ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಇಂಡಿಯಾ ಟೇಕ್ವಾಂಡೋ, ಕರ್ನಾಟಕ ಕ್ರೀಡಾ ಪ್ರಾಧಿಕಾರ ಮತ್ತು ಕರ್ನಾಟಕ ಒಲಿಂಪಿಕ್ ಸಂಸ್ಥೆಯ ಅಂಗ ಸಂಸ್ಥೆಯಾದ ಕರ್ನಾಟಕ ಟೇಕ್ವಾಂಡೋ ಸಂಸ್ಥೆ ಬೆಂಗಳೂರಿನ ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ಈಚೆಗೆ ಆಯೋಜಿಸಿದ್ದ ೪೧ನೇ ರಾಜ್ಯ ಮಟ್ಟದ ಸಬ್-ಜೂನಿಯರ್, ಜೂನಿಯರ್, ಸೀನಿಯರ್ ಮತ್ತು ೧೦ನೇ ಕೆಡೆಟ್ ಟೇಕ್ವಾಂಡೋ ಪಂದ್ಯಾವಳಿಯಲ್ಲಿ ಬೆಳಗಾವಿ ಜಿಲ್ಲಾ ಟೇಕ್ವಾಂಡೋ ಸಂಸ್ಥೆಯ ಕ್ರೀಡಾಪಟುಗಳು 3 ಚಿನ್ನ, 8 ಬೆಳ್ಳಿ ಮತ್ತು 18 ಕಂಚಿನ ಪದಕ ಪಡೆದು ಸಾಧನೆ ಮಾಡಿದ್ದಾರೆ.8 ವರ್ಷದೊಳಗಿನ ಸಬ್ ಜೂನಿಯರ್ ಬಾಲಕರ ವಿಭಾಗದಲ್ಲಿ ಕಾಕತಿಯ ಸೇಂಟ್ ಜಾನ್ಸ್ ಶಾಲೆಯ ಸಂಚಿತ್ ವಿಷ್ಣು ಭಜಂತ್ರಿ, ಕಣಬರ್ಗಿಯ ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ಶ್ರೇಯಸಗೌಡ ವಿ.ಗೌರಿ ಮತ್ತು ಸಂಜಯ ಘೋಡಾವತ್ ಇಂಟರ್‌ನ್ಯಾಶನಲ್ ಸ್ಕೂಲ್ ನ ಇಶಾನ್ ಎಸ್. ಪಾಟೀಲ ಬೆಳಗಾವಿ ಕಂಚಿನ ಪದಕ ಗೆದ್ದರೆ, ಬಾಲಕಿಯರ ವಿಭಾಗದಲ್ಲಿ ಬೆಳಗಾವಿಯ ಸಂಜಯ್ ಘೋಡಾವತ್ ಇಂಟರ್‌ನ್ಯಾಶನಲ್ ಸ್ಕೂಲ್‌ನ ಸಾನ್ವಿ ಜಿ. ವಾಗುಕರ್ ಕಂಚಿನ ಪದಕ, ಬೆಳಗಾವಿಯ ಸಂಜಯ ಘೋಡಾವತ್ ಇಂಟರ್‌ನ್ಯಾಶನಲ್ ಸ್ಕೂಲ್‌ನ ಅನಿಕಾ ಕೆ.ಮುನವಳ್ಳಿ ಮತ್ತು ಕುವೆಂಪು ನಗರದ ಕೆಎಲ್‌ಇ ಇಂಟರ್‌ನ್ಯಾಶನಲ್ ಸ್ಕೂಲ್‌ನ ಶ್ರಾವ್ಯ ಎಲ್. ಭಟಕಾಂಡೆ ಬೆಳ್ಳಿ ಮತ್ತು ಕಣಬರ್ಗಿಯ ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ಸ್ತುತಿ ಅಭಯ ಟಮರಿ ಕಂಚಿನ ಪದಕ ಪಡೆದರು.
ಸಬ್ ಜೂನಿಯರ್ ಬಾಲಕರ ವಿಭಾಗದಲ್ಲಿ ಹತ್ತು ವರ್ಷದೊಳಗಿನವರ ವಿಭಾಗದಲ್ಲಿ ಕಣಬರ್ಗಿಯ ಲಿಟ್ಲ್ ಸ್ಕಾಲರ್ಸ್ ಅಕಾಡೆಮಿಯ ಸಿದ್ಧಾರ್ಥಗೌಡ ವಿ. ಗೌರಿ ಚಿನ್ನದ, ಬೆಳಗಾವಿಯ ಸಂಜಯ ಘೋಡಾವತ್ ಇಂಟರ್‌ನ್ಯಾಶನಲ್ ಸ್ಕೂಲ್‌ನ ಹರ್ಷ ಜೆ.ವೈಷ್ಣವ್ ಹಾಗೂ ಅವನೀಶನ ಬೆಳ್ಳಿ ಪದಕ ಪಡೆದರೆ, ಕೆಎಲ್‌ಇ ಇಂಟರ್‌ನ್ಯಾಶನಲ್ ಸ್ಕೂಲ್‌ನ ವೇದಾಂತ್ ವಿ. ಖಡಬಡಿ, ಬೆಳಗಾವಿಯ ಸಂಜಯ ಘೋಡಾವತ್ ಇಂಟರ್‌ನ್ಯಾಶನಲ್ ಸ್ಕೂಲ್‌ನ ನಿತಿನ್ ಗಡಡೆ ಕಂಚಿನ ಪದಕ ಪಡೆದರು. ಹತ್ತು ವರ್ಷದೊಳಗಿನ ಸಬ್ ಜೂನಿಯರ್ ಬಾಲಕಿಯರ ವಿಭಾಗದಲ್ಲಿ ಸ್ವಾಮಿ ವಿವೇಕಾನಂದ ಶಾಲೆ ಕಡೋಲಿಯ ಸಾನ್ವಿ ಸಾಗರ್ ಪಾಟೀಲ ಬೆಳ್ಳಿ ಪದಕ, ಬೆಳಗಾವಿಯ ಸಂಜಯ ಘೋಡಾವತ್ ಇಂಟರ್‌ನ್ಯಾಶನಲ್ ಸ್ಕೂಲ್‌ನ ಜಾರಾ ಬಿ. ಪೀರಜಾದೆ ಮತ್ತು ಸ್ಫೂರ್ತಿ ವಿ.ತಾಲೂಕಾರ ಕಂಚಿನ ಪದಕ ಪಡೆದರು.12 ವರ್ಷದೊಳಗಿನ ಸಬ್ ಜೂನಿಯರ್ ಬಾಲಕರ ವಿಭಾಗದಲ್ಲಿ ಬೆಳಗಾವಿಯ ಸಂಜಯ ಘೋಡಾವತ್ ಇಂಟರ್‌ನ್ಯಾಶನಲ್ ಶಾಲೆಯ ಆರುಷ ಹಂಜೆ ಚಿನ್ನದ ಪದಕ ಪಡೆದರೆ, ಅದೇ ಶಾಲೆಯ ಶ್ರೀಯಾನ್ಸ್ ಆರ್. ನ್ಯಾಮಗೌಡ ಬೆಳ್ಳಿ ಪದಕ, ಬೆನ್ಸನ್ಸ್ ಸ್ಕೂಲ್ ಯಮನಾಪುರದ ಮೊಹಮ್ಮದ್ ಸೋಹೇಬ್ ಚಂದ್‌ಶಾಹ್, ಹೊನಗದ ಫಿನಿಕ್ಸ್ ಶಾಲೆಯ ಪವನರಾಜ್ ಬಿ., ಭೂತರಾಮನಹಟ್ಟಿಯ ಮಹಾವೀರ ಶಾಲೆಯ ಘಗನ್ ಪ್ರೇಮ ಶಿವಪೂಜಿಮಠ, ಬೆಳಗಾವಿಯ ಸಂಜಯ ಘೋಡಾವತ್ ಇಂಟರ್‌ನ್ಯಾಶನಲ್ ಸ್ಕೂಲ್‌ನ ಅರ್ಜುನ್ ಎನ್. ಗಡಡೆ ಮತ್ತು ರುಗ್ವೇದ್ ಆರ್. ಪಾಟೀಲ ಕಂಚಿನ ಪದಕ ಪಡೆದರು. ಬಾಲಕಿಯರ ವಿಭಾಗದಲ್ಲಿ ಬೆಳಗಾವಿಯ ಸಂಜಯ ಘೋಡಾವತ್ ಇಂಟರ್‌ನ್ಯಾಶನಲ್ ಸ್ಕೂಲ್‌ನ ಓವಿಯಾ ಡಿ. ಚೌಧರಿ ಮತ್ತು ನಿಶಿಕಾ ಪಾತ್ರ ಬೆಳ್ಳಿ ಪದಕ ಪಡೆದರು.
14 ವರ್ಷದೊಳಗಿನ ಸಬ್ ಜೂನಿಯರ್ ಬಾಲಕರ ವಿಭಾಗದಲ್ಲಿ ಬೆಳಗಾವಿಯ ಸಂಜಯ್ ಘೋಡಾವತ್ ಇಂಟರ್‌ನ್ಯಾಶನಲ್ ಶಾಲೆಯ ಅಥರ್ವ ಮಾಂಗಲೇ ಕಂಚಿನ ಪದಕ, 14 ವರ್ಷದೊಳಗಿನ ಸಬ್ ಜೂನಿಯರ್ ಬಾಲಕಿಯರ ವಿಭಾಗದಲ್ಲಿ ಬೆಳಗಾವಿಯ ಸಂಜಯ್ ಘೋಡಾವತ್ ಇಂಟರ್‌ನ್ಯಾಶನಲ್ ಸ್ಕೂಲ್‌ನ ಸಾನ್ವಿ ಎಸ್.ವಾಸೋಜಿ ಬೆಳ್ಳಿ ಪದಕ ಹಾಗೂ ರೂಪಲ್ ರೇವಣಕರ್, ಅನ್ವಿ ಬಾಗಿ ಕಂಚಿನ ಪದಕ ಪಡೆದರು.ಬೆಳಗಾವಿ ಜಿಲ್ಲಾ ಟೇಕ್ವಾಂಡೋ ತಂಡ ಭಾರತೀಯ ವಾಯುಪಡೆಯ ಇಂಟರ್ ನ್ಯಾಶನಲ್ ಕೋಚ್ ಲೆವೆಲ್ II ಮತ್ತು ಇಂಟನ್ಯಾಶನಲ್ ರೆಫರಿ ಟೇಕ್ವಾಂಡೋ ಮಾಸ್ಟರ್ ಶ್ರೀಪಾದ ರವಿ ರಾವ್ ಅವರ ತರಬೇತಿ ಮತ್ತು ಮಾರ್ಗದರ್ಶನ ನೀಡಿದ್ದರು. ತಂಡಕ್ಕೆ ಬೆಳಗಾವಿ ಜಿಲ್ಲಾ ಸಂಸ್ಥೆಯ ಜಂಟಿ ಕಾರ್ಯದರ್ಶಿ ಸ್ವಪ್ನಿಲ್ ಆರ್. ಪಾಟೀಲ ಮತ್ತು ಖಜಾಂಚಿ ವೈಭವ್ ಆರ್. ಪಾಟೀಲ ಸಹಕಾರ ನೀಡಿದ್ದರು.
ಬೆಳಗಾವಿಯ ಜಿಲ್ಲಾ ಸಂಸ್ಥೆಯ ಅಧ್ಯಕ್ಷ ಮಹಾದೇವ ಮುತ್ನಾಳೆ ಮತ್ತು ಪ್ರಧಾನ ಕಾರ್ಯದರ್ಶಿ ವಕೀಲ ಪ್ರಭಾಕರ ಶೇಡಬಾಳೆ, ರಾಣಿ ಚನ್ನಮ್ಮ ವಿಶ್ವವಿದ್ಯಾನಿಲಯದ ಕ್ರೀಡಾ ಮತ್ತು ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ.ಜಗದೀಶ ಗಸ್ತಿ ವಿಜೇತ ತಂಡವನ್ನು ಅಭಿನಂದಿಸಿದ್ದಾರೆ.----ಬಾಕ್ಸ್---
ರಾಜ್ಯ ತಂಡದಲ್ಲಿ ಸ್ಥಾನಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಪದವಿ ಕಾಲೇಜಿನ ತ್ರಿವೇಣಿ ಭಾವಕಣ್ಣ ಬಡಕಣ್ಣವರ್ ಸೀನಿಯರ್ ೪೯ ಕೆಜಿ ಒಳಗಿನ ಮಹಿಳೆಯರ ವಿಭಾಗದಲ್ಲಿ ಚಿನ್ನದ ಪದಕ ಪಡೆದು ಮುಂಬರುವ ಸೀನಿಯರ್ ರಾಷ್ಟ್ರೀಯ ಪಂದ್ಯಾವಳಿಯ ರಾಜ್ಯ ತಂಡದಲ್ಲಿ ಸ್ಥಾನ ಪಡೆದಳು, ಸಬ್ ಜೂನಿಯರ್ ಬಾಲಕರ ವಿಭಾಗದ ೨೧ ಕೆಜಿ ವಿಭಾಗದಲ್ಲಿ ಕೆಎಲ್ಇ ಅಂತರಾಷ್ಟ್ರೀಯ ಶಾಲೆಯ ವಿನಾಯಕ್ ಕಡಬಡಿ ಕಂಚಿನ ಪದಕ ಪಡೆದನು.