ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸ್ಟಿಂಗ್ ಆಪರೇಷನ್ ಮಾಡಿಸಿದ್ದಾರೆ ಎಂದು ಆರೋಪಿಸಿ ದಾವಣಗೆರೆ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಇಲ್ಲಿನ ರಾಂ ಅಂಡ್ ಕೋ ಸರ್ಕಲ್ನಲ್ಲಿ ಪ್ರತಿಭಟನೆ ನಡೆಸಲಾಯಿತು.
- ಸಿದ್ದರಾಮಯ್ಯ ತೇಜೋವಧೆ ಪಿತೂರಿ ವಿರುದ್ಧ ಕ್ರಮಕ್ಕೆ ದಿನೇಶ್ ಶೆಟ್ಟಿ ಒತ್ತಾಯ
- - -ದಾವಣಗೆರೆ: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸ್ಟಿಂಗ್ ಆಪರೇಷನ್ ಮಾಡಿಸಿದ್ದಾರೆ ಎಂದು ಆರೋಪಿಸಿ ದಾವಣಗೆರೆ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಇಲ್ಲಿನ ರಾಂ ಅಂಡ್ ಕೋ ಸರ್ಕಲ್ನಲ್ಲಿ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಕೆಪಿಸಿಸಿ ರಾಜ್ಯ ವಕ್ತಾರ ದಿನೇಶ್ ಕೆ. ಶೆಟ್ಟಿ ಮಾತನಾಡಿ, 2011 ರಲ್ಲಿ ಸಿದ್ದರಾಮಯ್ಯ ಅವರ ವಿರುದ್ಧ ಸೃಷ್ಟಿಸಲಾಗಿದ್ದ ನಕಲಿ ಲೈಂಗಿಕ ದೌರ್ಜನ್ಯದ ಸ್ಟಿಂಗ್ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸ್ ಕಮಿಷನರ್ ಮಾಹಿತಿ ನೀಡಿದ್ದಾರೆ. ಈ ವಿಡಿಯೋಗೆ ಬಳಸಲಾದ ಫೋನ್ ಅನ್ನು ದೆಹಲಿಯಲ್ಲಿ ರಿತೇಶ್ ಪಾಂಡೆ ಮತ್ತು ವಿನೋದ್ ಶರ್ಮಾ ಖರೀದಿಸಿದ್ದರು. ವಿಚಾರಣೆಯ ವೇಳೆ, ಈ ಫೋನ್ ಅನ್ನು ಕುಮಾರಸ್ವಾಮಿ ಅವರ ದೆಹಲಿ ನಿವಾಸದಲ್ಲಿ ಪ್ರಜ್ವಲ್ ಪ್ರಸಾದ್ ಎಂಬವರಿಗೆ ಹಸ್ತಾಂತರಿಸಲಾಗಿತ್ತು ಎಂದು ತಿಳಿಸಿದ್ದಾರೆ.ಕುಮಾರಸ್ವಾಮಿ ಅವರ ಸೋಶಿಯಲ್ ಮೀಡಿಯಾ ವಿಭಾಗದವರೇ ಈ ವಿಡಿಯೋ ಹರಡಿದ್ದಾರೆ ಎಂಬುದು ತನಿಖೆಯಿಂದ ಸ್ಪಷ್ಟವಾಗುತ್ತಿದೆ. ಸಿದ್ದರಾಮಯ್ಯ ಅವರನ್ನು ತೇಜೋವಧೆ ಮಾಡಲು ಪಿತೂರಿ ನಡೆಸಿರುವ ಕುಮಾರಸ್ವಾಮಿ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ದಾವಣಗೆರೆ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾ ಬಾಯಿ ಮಾಲತೇಶ್ ಮಾತನಾಡಿ, ಸರ್ಕಾರವು ಕಾನೂನಿನ ಚೌಕಟ್ಟಿನಲ್ಲೇ ನಿಷ್ಪಕ್ಷಪಾತ ತನಿಖೆ ನಡೆಸಿದ್ದು, ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುವುದನ್ನು ಸಹಿಸಲಾಗದೆ, ಕುಮಾರಸ್ವಾಮಿ ಅವರೇ ಈ ಸ್ಟಿಂಗ್ ಆಪರೇಷನ್ ಪಿತೂರಿಯನ್ನು ನೂರಕ್ಕೆ ನೂರರಷ್ಟು ಮಾಡಿಸಿದ್ದಾರೆ ಎಂದು ಆರೋಪಿಸಿದರು.ಈ ಸಂದರ್ಭ ದೂಡಾ ಸದಸ್ಯೆ ವಾಣಿ ಬಕ್ಕೇಶ್, ಮಂಜಮ್ಮ ಹನುಮಂತಪ್ಪ, ರಾಜೇಶ್ವರಿ, ದಾಕ್ಷಾಯಣಮ್ಮ, ಉಮಾ ಕುಮಾರ್, ಸಲ್ಮಾ, ಕಾವೇರಿರಾಜ್, ಶುಭ ಮಂಗಳ, ಸಂಗೀತ, ಪ್ರಕಾಶ್, ಉಮಾ ಕುಮಾರ್, ಸಲ್ಮಾ ಬಾನು, ಪುಷ್ಪಾ, ಸಮಿಕಾ ಲೋಕೇಶ್, ಮಂಜಮ್ಮ, ದ್ರಾಕ್ಷಾಯಿಣಿಮ್ಮ, ರಾಜೇಶ್ವರಿ, ಸುಧಾ, ನಂದೀಶ್, ಮಂಜುಳಾ, ಜಯಶ್ರೀ, ಶುಭಮಂಗಳ, ಪುಷ್ಪಾ, ಎ.ನಾಗರಾಜ್, ಜಯಣ್ಣ, ಮುಜಾಹಿದ್, ಕಾವೇರಿ ರಾಜು, ಮಂಗಳಮ್ಮ ಮತ್ತಿತರರಿದ್ದರು.
- - --2ಕೆಡಿವಿಜಿ:
ದಾವಣಗೆರೆಯಲ್ಲಿಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಸ್ಟಿಂಗ್ ವಿಡಿಯೋ ರೂವಾರಿ ಎಚ್.ಡಿ. ಕುಮಾರಸ್ವಾಮಿ ಬಂಧನಕ್ಕೆ ಅಗ್ರಹಿಸಿ ಪ್ರತಿಭಟನೆ ನಡೆಸಿದರು.