ಸಾರಾಂಶ
- ಪಿ.ಜೆ.ಬಡಾವಣೆ ಸೇಂಟ್ ಪಾಲ್ಸ್ ಪದವಿಪೂರ್ವ ಕಾಲೇಜಿನಲ್ಲಿ ವಿಜ್ಞಾನ- ವಾಣಿಜ್ಯ ವಸ್ತು ಪ್ರದರ್ಶನಕ್ಕೆ ಚಾಲನೆ
- - - ಕನ್ನಡಪ್ರಭ ವಾರ್ತೆ ದಾವಣಗೆರೆವಿಜ್ಞಾನ, ವಾಣಿಜ್ಯ ಕ್ಷೇತ್ರದಲ್ಲಿ ಇಂದು ಬಹಳಷ್ಟು ಬದಲಾವಣೆಗಳಾಗುತ್ತಿವೆ. ಅದಕ್ಕೆ ತಕ್ಕಂತೆ ವಿದ್ಯಾರ್ಥಿಗಳು, ಯುವಜನತೆ ಅಪ್‌ಡೇಟ್ ಆಗಬೇಕಿದೆ ಎಂದು ಹರಿಹರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಜೀವಶಾಸ್ತ್ರ ವಿಭಾಗದ ಉಪನ್ಯಾಸಕ ಮಹಮದ್ ನಸ್ರುಲ್ಲ ಹೇಳಿದರು.
ನಗರದ ಪಿ.ಜೆ. ಬಡಾವಣೆಯ ಸೇಂಟ್ ಪಾಲ್ಸ್ ಪಪೂ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ವಿಕಸಿತ ಭಾರತ- 2047ರ ವಿಜ್ಞಾನ, ವಾಣಿಜ್ಯ ವಸ್ತು ಪ್ರದರ್ಶನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.ಪ್ರತಿಭೆ ಅನಾವರಣಗೊಳಿಸಲು ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಗೈಡ್‌ನಂತೆ ನಿಂತರೆ ಸಾಕು. ಅವರು ಪ್ರತಿಭೆ ಮೆರೆಯುತ್ತಾರೆ. ಮಕ್ಕಳ ಪ್ರತಿಭೆ ಅನಾವರಣಕ್ಕೆ ಶಿಕ್ಷಕರ, ಉಪನ್ಯಾಸಕರ ಪಾತ್ರ ಬಹಳ ಮುಖ್ಯ. ವಿಕಸಿತ ಭಾರತ್- 2047 ಥೀಂ ಪ್ರದರ್ಶನದ ಯಶಸ್ವಿಗೆ ಕಾಲೇಜಿನ ಆಡಳಿತ, ವ್ಯವಸ್ಥಾಪಕರು, ಪ್ರಾಚಾರ್ಯರು, ಉಪನ್ಯಾಸಕರು ಕಾರಣರಾಗಿದ್ದಾರೆ. ನೀವು ಎಂಜಿನಿಯರ್, ಡಾಕ್ಟರ್ ಆಗಬೇಕೆಂದೇನೂ ಇಲ್ಲ. ನಿಮ್ಮಲ್ಲಿ ಹೊಸ ಆವಿಷ್ಕಾರದ ಕಲ್ಪನೆ ಇದ್ದರೆ ಪ್ರಪಂಚದಲ್ಲಿಯೇ ದೊಡ್ಡ ವ್ಯಕ್ತಿಯಾಗಲು ಸಾಧ್ಯ. ಹೊಸ ಹೊಸ ಆವಿಷ್ಕಾರ ಕೈಗೊಳ್ಳಲು ಪ್ರಯತ್ನಿಸಬೇಕು. ಇನ್ನೊಬ್ಬರ ಕೈಕೆಳಗೆ ಕೆಲಸ ಮಾಡದೇ. ನೀವು ಇನ್ನೊಬ್ಬರಿಗೆ ಕೆಲಸ ಕೊಡುವಂಥವರಾಗಬೇಕು ಎಂದು ಸಲಹೆ ನೀಡಿದರು.
ಸರ್ಕಾರಿ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಕೆ.ಎ.ಬಾಬು ಮಾತನಾಡಿ, ವಾಣಿಜ್ಯ- ವಿಜ್ಞಾನ ಪ್ರದರ್ಶನಗಳು ನಡೆಯುವುದು ವಿರಳ. ವಾಣಿಜ್ಯ, ವಿಜ್ಞಾನ ಕ್ಷೇತ್ರದಲ್ಲಿ ಏನು ಬದಲಾವಣೆ ಆಗಬೇಕು ಎಂಬುದನ್ನು ಇಲ್ಲಿ ವಿದ್ಯಾರ್ಥಿಗಳು ಉಪನ್ಯಾಸಕರ ಸಹಾಯದಿಂದ ಪ್ರದರ್ಶಿಸಿದ್ದಾರೆ. ವಾಣಿಜ್ಯ ಕ್ಷೇತ್ರ, ವಿಜ್ಞಾನ ಕ್ಷೇತ್ರದ ವಿದ್ಯಾರ್ಥಿಗಳಿಗೆ ಅವರದೇ ಆದ ಬೆಲೆ ಇದೆ. ಪದವಿ ಪಡೆದು ಕಂಪನಿಗಳಲ್ಲಿ ಕೆಲಸ ಮಾಡುವ ಯೋಚನೆ ಬಿಟ್ಟು ವಿಜ್ಞಾನಿಗಳಾಗಿ ಹೊಸ ಹೊಸ ಆವಿಷ್ಕಾರಗಳನ್ನು ನಡೆಸಬೇಕು ಎಂದರು.ವಿಜ್ಞಾನ, ವಾಣಿಜ್ಯ ವಸ್ತು ಪ್ರದರ್ಶನವನ್ನು ಕಾಲೇಜಿನ ಆಡಳಿತಾಧಿಕಾರಿ ಸಿಸ್ಟರ್ ಮೆಟಿಲ್ಡಾ ಉದ್ಘಾಟಿಸಿದರು. ಕಾಲೇಜು ವಿದ್ಯಾರ್ಥಿನಿಯರು ಸುಮಾರು 105 ಮಾಡೆಲ್‌ಗಳನ್ನು ಪ್ರದರ್ಶನದಲ್ಲಿ ಇರಿಸಿದ್ದರು. ಸಿಸ್ಟರ್ ವೆನೀಸಾ, ನಿರ್ಮಲ, ವೈಲೆಟ್ ಕುಮಾರಿ. ಪ್ರಾಚಾರ್ಯ ಕೆ.ಟಿ.ಮೇಘನಾಥ್, ಉಪನ್ಯಾಸಕ ವಿಶ್ವನಾಥ್, ವಿವಿಧ ವಿಭಾಗಗಳ ಉಪನ್ಯಾಸಕರು, ಇತರರು ಇದ್ದರು.
- - -ಕೋಟ್ ದೇಶದ ಬೆಳವಣಿಗೆಗೆ ವಿಜ್ಞಾನ, ವಾಣಿಜ್ಯದ ಅವಶ್ಯಕ ಇದೆ. ಗ್ರಾಹಕರಿಗೆ ಏನು ಬೇಕು ಅನ್ನುವುದು ವಾಣಿಜ್ಯ ಮಾಡುತ್ತದೆ. ಅದನ್ನು ವಿಜ್ಞಾನ ರೆಡಿ ಮಾಡುತ್ತದೆ. ಪ್ರಪಂಚದಲ್ಲಿ ಅತಿ ಹೆಚ್ಚು ಪದವೀಧರ ಯುವಕರು ಇರುವುದು ಭಾರತದಲ್ಲಿ ಮಾತ್ರ. ನಾವು ಹೊರ ದೇಶದಿಂದ ಆಮದು ಮಾಡಿಕೊಳ್ಳುವವರಾಗದೇ ರಫ್ತು ಮಾಡುವಂತಾಗಬೇಕು
- ಡಾ. ಕೆ.ಎ.ಬಾಬು, ಸಹಾಯಕ ಪ್ರಾಧ್ಯಾಪಕ- - - -1ಕೆಡಿವಿಜಿ36, 37ಃ:
ದಾವಣಗೆರೆಯ ಸೆಂಟ್ ಪಾಲ್ಸ್ ಕಾಲೇಜಿನಲ್ಲಿ ನಡೆದ ವಿಜ್ಞಾನ, ವಾಣಿಜ್ಯ ಪ್ರದರ್ಶನವನ್ನು ಸಿಸ್ಟರ್ ಮೆಟಿಲ್ಡಾ ಉದ್ಘಾಟಿಸಿದರು.