ಕಂಬಳಕ್ಕೆ ರಾಜ್ಯ ಕ್ರೀಡೆಯ ಸ್ಥಾನಮಾನ: ಬಿ.ನಾಗೇಂದ್ರ

| Published : Feb 21 2024, 02:03 AM IST

ಕಂಬಳಕ್ಕೆ ರಾಜ್ಯ ಕ್ರೀಡೆಯ ಸ್ಥಾನಮಾನ: ಬಿ.ನಾಗೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಬಂದಿರುವ ಕರಾವಳಿಯ ಸಾಂಪ್ರದಾಯಿಕ ಕಂಬಳವನ್ನು ರಾಜ್ಯ ಅಥವಾ ನಾಡ ಕ್ರೀಡೆಯ್ನಾಗಿ ಘೋಷಿಸಬೇಕು, ಮಂಗಳೂರಿನ ಪಿಲಿಕುಳದಲ್ಲಿ ಸ್ಥಗಿತಗೊಂಡಿರುವ ಜಿಲ್ಲಾಡಳಿತದ ಕಂಬಳವನ್ನು ಪುನಃ ಆರಂಭಿಸಬೇಕು ಎಂದು ಮಂಜುನಾಥ ಭಂಡಾರಿ ಆಗ್ರಹಿಸಿದ್ದರು.

ಕನ್ನಡಪ್ರಭ ವಾರ್ತೆ ಉಡುಪಿಕರಾವಳಿಯ ವೀರ ಜನಪದ ಕ್ರೀಡೆಯನ್ನು ನಾಡ ಕ್ರೀಡೆ ಅಥವಾ ರಾಜ್ಯ ಕ್ರೀಡೆಯನ್ನಾಗಿ ಘೋಷಿಸಲು ಅಗತ್ಯ ಪ್ರಕ್ರಿಯೆಗಳನ್ನು ನಡೆಸಲಾಗುತ್ತಿದೆ ಎಂದು ರಾಜ್ಯ ಕ್ರೀಡಾ ಮತ್ತು ಯುವಜನ ಸೇವಾ ಸಚಿವ ಬಿ.ನಾಗೇಂದ್ರ ತಿಳಿಸಿದ್ದಾರೆ.ವಿಧಾನ ಪರಿಷತ್‌ನಲ್ಲಿ ಸದಸ್ಯ ಮಂಜುನಾಥ ಭಂಡಾರಿ ಅವರ ಪ್ರಶ್ನೆಗೆ ಸಚಿವರು ಉತ್ತರ ನೀಡಿದರು.ಶತಶತಮಾನಗಳಿಂದ ನಡೆದುಕೊಂಡು ಬಂದಿರುವ ಕರಾವಳಿಯ ಸಾಂಪ್ರದಾಯಿಕ ಕಂಬಳವನ್ನು ರಾಜ್ಯ ಅಥವಾ ನಾಡ ಕ್ರೀಡೆಯ್ನಾಗಿ ಘೋಷಿಸಬೇಕು, ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ 2 ದಿನಗಳ ಕಂಬಳದಲ್ಲಿ 1 ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ಸ್ವತಃ ಮುಖ್ಯಮಂತ್ರಿಗಳೇ ಆಗಮಿಸಿ ಕಂಬಳಕ್ಕೆ ಸರ್ಕಾರದಿಂದ ಅಗತ್ಯ ಬೆಂಬಲ ನೀಡಲಾಗವುದು ಎಂದು ಹೇಳಿದ್ದರು. ಅದರಂತೆ ಕರಾವಳಿಯ ಜನಪ್ರತಿನಿಧಿಗಳು ಮತ್ತು ಕಂಬಳ ಸಂಘಟಕರನ್ನು ಸೇರಿಸಿ ಕಂಬಳ ರಾಜ್ಯ ಸಮಿತಿಯನ್ನು ರಚಿಸಬೇಕು, ಅಗತ್ಯ ಅನುದಾನವನ್ನು ನೀಡಬೇಕು, ಮಂಗಳೂರಿನ ಪಿಲಿಕುಳದಲ್ಲಿ ಸ್ಥಗಿತಗೊಂಡಿರುವ ಜಿಲ್ಲಾಡಳಿತದ ಕಂಬಳವನ್ನು ಪುನಃ ಆರಂಭಿಸಬೇಕು ಎಂದು ಭಂಡಾರಿ ಆಗ್ರಹಿಸಿದರು.ಇದಕ್ಕೆ ಉತ್ತರಿಸಿದ ಕ್ರೀಡಾ ಸಚಿವರು, ಕಂಬಳ ರಾಜ್ಯ ಸಮಿತಿ ರಚನೆಗೆ ಕ್ರಮ ಕೈಗೊಳ್ಳಲಾಗಿದೆ. ಅದಕ್ಕೆ ಅಗತ್ಯವಿರುವ ಬೈಲಾವನ್ನು ರಚಿಸುವಂತೆ ದ.ಕ. ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.ಬೆಂಗಳೂರು ಕಂಬಳಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 1 ಕೋಟಿ ರು. ಮತ್ತು ಕ್ರೀಡಾ ಇಲಾಖೆಯಿಂದ 50 ಲಕ್ಷ ರು. ಅನುದಾನ ನೀಡಲಾಗಿದೆ. ಮುಂದೆಯೂ ಬೆಂಬಲ ನೀಡಲಾಗುತ್ತದೆ ಎಂದು ಸಚಿವರು ಭರವಸೆ ನೀಡಿದರು.ಪಿಲಿಕುಳದಲ್ಲಿಯೂ ದ.ಕ. ಜಿಲ್ಲಾಡಳಿತದ ಮೂಲಕ ಕ್ರೀಡಾ ಇಲಾಖೆಯಿಂದಲೇ ಕಂಬಳವನ್ನು ಪುನಃ ಆರಂಭಿಸವುದಾಗಿಯೂ ಭರವಸೆ ನೀಡಿದರು.