ಮಾರ್ಚ್‌ 15ರಂದು ಅಲೆಮಾರಿ ಸಮುದಾಯಗಳ ರಾಜ್ಯಮಟ್ಟದ ಸಮಾವೇಶ: ಆದರ್ಶ ಯಲ್ಲಪ್ಪ

| Published : Mar 10 2024, 01:33 AM IST

ಮಾರ್ಚ್‌ 15ರಂದು ಅಲೆಮಾರಿ ಸಮುದಾಯಗಳ ರಾಜ್ಯಮಟ್ಟದ ಸಮಾವೇಶ: ಆದರ್ಶ ಯಲ್ಲಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಮಾ. 15ರಂದು ಬೆಂಗಳೂರಿನ ವಸಂತ ನಗರದಲ್ಲಿರುವ ಅಂಬೇಡ್ಕರ್ ಭವನದಲ್ಲಿ ರಾಜ್ಯದಲ್ಲಿಯೇ ಮೊದಲ ಬಾರಿಗೆ ಎಸ್.ಸಿ., ಎಸ್ಟಿ ಅಲೆಮಾರಿ, ವಿಮುಕ್ತ ಬುಡಕಟ್ಟು ರಾಜ್ಯ ಮಟ್ಟದ ಸಮಾವೇಶವನ್ನು ಆಯೋಜನೆ ಮಾಡಲಾಗಿದೆ ಎಂದು ಒಕ್ಕೂಟದ ರಾಜ್ಯಾಧ್ಯಕ್ಷ ಆದರ್ಶ ಯಲ್ಲಪ್ಪ ಹೇಳಿದರು.

ಗದಗ: ಮಾ. 15ರಂದು ಬೆಂಗಳೂರಿನ ವಸಂತ ನಗರದಲ್ಲಿರುವ ಅಂಬೇಡ್ಕರ್ ಭವನದಲ್ಲಿ ರಾಜ್ಯದಲ್ಲಿಯೇ ಮೊದಲ ಬಾರಿಗೆ ಎಸ್.ಸಿ., ಎಸ್ಟಿ ಅಲೆಮಾರಿ, ವಿಮುಕ್ತ ಬುಡಕಟ್ಟು ರಾಜ್ಯ ಮಟ್ಟದ ಸಮಾವೇಶವನ್ನು ಆಯೋಜನೆ ಮಾಡಲಾಗಿದೆ ಎಂದು ಒಕ್ಕೂಟದ ರಾಜ್ಯಾಧ್ಯಕ್ಷ ಆದರ್ಶ ಯಲ್ಲಪ್ಪ ಹೇಳಿದರು. ಅವರು ಶನಿವಾರ ಗದಗ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸರ್ಕಾರವು 74 ಅಲೆಮಾರಿ, ಅರೆ ಅಲೆಮಾರಿ, ಅತೀ ಸೂಕ್ಷ್ಮ ಎಂದು ಸರ್ಕಾರ ಘೋಷಣೆ ಮಾಡಿದೆ. ನಮ್ಮ ಸಮುದಾಯದ ನಿಗಮ ಮಾಡಿ ಸರ್ಕಾರ ಕಳೆದ ಬಜೆಟ್‌ನಲ್ಲಿ ಕೇವಲ 40 ಕೋಟಿ ಮೀಸಲಿಟ್ಟಿದೆ. 9 ಲಕ್ಷಕ್ಕೂ ಹೆಚ್ಟು ಜನಸಂಖ್ಯೆ ಇರುವ ಸಮುದಾಯಕ್ಕೆ ಈ ಹಣ ಸಾಲದು. ಸಮುದಾಯ ಭವನ ಸೇರಿದಂತೆ ಇತರೆ ಖರ್ಚು ಸೇರಿಸಿ 32 ಕೋಟಿ ವ್ಯಯಿಸಲಾಗಿದೆ. ಹೀಗಾಗಿ ಅದರಲ್ಲಿ ಉಳಿದಿದ್ದು ಕೇವಲ 8 ಕೋಟಿ ಹಣ ಎನ್ನುವ ಮಾಹಿತಿ ಇದೆ. ಇದು ನಮ್ಮ ಅಭಿವೃದ್ಧಿಗೆ ಇದು ಸಾಲದು. ನಮಗೆ 400 ಕೋಟಿ ಹಣ ಮೀಸಲಿಡಬೇಕು ಎಂದು ಸಿಎಂಗೆ ಮನವಿ ಸಲ್ಲಿಸಿದ್ದೇವೆ.

ದೊಂಬರ, ಸಿಳ್ಳೆಕ್ಯಾತಾಸ್, ಕೊರಮ, ಕೊರಚ, ಮುಕ್ರಿ, ಘಂಟಿಚೋರ್, ಸಿಂಧೋಳ್ಳ ಸೇರಿದಂತೆ ಹಲವು ಜಾತಿಗಳನ್ನು ಪರಿಶಿಷ್ಟ ಪಂಗಡದಲ್ಲಿ ಸೇರಿಸಿದ್ದಾರೆ. ಆದರೆ, ಇದರಲ್ಲಿ ಹಲವು ಗೊಂದಲಗಳಿವೆ. ಈ ಗೊಂದಲ ಸರ್ಕಾರದಲ್ಲಿಯೂ ಇದೆ. ಹೀಗಾಗಿ ಈ ಹಿಂದೆ ನಮ್ಮ ಸಂಘಟನೆ ಮೂಲಕ ಬೆಂಗಳೂರಿನಿಂದ ಬೆಳಗಾವಿವರೆಗೂ ಪಾದಯಾತ್ರೆ ಮಾಡಿದ್ದೇವು. ಸಾಮಾಜಿಕ ಅನಿಷ್ಟಗಳ ವಿರುದ್ಧ ಜಾಗೃತಿ ಮೂಡಿಸಿ, ಸಮುದಾಯದ ಮಕ್ಕಳಿಗೆ ಶಿಕ್ಷಣದ ಬಗ್ಗೆ ಆಸಕ್ತಿ ಮೂಡಿಸುವುದೇ ಎಸ್ಸಿ, ಎಸ್ಟಿ ಅಲೆಮಾರಿ, ವಿಮುಕ್ತ ಬುಡಕಟ್ಟು ಸಂಘಟನೆಗಳ ಒಕ್ಕೂಟದ ಉದ್ದೇಶ ಎಂದು ಬಿ. ಎಚ್. ಮಂಜುನಾಥ ಹೇಳಿದರು. ಸರ್ಕಾರ ನಮ್ಮ ಸಮುದಾಯಕ್ಕೆ ಮನೆ ನಿರ್ಮಿಸಿ ಕೋಡುತ್ತೇವೆ ಎನ್ಮುವ ಭರವಸೆ ನೀಡಿತ್ತು. ಹಿಂದಿನ ಸರ್ಕಾರದ ಸಚಿವರು 5 ಲಕ್ಷ ಅನುದಾನದಲ್ಲಿ ಮನೆ ನಿರ್ಮಿಸಿ ಕೊಡುವ ಭರವಸೆ ನೀಡಿದ್ದರು. ಇದರಿಂದ ಸಂತಸಗೊಂಡ ನಮ್ಮ ಸಮುದಾಯದ ಜನರು ಟೆಂಟ್, ಗುಡಿಸಲು ಕೆಡವಿ ಮನೆಗೆ ಪ್ಲಿಂತ್‌ಗಳನ್ನು ಸಾಲ ಮಾಡಿ ಹಾಕಿಸಿದ್ದಾರೆ. ಆದರೆ, ಸರ್ಕಾರದ ಭರವಸೆ ಇನ್ನೂ ಈಡೇರಿಲ್ಲ. ಹೀಗಾಗಿ ಸಮುದಾಯದ ಜನರು ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಕೂಡಲೆ ಭರವಸೆ ನೀಡಿದ ಹಣವನ್ನು ಬಿಡುಗಡೆ ಮಾಡಿ ಅಲೆಮಾರಿ ಸಮುದಾಯದ ಜನಗಳ ಹಿತ ಕಾಯಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಸುಮಿತ್ರಾ ಗಂಗಾವತಿ, ಕೆ. ಎಚ್. ಬೇಲೂರು, ಸಹದೇವರಾಜ್ ಕರಿ, ಫಕ್ಕಿರೇಶ್ ಕಟ್ಟಿಮನಿ, ಯಲ್ಲಪ್ಪ ಡೊಕ್ಕಣ್ಣನವರ, ಯಲ್ಲಪ್ಪ ಒಂಟೆತ್ತಿನ, ಹನುಮಂತ ಸಿಳ್ಳಿಕೇತರ, ಲಕ್ಷ್ಮಣ್ ಡೊಕ್ಕಣ್ಣನವರ, ಹನುಮಾಂತಪ್ಪ ವಿಭೂತಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.