ಸಾರಾಂಶ
ಚನ್ನಗಿರಿ: ರಾಜ್ಯ ಸರ್ಕಾರವು ಆಡಳಿತ ವ್ಯವಸ್ಥೆ ನಿಭಾವಣೆಯಲ್ಲಿ ಸಂಪೂರ್ಣ ವಿಫಲವಾಗಿದೆ. ಹಿಂದೂ ವಿರೋಧಿ ಆಡಳಿತ ನಡೆಸುತ್ತಾ ರಾಜ್ಯದ ಬಹುಕೋಟಿ ಹಿಂದೂಗಳ ಶ್ರದ್ಧಾ-ಭಕ್ತಿಯ ಸ್ಥಳವಾದ ಧರ್ಮಸ್ಥಳದ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿರುವುದು ವಿಷಾಧನೀಯ ಎಂದು ತಾಲೂಕು ಬಿಜೆಪಿ ಮುಖಂಡ, ದಾವಣಗೆರೆ ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಮಾಡಾಳು ಮಲ್ಲಿಕಾರ್ಜುನ್ ಹೇಳಿದರು.
ಶುಕ್ರವಾರ ತಾಲೂಕು ಬಿಜೆಪಿ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಕುರಿತು ಅಪಪ್ರಚಾರ ಮಾಡುತ್ತಿರುವವರು ಹಾಗೂ ಸಾಮಾಜಿಕ ಪಟ್ಟಭದ್ರ ಹಿತಸಕ್ತಿಗಳ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆ ನೇತೃತ್ವ ವಹಿಸಿ ಅವರು ಮಾತನಾಡಿದರು.ಧರ್ಮಸ್ಥಳದಲ್ಲಿ ಸಾವಿರಾರು ಹೆಣಗಳನ್ನು ಹೂತು ಹಾಕಿದ್ದೇನೆ ಎಂದು ಅನಾಮಿಕ ಹೇಳಿದ ಕೂಡಲೇ ರಾಜ್ಯ ಸರ್ಕಾರ ಎಸ್.ಐ.ಟಿ ರಚನೆ ಮಾಡಿ, ಶವಗಳ ಶೋಧ ನಡೆಸಿದರೂ ಯಾವುದೇ ಕುರುಹು ಪತ್ತೆಯಾಗಿಲ್ಲ. ಈ ಷಡ್ಯಂತ್ರದ ಹಿಂದಿನ ಗಿರೀಶ್ ಮಟ್ಟಣ್ಣವರ್, ಮಹೇಶ್ ಶೆಟ್ಟಿ ತಿಮರೋಡಿ, ಸಮೀರ್ ಇವರನ್ನು ಮೊದಲು ವಿಚಾರಣೆ ನಡೆಸಬೇಕು. ಈ ಪಿತೂರಿ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಸೆ.1ರಂದು ಧರ್ಮಸ್ಥಳ ಚಲೋ ಚಳವಳಿ ನಡೆಯಲಿದೆ. ಈ ಬೃಹತ್ ಚಳುವಳಿಗೆ ಚನ್ನಗಿರಿ ತಾಲೂಕಿನಿಂದ ಸಾವಿರಾರು ವಾಹನಗಳಲ್ಲಿ 10 ಸಾವಿರ ಜನರು ಭಾಗಿಯಾಗಲಿದ್ದಾರೆ ಎಂದರು.
ಜಿಲ್ಲಾ ವಿಶ್ವ ಹಿಂದೂ ಪರಿಷದ್ ಉಪಾಧ್ಯಕ್ಷ ಮಂಜುನಾಥ್, ತಾಲೂಕು ಅಧ್ಯಕ್ಷ ಮಲಹಾಳ್ ಕುಮಾರ ಸ್ವಾಮಿ, ಗೌ.ಹಾಲೇಶ್, ಹೆಬ್ಬಳಗೆರೆ ಕೆ.ಸಿ.ಕೆಂಚಪ್ಪ, ಸಂತೆಬೆನ್ನೂರು ಬಸವರಾಜ್ ಮಾತನಾಡಿದರು. ಪ್ರತಿಭಟನಾ ಮೆರವಣಿಗೆಯು ಪ್ರವಾಸಿ ಮಂದಿರದಿಂದ ಪ್ರಾರಂಭಗೊಂಡು ತಾಲೂಕು ಕಚೇರಿವರೆಗೆ ನಡೆಸಲಾಯಿತು. ತಾಲೂಕು ಬಿಜೆಪಿ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.- - -
-29ಕೆಸಿಎನ್‌ಜಿ1:;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))