎರಡು ಐತಿಹಾಸಿಕ ಆದೇಶವನ್ನು ಸರ್ಕಾರ ಹೊರಡಿಸಿದ್ದು ಅದರ ಪ್ರಕಾರ ರಾಜ್ಯ ಸರ್ಕಾರಿ ನೌಕರರಿಗೆ ಏಪ್ರಿಲ್ ೧, ೨೦೨೩ ರಿಂದ ಅನ್ವಯವಾಗುವಂತೆ ಶೇ. ೧೭ ಮದ್ಯಾಂತರ ಪರಿಹಾರ ಮಂಜುರಾತಿ ಹಾಗೂ ಹಳೆ ಪಿಂಚಣಿ ಯೋಜನೆ ಅನುಷ್ಟಾನಕ್ಕಾಗಿ ಅಪರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಿ ಸರ್ಕಾರಿ ಆದೇಶ ಹೊರಡಿಸಿರುವುದು ಸರ್ಕಾರಿ ನೌಕರರಿಗೆ ಉತ್ತಮ ಬೆಳವಣಿಗೆ ಎಂದರು. ೨೦೧೯-೨೦೨೪ ವರಗಿನ ರಾಜ್ಯ ಸರ್ಕಾರಿ ನೌಕರರ ಸಂಘ ಐದು ವರ್ಷಗಳಲ್ಲಿ ರಾಜ್ಯಾಧ್ಯಕ್ಷ ಷಡಾಕ್ಷರಿ ಅಧ್ಯಕ್ಷತೆಯಲ್ಲಿ ಉತ್ತಮ ಸಾಧನೆ ಮಾಡಿದೆ ಎಂದು ತಿಳಿಸಿ, ಹಲವು ಸಾಧನೆಗಳ ಬಗ್ಗೆ ಮಾಹಿತಿ ನೀಡಿ, ಇವರಿಗೆ ತಮ್ಮ ತಾಲೂಕು ಸಂಘ ಅಭಿನಂದನೆ ಸಲ್ಲಿಸಲಿದೆ ಎಂದು ತಿಳಿಸಿ, ಸುದ್ದಿಗೋಷ್ಟಿಯಲ್ಲಿದ್ದ ತಾ. ಸರ್ಕಾರಿ ನೌಕರರ ಸಂಘದ ವೃಂದ ಸಂಘಗಳ ಪದಾಧಿಕಾರಿಗಳನ್ನು ಅಭಿನಂದಿಸಿದರು. ಸುದ್ದಿಗೋಷ್ಟಿಯಲ್ಲಿ ತಾಲೂಕು ಸರ್ಕಾರಿ ನೌಕರರ ಸಂಘದ ವೃಂದ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳಾದ ದೇವರಾಜ್, ಬಿ.ಬಿ.ಶಿವಕುಮಾರ್, ಚಕ್ರಪಾಣಿ, ನಾಗರಾಜ್, ಗಣೇಶ್, ವಿಶ್ವಾನಾಥ್, ಚಂದ್ರಕಲಾ, ಪ್ರಸಾದ್, ಮಹೇಶ್, ಸುಜಾತ ಅಲಿ, ಉಮೇಶ್, ಹರೀಶ್, ರವಿಕುಮಾರ್, ಮತ್ತಿತರರು ಹಾಜರಿದ್ದರು.