ಬರ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲ

| Published : Mar 06 2024, 02:24 AM IST

ಸಾರಾಂಶ

ರಾಷ್ಟ್ರದ ಸುಭದ್ರತೆಗೆ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕಾಗಿದೆ, ರಾಷ್ಟ್ರದ ಶಾಶ್ವತ ಅಭಿವೃದ್ದಿಗಾಗಿ ಬಿಜೆಪಿ ಸರ್ಕಾರದಿಂದ ಮಾತ್ರ ಸಾಧ್ಯ, ಸಂವಿಧಾನ ರಕ್ಷಣೆ ಬಿಜೆಪಿಯಲ್ಲಿ ಕಾಣಬಹುದು ಹೊರತಾಗಿ ಕಾಂಗ್ರೆಸ್ಸಿನಿಂದ ಅಲ್ಲ

ಕನ್ನಡಪ್ರಭ ವಾರ್ತೆ ಕೋಲಾರ

ರಾಜ್ಯದಲ್ಲಿ ಬರ ಹಾಗೂ ರಣ ಬಿಸಿಲಿನ ಬೇಗೆಯ ಜತೆಗೆ ಜನರ ಸಮಸ್ಯೆಗಳು ದಿನೇ ದಿನೇ ಉಲ್ಲಣಗೊಂಡು ಪರಿಸ್ಥಿತಿ ತೀರ ಹದಗೆಟ್ಟಿದೆ, ರಾಜ್ಯದಲ್ಲಿ ಆಡಳಿತ ರೂಢ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ೮ ತಿಂಗಳಲ್ಲಿ ಜನತೆಯ ವಿಶ್ವಾಸ ಕಳೆದುಕೊಂಡಿದೆ ಎಂದು ಬಿಜೆಪಿ ಎಸ್ಸಿ ಮೋರ್ಚಾದ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.

ನಗರದ ಸಾಯಿಧಾಮ್ ಹೋಟೆಲ್‌ನಲ್ಲಿ ವಿಕಸಿತ ಭಾರತ ನಿರ್ಮಾಣಕ್ಕಾಗಿ ನರೇಂದ್ರ ಮೋದಿ ಮತ್ತೊಮ್ಮೆ ಎಂಬ ಕಾರ್ಯಕ್ರಮದಡಿ ಕುರಿತ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಕುಡಿಯುವ ಹಾಗೂ ಕೃಷಿಗೆ ನೀರು, ಜಾನುವಾರುಗಳಿಗೆ ಮೇವು, ರೈತರ ಬೆಳೆ ನಷ್ಟ, ಬರಪರಿಹಾರ, ನಿರುದ್ಯೋಗ ಸೇರಿದಂತೆ ಸಮಸ್ಯೆಗಳ ಅಗರದಿಂದ ಕಳೆದ ೮ ತಿಂಗಳಲ್ಲಿ ೮೬೨ ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿದರು.

ಕ್ರಮ ಕೈಗೊಳ್ಳಲು ಸರ್ಕಾರ ವಿಫಲ

ಅತ್ಯಾಚಾರ ಪ್ರಕರಣ, ಮಹಿಳೆಯ ಬೆತ್ತಲೆಗೊಳಿಸಿರುವ ಅಮಾನುಷ ಘಟನೆಗಳು, ಪಾಕಿಸ್ತಾನ ಜಿಂದ್ ಬಾದ್ ಘೋಷಣೆಯು ವಿಧಾನಸೌಧದಲ್ಲಿ ಮೊಳಗಿಸಿರುವಂತ ವಿಕೃತ ವೈಭವೀಕರಣ, ಬಾಂಬ್ ಸ್ಫೋಟದಂತಹ ಘಟನೆಗಳು ನಡೆಯುತ್ತಿದ್ದರೂ ರಾಜ್ಯ ಸರ್ಕಾರ ಸೂಕ್ತ ಕ್ರಮಜರುಗಿಸುವಲ್ಲಿ ವಿಫಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಮೂವರ ಬಂಧನ:

ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಿಸಿದ ರಾಜ್ಯಸಭೆ ಸದಸ್ಯ ನಾಸಿರ್ ಹುಸೇನ್ ಬೆಂಬಲಿಗರ ಕುರಿತು ಪತ್ರಕರ್ತರು ಪ್ರಶ್ನಿಸಿದಾಗ ಅವರ ಮೇಲೆಯ ತಿರುಗಿ ಬಿದ್ದಿದ್ದರು. ಈ ಪ್ರಕರಣದ ಬೆನ್ನಹತ್ತಿದ ಹಿನ್ನಲೆಯಲ್ಲಿ ಸರ್ಕಾರದ ಎಫ್.ಎಸ್.ಎಲ್ ವರದಿ ತಡೆದರೂ ಸಹ ನಾವುಗಳು ಖಾಸಗಿ ವರದಿ ಪಡೆದ ಹಿನ್ನಲೆಯಲ್ಲಿ ೩ ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಓಟ್ ಬ್ಯಾಂಕ್‌ಗೆ ಮಣೆ ಹಾಕಿ ಕಾನೂನುಗಳನ್ನು ದುರ್ಬಗೊಳಿಸುವುದನ್ನು ಸಹಿಸಲಾಗದು, ಜನರ ಮಾನ ಪ್ರಾಣ ಕಾಪಾಡುವಲ್ಲಿ ರಾಜ್ಯ ಸರ್ಕಾರವು ಸಂಪೂರ್ಣ ವಿಫವಾಗಿರುವ ಸಿದ್ದರಾಮಯ್ಯ ಆಡಳಿತದ ದರಿದ್ರ ಸರ್ಕಾರವಾಗಿದೆ ಎಂದು ಟೀಕಿಸಿದರು.ಸರ್ಕಾರದ ಖಜಾನೆ ಖಾಲಿ

ರಾಷ್ಟ್ರದ ಸುಭದ್ರತೆಗೆ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕಾಗಿದೆ, ರಾಷ್ಟ್ರದ ಶಾಶ್ವತ ಅಭಿವೃದ್ದಿಗಾಗಿ ಬಿಜೆಪಿ ಸರ್ಕಾರದಿಂದ ಮಾತ್ರ ಸಾಧ್ಯ, ಸಂವಿಧಾನ ರಕ್ಷಣೆ ಬಿಜೆಪಿಯಲ್ಲಿ ಕಾಣಬಹುದು ಹೊರತಾಗಿ ಕಾಂಗ್ರೆಸ್ಸಿನಿಂದ ಅಲ್ಲ, ದಲಿತರ ವಿರೋಧಿ ಕಾಂಗ್ರೆಸ್, ಮೀಸಲಾತಿ ವಿರೋಧಿ ಕಾಂಗ್ರೆಸ್ ಪಕ್ಷವಾಗಿದೆ, ದಲಿತರ ಮೀಸಲಾತಿ ಹಣ ಕಾಂಗ್ರೆಸ್ ಪಕ್ಷವು ತನ್ನು ಗ್ಯಾರಂಟಿಗಳಿಗೆ ದುರ್‍ಬಳಿಸಿಕೊಂಡು ರಾಜ್ಯದ ಖಜಾನೆ ದಿವಾಳಿ ಮಾಡಿದೆ ಎಂದರು.

ಕಾಂಗ್ರೆಸ್ ಸರ್ಕಾರ ಅಲ್ಪ ಆಯುಷ್ ಸರ್ಕಾರವಾಗಿದೆ, ಮುಂಬರಲಿರುವ ಲೋಕಸಭೆ ಚುನಾವಣೆಯ ನಂತರ ಕರ್ನಾಟಕ ಕಾಂಗ್ರೆಸ್ ಮುಕ್ತವಾಗಲಿದೆ, ರಾಷ್ಟ್ರದಲ್ಲಿ ಬಿಜೆಪಿ ಸಂಸದರ ಬಲ ೪೦೦ಕ್ಕೂ ಅಧಿಕವಾಗಲಿದೆ. ೩ನೇ ಭಾರಿ ಮೋದಿ ಪ್ರಧಾನಿಯಾಗಲಿರುವುದು ನೂರಕ್ಕೆ ನೂರಷ್ಟು ಸತ್ಯವಾಗಿದೆ ಎಂದು ಪ್ರತಿಪಾದಿಸಿದರು.ಕಾಂಗ್ರೆಸ್‌ನಿಂದ ದಲಿತ ಶೋಷಣೆ

ಕಾಂಗ್ರೆಸ್ ೭೫ ವರ್ಷಗಳ ಆಡಳಿತದಲ್ಲಿ ಜಮ್ಮು, ಕಾಶ್ಮೀರದಲ್ಲಿ ಸಂವಿಧಾನ ಇರಲಿಲ್ಲ, ಮೀಸಲಾತಿಯು ಇರಲಿಲ್ಲ ೩೭೦ ಕಾಯ್ದೆ ಜಾರಿಯ ನಂತರ ಮೀಸಲಾತಿ ಸಿಕ್ಕಿದೆ, ಕಾಂಗ್ರೆಸ್ ಪಕ್ಷದಿಂದ ದಲಿತರು ಶೋಷಿತರಾಗುತ್ತಿದ್ದಾರೆ ಹೊರತು ಸಾಮಾಜಿಕ ನ್ಯಾಯ ಸಿಕ್ಕಿಲ್ಲ, ಗ್ಯಾರಂಟಿಗಳನ್ನು ಮುಂದಿರಿಸಿ ಮೀಸಲಾತಿ ತಿರಸ್ಕರಿಸಿದ್ದಾರೆ, ಅಭಿವೃದ್ದಿಗಳಲ್ಲಿ ದಲಿತರಿಗೆ ಸಂಬಂಧ ಇಲ್ಲದಂತೆ ಮಾಡಲಾಗಿದೆ, ದಲಿತ ಸಚಿವರುಗಳಲ್ಲಿ ಅಂಬೇಡ್ಕರ್ ರಕ್ತ ಹರಿಯುತ್ತಿದ್ದರೆ ಕೂಡಲೇ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಹೊರ ಬರುವಂತಾಗಲಿ ಎಂದು ಸವಾಲು ಹಾಕಿದರು.

ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್, ವಿಧಾನ ಪರಿಷತ್ ಸದಸ್ಯ ಕೇಶವ್ ಪ್ರಸಾದ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಓಂಶಕ್ತಿ ಚಲಪತಿ, ಉಪಾಧ್ಯಕ್ಷ ವಿಜಯಕುಮಾರ್, ಜಿಲ್ಲಾ ವಕ್ತಾರ ಎಸ್.ಬಿ.ಮುನಿವೆಂಕಟಪ್ಪ, ಜಿಪಂ ಮಾಜಿ ಸದಸ್ಯ ಬಿ.ವಿ.ಮಹೇಶ್, ಮುಖಂಡರಾದ ಕೆಂಬೋಡಿ ನಾರಾಯಣಸ್ವಾಮಿ, ಮಾಗೇರಿ ನಾರಾಯಣಸ್ವಾಮಿ, ಸಿ.ಡಿ.ರಾಮಚಂದ್ರ, ಡಾ.ಶಿವಣ್ಣ ಇದ್ದರು.