ಜೀವನಾಡಿ ಮಾಸ ಪತ್ರಿಕೆಯಿಂದ ರಾಜ್ಯಮಟ್ಟದ ಕನ್ನಡ ಸಾಹಿತ್ಯ ಸ್ಪರ್ಧೆ

| Published : Jul 16 2025, 12:45 AM IST

ಜೀವನಾಡಿ ಮಾಸ ಪತ್ರಿಕೆಯಿಂದ ರಾಜ್ಯಮಟ್ಟದ ಕನ್ನಡ ಸಾಹಿತ್ಯ ಸ್ಪರ್ಧೆ
Share this Article
  • FB
  • TW
  • Linkdin
  • Email

ಸಾರಾಂಶ

ಲೇಖನಗಳು ನುಡಿ ತಂತ್ರಾಂಶದಲ್ಲಿ ಟೈಪ್ ಮಾಡಬೇಕು, ಲೇಖಕರ ಭಾವಚಿತ್ರ, ವಿಳಾಸ, ದೂರವಾಣಿ ಸಂಖ್ಯೆ, ಇ-ಮೇಲ್ ವಿಳಾಸವನ್ನು ಪ್ರತ್ಯೇಕ ಹಾಳೆಯಲ್ಲಿ ಬರೆದು ಲಗತ್ತಿಸಬೇಕು, ಲಕೋಟೆಯ ಮೇಲೆ ಜೀವನಾಡಿ ಸಾಹಿತ್ಯ ಸ್ಪರ್ಧೆ-೨೦೨೫ ಎಂದು ನಮೂದಿಸಬೇಕು, ಕಥೆ, ಪ್ರಬಂಧ, ಕವನಗಳನ್ನು ಬಳಸುವ ಹಕ್ಕನ್ನು ಪತ್ರಿಕೆ ಕಾಯ್ದಿರಿಸುತ್ತದೆ.

ಕನ್ನಡಪ್ರಭ ವಾರ್ತೆ ಮಂಡ್ಯ

‘ಜೀವನಾಡಿ’ ರಾಜ್ಯ ಮಟ್ಟದ ಕನ್ನಡ ಮಾಸಪತ್ರಿಕೆಯ ವತಿಯಿಂದ ರಾಜ್ಯ ಮಟ್ಟದ ಕನ್ನಡ ಸಾಹಿತ್ಯ ಸ್ಪರ್ಧೆಯ ಅಂಗವಾಗಿ ಕಥಾ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಕವನ ಸ್ಪರ್ಧೆ, ರಂಗಭೂಮಿ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಪತ್ರಿಕೆಯ ಸಂಪಾದಕ ಡಾ.ಎಚ್.ಎಸ್.ಮುದ್ದೇಗೌಡ ತಿಳಿಸಿದರು.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸ್ಪರ್ಧೆಗೆ ಕಥೆ, ಪ್ರಬಂಧ, ಕವನಗಳನ್ನು ರಚಿಸಿ ಇ-ಮೇಲ್ ಮೂಲಕ ಸಲ್ಲಿಸಬೇಕಾಗುವುದು. ಕಥೆ ೨೫೦೦ ಪದಗಳು ಮೀರಬಾರದು, ಪ್ರಬಂಧ ೨೦೦೦ ಪದಗಳು ಮೀರಬಾರದು, ಕವಿತೆಗಳು ೨೪ ಸಾಲುಗಳು ಮೀರಬಾರದು, ಸ್ಪರ್ಧೆಗೆ ಪ್ರಸ್ತುತ ಪಡಿಸುವ ಕಥೆ, ಪ್ರಬಂಧ, ಕವನಗಳು ಬ್ಲಾಗ್, ಸಾಮಾಜಿಕ ಜಾಲತಾಣ ಸೇರಿದಂತೆ ಬೇರೆಲ್ಲೂ ಪ್ರಕಟವಾಗಿರಬಾರದು, ಅನುವಾದಿತ ಕಥೆ, ಪ್ರಬಂಧ, ಕವಿತೆಗಳಿಗೆ ಅವಕಾಶವಿಲ್ಲ, ಸ್ವಂತ ರಚನೆಯಾಗಿರಬೇಕು ಎಂದರು.

ಲೇಖನಗಳು ನುಡಿ ತಂತ್ರಾಂಶದಲ್ಲಿ ಟೈಪ್ ಮಾಡಬೇಕು, ಲೇಖಕರ ಭಾವಚಿತ್ರ, ವಿಳಾಸ, ದೂರವಾಣಿ ಸಂಖ್ಯೆ, ಇ-ಮೇಲ್ ವಿಳಾಸವನ್ನು ಪ್ರತ್ಯೇಕ ಹಾಳೆಯಲ್ಲಿ ಬರೆದು ಲಗತ್ತಿಸಬೇಕು, ಲಕೋಟೆಯ ಮೇಲೆ ಜೀವನಾಡಿ ಸಾಹಿತ್ಯ ಸ್ಪರ್ಧೆ-೨೦೨೫ ಎಂದು ನಮೂದಿಸಬೇಕು, ಕಥೆ, ಪ್ರಬಂಧ, ಕವನಗಳನ್ನು ಬಳಸುವ ಹಕ್ಕನ್ನು ಪತ್ರಿಕೆ ಕಾಯ್ದಿರಿಸುತ್ತದೆ. ಪತ್ರಿಕೆಯ ಬಳಗದವರು ಸ್ಪರ್ಧೆಯಲ್ಲಿ ಭಾಗವಹಿಸುವಂತಿಲ್ಲ, ತೀರ್ಪುಗಾರರ ತೀರ್ಮಾನವೇ ಅಂತಿಮ ಕಥೆ, ಪ್ರಬಂಧ, ಕವನಗಳನ್ನು ಸಲ್ಲಿಸಲು ಆ.೧೫ ಕೊನೆಯ ದಿನವಾಗಿದ್ದು, ನಂತರ ಬಂದಲ್ಲಿ ಪರಿಗಣಿಸಲಾಗುವುದಿಲ್ಲ ಎಂದರು.

ಕಥಾ ಸ್ಪರ್ಧೆಗೆ ೧೫ ಸಾವಿರ ರು., ಪ್ರಬಂಧ ಸ್ಪರ್ಧೆಗೆ ೧೦ ಸಾವಿರ ರು., ಕವನ ಸ್ಪರ್ಧೆಗೆ ೫ ಸಾವಿರ ರು., ರಂಗಭೂಮಿ ಪ್ರಶಸ್ತಿಗೆ ೧೦ ಸಾವಿರ ರು. ನಗದು ನೀಡಲಿದ್ದು, ವಿಜೇತರಿಗೆ ಸನ್ಮಾನ, ಪ್ರಶಸ್ತಿ ಫಲಕ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು. ಸದರಿ ಸ್ಪರ್ಧೆಗಳ ಬಹುಮಾನ ವಿತರಣಾ ಕಾರ್ಯಕ್ರಮವು ಸೆ. ೧೪ರ ಬೆಳಿಗ್ಗೆ ೧೦ ಗಂಟೆಗೆ ನಗರದ ಶಂಕರಗೌಡ ಶತಮಾನೋತ್ಸವ ಭವನದಲ್ಲಿ ನಡೆಯಲಿದೆ ಎಂದು ವಿವರಿಸಿದರು.

ಪತ್ರಿಕೆಯ ಪೋಷಕ ಧನಂಜಯ ದರಸಗುಪ್ಪೆ ಗೋಷ್ಠಿಯಲ್ಲಿದ್ದರು.