ರೈತರಿಗೆ ಬೇಕಾದ ಬೀಜ ಗೊಬ್ಬರ ದಾಸ್ತಾನು

| Published : Sep 29 2024, 01:54 AM IST

ಸಾರಾಂಶ

ರೈತರು ಆಧುನಿಕ ಮಾದರಿಯ ತಾಂತ್ರಿಕತೆಗೆ ಆದ್ಯತೆ ನೀಡಲು ಮುಂದಾಗಬೇಕು

ಡಂಬಳ: ಹಿಂಗಾರು ಹಂಗಾಮಿನ ಬಿತ್ತನೆಗಾಗಿ ಬೀಜಗೊಬ್ಬರದ ಕೊರತೆಯಾಗದಂತೆ ದಾಸ್ತಾನು ಮಾಡಲಾಗಿದ್ದು, ರೈತರು ಸದುಪಯೋಗ ಪಡೆದುಕೊಳ್ಳಬೇಕು ಎಂದು ರೋಣ ಶಾಸಕ ಜಿ.ಎಸ್. ಪಾಟೀಲ್ ಹೇಳಿದರು.

ಡಂಬಳ ಗ್ರಾಮದ ರೈತ ಸಂಪರ್ಕ ಕೇಂದ್ರದಲ್ಲಿ ಶನಿವಾರ ಹಿಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರೈತರು ಆಧುನಿಕ ಮಾದರಿಯ ತಾಂತ್ರಿಕತೆಗೆ ಆದ್ಯತೆ ನೀಡಲು ಮುಂದಾಗಬೇಕು. ಡಂಬಳ ಗ್ರಾಮದ ಎಪಿಎಂಸಿ ಅಭಿವೃದ್ಧಿಯ ಜತೆಗೆ ಇಲ್ಲಿಯೆ ರೈತರ ಬೆಳೆದ ಬೆಳೆ ಖರೀದಿಸುವ ಕೇಂದ್ರವಾಗಬೇಕು. ಈ ಹಿನ್ನಲೆ ₹ 5 ಕೋಟಿ ಅನುದಾನ ಹಾಕಲಾಗಿದೆ. ಡಂಬಳ ಸೇರಿದಂತೆ ವಿವಿಧ ಗ್ರಾಮದಲ್ಲಿರುವ ರಸ್ತೆ ಅಭಿವೃದ್ಧಿಗೆ ಶೀಘ್ರ ಮುಂದಾಗುತ್ತೇನೆ ಎಂದರು.

ಕೃಷಿ ಉಪನಿರ್ದೇಶಕಿ ಸ್ಪರ್ತಿ ಜಿ.ಎಸ್ ಮಾತನಾಡಿ, 2024-25ನೇ ಸಾಲಿನಲ್ಲಿ ಒಟ್ಟು 620 ಕ್ವಿಂಟಲ್‌ ಬೀಜಗಳ ಸಂಗ್ರಹ ಮಾಡಲಾಗಿದೆ. ಪ್ರತಿ ರೈತರಿಗೆ 5 ಎಕರೆವರೆಗೆ ಬೀಜ ವಿತರಿಸಲಾಗುವುದು. ಸರ್ಕಾರದಿಂದ ಬೀಜಗಳ ಗುಣಮಟ್ಟದ ಪರಿಶೀಲನೆ ಮಾಡಲಾಗಿದೆ. ರೈತರು ಬಿತ್ತನೆ ಮಾಡುವಾಗ ಬೀಜೋಪಚಾರ ಮಾಡಿಯೆ ಬಿತ್ತನೆ ಮಾಡಬೇಕೆಂದು ಹೇಳಿದರು.

ತಹಸೀಲ್ದಾರ್‌ ಎರಿಸ್ವಾಮಿ ಪಿ.ಎಸ್ ಮಾತನಾಡಿ, ದೇಶದ ಬೆನ್ನಲುಬಾದ ರೈತರು ಪಾಶ್ಚಾತ್ಯ ಬೀಜಗಳಿಗೆ ಆದ್ಯತೆ ನೀಡದೆ ರೈತರು ಗುಣಮಟ್ಟದ ಬಿತ್ತನೆ ಬೀಜ ಆಯ್ಕೆ ಮಾಡಿಕೊಳ್ಳಬೇಕು. ಸರ್ಕಾರದಿಂದ ವಿತರಿಸುವ ಪ್ರಮಾಣಿಕೃತ ಮಾನ್ಯತೆ ಪಡೆದ ಉತ್ತಮ ಗುಣಮಟ್ಟದ ಬೀಜ ಖರೀದಿಸಿ ಬಿತ್ತನೆ ಮಾಡಿದರೆ ಉತ್ತಮ ಇಳುವರಿ ಪಡೆಯಲು ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಗೋಣಿಬಸಪ್ಪ ಕೋರ್ಲಹಳ್ಳಿ, ವಿ.ಎಸ್. ಯರಾಶಿ, ಬಸುರಡ್ಡಿ ಬಂಡಿಹಾಳ, ಮಹೇಶ ಗಡಗಿ, ಇಒ ವಿಶ್ವನಾಥ ಹೊಸಮನಿ, ಜಾಕೀರ್‌ ಮೂಲಿಮನಿ, ಬಸವರಾಜ ಪೂಜಾರ, ಮಾರುತಿ ಹೊಂಬಳ, ಕಾಶಣ್ಣ ಹೊನ್ನುರ, ಕಾಶಪ್ಪ ಅಳವುಂಡಿ, ಪುಲಕೇಶಗೌಡ ಪಾಟೀಲ್, ಸುರೇಶ ಮೇಗಲಮನಿ, ಹಾಲಪ್ಪ ಹರ್ತಿ, ಕುಬೇರ ನಾಯಕ, ಧರ್ಮಸಿಂಗ್‌, ಬಾಬು ಮೂಲಿಮನಿ, ಕುಬೇರಪ್ಪ ಕೊಳ್ಳಾರ, ನಾಗೇಶಭಟ್ಟ ಧರ್ಮಾದಿಕಾರಿ, ಶಾಹಿಲ್ ಜಿಗಳೂರ, ಸಹಾಯಕ ಕೃಷಿ ನಿರ್ದೇಶಕ ಪ್ರಾಣೇಶ, ರೈತ ಸಂಪರ್ಕ ಕೇಂದ್ರದ ಮುಖ್ಯಸ್ಥ ಎಸ್.ಬಿ. ರಾಮೇನಳ್ಳಿ, ತಾಲೂಕು ತಾಂತ್ರಿಕ ಸಹಾಯಕ ಗೌರಿಶಂಕರ ಸಜ್ಜನ, ಕೃಷಿ ಅಧಿಕಾರಿ ಶಿವಮೂರ್ತಿ ನಾಯಕ, ಹನಮಂತಪ್ಪ, ರಾಜೇಶ ಪೂಜಾರ, ಎನ್.ಬಿ. ಹೊಸಳ್ಳಿ, ಡಿ.ಡಿ. ಸೊರಟೂರ, ಅಕ್ಕಮಹಾದೇವಿ ಸೇರಿದಂತೆ ರೈತರು, ರೈತ ಮಹಿಳೆಯರು ಇದ್ದರು.