ವ್ಯಸನಗಳಿಂದ ದೂರವಾಗಿ, ಉತ್ತಮ ಶಿಕ್ಷಣ ಗಳಿಸಿ

| Published : Aug 25 2024, 01:48 AM IST

ವ್ಯಸನಗಳಿಂದ ದೂರವಾಗಿ, ಉತ್ತಮ ಶಿಕ್ಷಣ ಗಳಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತ ಜನಸಂಖ್ಯೆ, ಯುವ ಸಂಪತ್ತು, ಅರ್ಥೈಸುವಿಕೆಯಲ್ಲಿ ಜಗತ್ತಿಗೆ ಮೊದಲ ಸ್ಥಾನದಲ್ಲಿದೆ. ಇದನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಯುವ ಸಂಪತ್ತು ಸದ್ಬಳಕೆ ಆಗಬೇಕು. ಇದಕ್ಕಾಗಿ ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರ ಉಳಿಯಬೇಕು. ತಾವು ಕಲಿಯುವ ಶಿಕ್ಷಣವನ್ನು ಜೀವನಕ್ಕೆ ಮಾರ್ಗಸೂಚಿ ಮತ್ತು ಸದುಪಯೋಗ ಆಗಿಸಿಕೊಳ್ಳಬೇಕು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣವರ ಹೇಳಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಭಾರತ ಜನಸಂಖ್ಯೆ, ಯುವ ಸಂಪತ್ತು, ಅರ್ಥೈಸುವಿಕೆಯಲ್ಲಿ ಜಗತ್ತಿಗೆ ಮೊದಲ ಸ್ಥಾನದಲ್ಲಿದೆ. ಇದನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಯುವ ಸಂಪತ್ತು ಸದ್ಬಳಕೆ ಆಗಬೇಕು. ಇದಕ್ಕಾಗಿ ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರ ಉಳಿಯಬೇಕು. ತಾವು ಕಲಿಯುವ ಶಿಕ್ಷಣವನ್ನು ಜೀವನಕ್ಕೆ ಮಾರ್ಗಸೂಚಿ ಮತ್ತು ಸದುಪಯೋಗ ಆಗಿಸಿಕೊಳ್ಳಬೇಕು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣವರ ಹೇಳಿದರು.

ಶುಕ್ರವಾರ ದಾವಣಗೆರೆ ತಾಲೂಕಿನ ಆನಗೋಡು ಜಿ.ಚನ್ನಪ್ಪ ಪದವಿಪೂರ್ವ ಕಾಲೇಜಿನಲ್ಲಿ ಮದ್ಯಪಾನ ಸಂಯಮ ಮಂಡಳಿ, ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಮಾತೃಶ್ರೀ ನಗರ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ, ದಾವಣಗೆರೆ ಆಶ್ರಯದಲ್ಲಿ ಏರ್ಪಡಿಸಲಾದ "ಕಲಿಕಾಸಕ್ತಿ ಮತ್ತು ದುಶ್ಚಟಗಳಿಂದ ದೂರ ಉಳಿಯುವಿಕೆ " ವಿಷಯ ಕುರಿತು ಏರ್ಪಡಿಸಲಾದ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಲಿಕಾಸಕ್ತಿ ಮೂಡಿಸಬೇಕು:

ವಿದ್ಯಾರ್ಥಿಗಳಿಗೆ ಪ್ರಾಥಮಿಕ, ಮಾಧ್ಯಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಶಿಕ್ಷಣದ ಹಂತಗಳಲ್ಲಿ ಕಲಿಕಾಸಕ್ತಿ ಮೂಡಿಸುವುದು ಬಹಳ ಅಗತ್ಯವಾಗಿದೆ. ಇದರಿಂದ ಮಕ್ಕಳಲ್ಲಿನ ಶೈಕ್ಷಣಿಕ ಪ್ರಗತಿ ಹೆಚ್ಚಿಸಲು ಹೆಚ್ಚಿನ ಸಹಕಾರಿಯಾಗಲಿದೆ. ವಿವಿಧ ಹಂತದ ತರಗತಿಗಳ ಪಠ್ಯಕ್ರಮಗಳು ಸಾಮಾಜಿಕ, ಆರ್ಥಿಕ, ವ್ಶೆಜ್ಞಾನಿಕ ಬದಲಾವಣೆ ಆದಂತೆ ಪರಿಷ್ಕರಣೆಗೆ ಒಳಗಾಗಲಿದೆ. ಇದು ನಿರಂತರ ಪ್ರಕ್ರಿಯೆಯಾಗಿದೆ. ವಿದ್ಯಾರ್ಥಿಗಳು ಕೇವಲ ಅಂಕ ಗಳಿಕೆಗಷ್ಟೇ ಸೀಮಿತವಾಗಿ ವ್ಯಾಸಂಗ ಮಾಡದೇ, ವಿಷಯ ಅರ್ಥೈಸಿಕೊಂಡು ಜೀವನಕ್ಕೆ ಉಪಯೋಗವಾಗುವ ನಿಟ್ಟಿನಲ್ಲಿ ಓದಬೇಕು ಎಂದರು.

ಕಾಲೇಜಿನ ಪ್ರಾಂಶುಪಾಲರಾದ ಕಾವೇರಿ ಗೌಡರ್ ಅಧ್ಯಕ್ಷತೆ ವಹಿಸಿದ್ದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಧನಂಜಯ ಬಿ. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಇತಿಹಾಸ ಉಪನ್ಯಾಸಕರಾದ ಎಚ್.ಪಿ. ಯಶವಂತ್ ಕುಮಾರ್, ಮಾತೃಶ್ರೀ ಸಂಸ್ಥೆ ಅಧ್ಯಕ್ಷರಾದ ಕಿರಣ್ ಎ.ಎಲ್. ಕಲಿಕಾಸಕ್ತಿ ಕುರಿತಂತೆ ಮಾತನಾಡಿದರು. ವಿದ್ಯಾರ್ಥಿ ನವೀತಾ ಸ್ವಾಗತಿಸಿ, ಮಾತೃಶ್ರೀ ಸಂಸ್ಥೆ ಲಕ್ಷ್ಮೀ ಪಿ. ನಿರೂಪಿಸಿದರು. ಉಪನ್ಯಾಸಕರಾದ ಡಾ. ಅಜ್ಜಯ್ಯ ವಂದಿಸಿದರು.

* ವಿದ್ಯಾರ್ಥಿಗೆ ಗುರು, ಗುರಿ ಇರಬೇಕು ವಿದ್ಯಾರ್ಥಿಗಳಿಗೆ ಹಿಂದೆ ಗುರು, ಮುಂದೆ ಗುರಿ ಇರಬೇಕೆಂಬಂತೆ ವಿದ್ಯಾರ್ಥಿ ಜೀವನವಿರಬೇಕು. ಆಗ ಯಾವುದೇ ದುಶ್ಚಟಗಳಿಗೆ ಬಲಿಯಾಗುವುದಿಲ್ಲ. ಮದ್ಯ, ಧೂಮಪಾನ, ಮಾದಕ ವಸ್ತುಗಳ ಸೇವೆನೆಯಷ್ಟೇ ದುಶ್ಚಟವಲ್ಲ, ಅನಾವಶ್ಯಕ ಮೊಬೈಲ್ ಬಳಕೆ, ಸುಳ್ಳು ಹೇಳುವುದು, ಪೋಷಕರು ನೀಗಿಸದೇ ಇರುವಂತಹ ದುಬಾರಿ ವಸ್ತುಗಳು ಬೇಕೆಂದು ಒತ್ತಾಯ ಮಾಡುವುದು, ಇವೆಲ್ಲವೂ ಮಕ್ಕಳಿಂದ ದೂರವಾಗಿ ಪೋಷಕರ ಅಪೇಕ್ಷೆಗೆ ಅನುಗುಣವಾಗಿ ನಡೆದುಕೊಂಡು ಚನ್ನಾಗಿ ಓದುವ ಮೂಲಕ ತಂದೆ, ತಾಯಿಯ ಋಣ ತೀರಿಸಬೇಕೆಂದು ಶಪಥ ಮಾಡಬೇಕೆಂದು ವಿದ್ಯಾರ್ಥಿಗಳಿಗೆ ತಿಳಿಸಿದರು.