ಸುಳ್ಳು ಆರೋಪ ಮಾಡುವುದನ್ನು ಬಿಟ್ಟು ಅಭಿವೃದ್ಧಿಗೆ ಸಹಕರಿಸಿ

| Published : Aug 31 2024, 01:42 AM IST

ಸುಳ್ಳು ಆರೋಪ ಮಾಡುವುದನ್ನು ಬಿಟ್ಟು ಅಭಿವೃದ್ಧಿಗೆ ಸಹಕರಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ನೀವು ಒಳ ಒಪ್ಪಂದ ಮಾಡಿಕೊಂಡು ಗಿಮಿಕ್ ರಾಜಕೀಯ ಮಾಡಿದಿರಿ, ನಿಮ್ಮ ಪಕ್ಷದ ಮತ್ತೊಬ್ಬರು ಇಲ್ಲಿಗೆ ಬರುತ್ತಿದ್ದಾರೆ ಎಂಬುದನ್ನು ಅರಿತು ನಾವು ಬದುಕಿದ್ದೇವೆ ಎಂಬುದನ್ನು ತೋರಿಸಿಕೊಳ್ಳಲು ಈ ರೀತಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದೀರ.ಸುಳ್ಳು ಆರೋಪವನ್ನು ಮಾಡಬೇಡಿ. ನಮ್ಮ ಸದಸ್ಯರು ನಿಮ್ಮ ಹೇಳಿಕೆ ವಿರುದ್ಧ ಕಾನೂನು ಹೋರಾಟಕ್ಕೆ ಹೊರಟರೆ ನಿಮ್ಮ ಪರಿಸ್ಥಿತಿ ಏನಾಗುತ್ತದೆ, ಬಸವರಾಜ್‌ರವರೇ ಹುಷಾರ್ ಇದು ಲಾಸ್ಟ್ ವಾರ್ನಿಂಗ್. ನೀವು ಹಿರಿಯರು ಮಾರ್ಗದರ್ಶನವನ್ನು ಕೊಡಿ ನಾನು ಸ್ವಾಗತಿಸುತ್ತೇನೆ ಎಂದು ಸಮಿವುಲ್ಲಾ ಎಚ್ಚರಿಕೆ ನೀಡಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಆರೋಪ ಸತ್ಯಕ್ಕೆ ಹತ್ತಿರವಾಗಿರಬೇಕು. ಬಾಯಿಗೆ ಬಂದಂತೆ ಆರೋಪ ಮಾಡುವುದಲ್ಲ. ನಮ್ಮ ಯಾವ ಸದಸ್ಯರು ಹಣ ಪಡೆದು ನನ್ನನ್ನು ಚನಾಯಿಸಿಲ್ಲ. ಈ ಹಿಂದೆ ನಾನು ಮಾಡಿರುವ ಜನಸೇವೆಗಾಗಿ ಆಯ್ಕೆ ಮಾಡಿದ್ದಾರೆ ಎಂದು ನಗರಸಭೆ ನೂತನ ಅಧ್ಯಕ್ಷ ಸಮಿವುಲ್ಲಾ ಹೇಳಿದರು ಹೇಳಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೋಪ ಮಾಡುವಾಗ ವಿವಿಧ ರೀತಿಯಲ್ಲಿ ಹೇಳುತ್ತೀರಿ. ಹಣ ಕೊಟ್ಟು ಮತ ಪಡೆದಿದ್ದಾರೆ ಎನ್ನುತ್ತೀರಿ. ಇನ್ನೊಮ್ಮೆ ಉತ್ತಮ ಕಾರ್ಯವನ್ನು ಮಾಡಲಿ ಎಂದು ಆಶಿಸುತ್ತೀರಿ ನಿಮ್ಮ ಆಸೆಯಂತೆ ಉತ್ತಮ ಕಾರ್ಯವನ್ನು ಮಾಡುತ್ತೇನೆ. ಸಲಹೆ ಸಹಕಾರ ಕೊಡಿ. ಸುಳ್ಳು ಆರೋಪ ಮಾಡಬೇಡಿ. ನಿಮ್ಮ ನೈತಿಕತೆ ಏನು ಎಂಬುದನ್ನು ಜನತೆ ನೋಡಿದ್ದಾರೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ನಿಮ್ಮ ಬಗ್ಗೆ ಹೆಚ್ಚು ಗೌರವ ನೀಡಿ ಸಂಪುಟ ದರ್ಜೆಯ ರಾಜ್ಯಮಟ್ಟದ ಸ್ಥಾನವನ್ನು ನಿಮಗೆ ಕೊಟ್ಟಿದ್ದರು. ಎ ಸಿ ಕಾರಿನಲ್ಲಿ ಓಡಾಡಿದಿರಿ.ಒಮ್ಮೆಯಾದರೂ ನಗರಸಭೆಯ ಸಭೆಗೆ ಬಂದು ಸಲಹೆ ಸೂಚನೆಗಳನ್ನು ನೀಡಿದ್ದೀರ? ನಿಮ್ಮ ಸಮಾಜ ಬಹಳ ಪ್ರಬಲವಾದ ಸಮಾಜ, ಎಷ್ಟೊಂದು ಜನ ಶಾಸಕರುಗಳಾಗಿ, ಸೇವೆ ಸಲ್ಲಿಸಿದ್ದಾರೆ. ನೀವು ಚುನಾವಣೆಯಲ್ಲಿ ನಗರಸಭೆಯ ನಮ್ಮ ಸದಸ್ಯರು ಪಡೆಯುವ ಮತಗಳಷ್ಟನ್ನು ಸಹ ಪಡೆಯಲಿಲ್ಲ, ನೀವು ಒಳ ಒಪ್ಪಂದ ಮಾಡಿಕೊಂಡು ಗಿಮಿಕ್ ರಾಜಕೀಯ ಮಾಡಿದಿರಿ, ನಿಮ್ಮ ಪಕ್ಷದ ಮತ್ತೊಬ್ಬರು ಇಲ್ಲಿಗೆ ಬರುತ್ತಿದ್ದಾರೆ ಎಂಬುದನ್ನು ಅರಿತು ನಾವು ಬದುಕಿದ್ದೇವೆ ಎಂಬುದನ್ನು ತೋರಿಸಿಕೊಳ್ಳಲು ಈ ರೀತಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದೀರ.ಸುಳ್ಳು ಆರೋಪವನ್ನು ಮಾಡಬೇಡಿ. ನಮ್ಮ ಸದಸ್ಯರು ನಿಮ್ಮ ಹೇಳಿಕೆ ವಿರುದ್ಧ ಕಾನೂನು ಹೋರಾಟಕ್ಕೆ ಹೊರಟರೆ ನಿಮ್ಮ ಪರಿಸ್ಥಿತಿ ಏನಾಗುತ್ತದೆ, ಬಸವರಾಜ್‌ರವರೇ ಹುಷಾರ್ ಇದು ಲಾಸ್ಟ್ ವಾರ್ನಿಂಗ್. ನೀವು ಹಿರಿಯರು ಮಾರ್ಗದರ್ಶನವನ್ನು ಕೊಡಿ ನಾನು ಸ್ವಾಗತಿಸುತ್ತೇನೆ ಎಂದು ಸಮಿವುಲ್ಲಾ ಎಚ್ಚರಿಕೆ ನೀಡಿದರು. ಜೆಡಿಎಸ್ ನಾಯಕರೊಂದಿಗೆ ನಿಮ್ಮ ಸಂಬಂಧ ಹೇಗಿದೆ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಜೆಡಿಎಸ್ ಜಿಲ್ಲಾಧ್ಯಕ್ಷರೊಂದಿಗೆ ಒಳ್ಳೆಯ ಒಡನಾಟವಿದೆ. ಅವರ ಸಲಹೆ ಮಾರ್ಗದರ್ಶನವನ್ನು ಸಹ ನಗರ ಅಭಿವೃದ್ಧಿಗೆ ಬಳಸಿಕೊಳ್ಳುತ್ತೇವೆ. ಅವರ ಮನೆ ಸಮಾರಂಭಕ್ಕೆ ಹೋಗಿ ಪಾಲ್ಗೊಂಡು ಬಂದಿದ್ದೇನೆ. ನಾವು ಜೆಡಿಎಸ್ ಪಕ್ಷದಿಂದ ಗೆದ್ದು ಬಂದಿರುವವರು, ಬಿಜೆಪಿ ಕಾಂಗ್ರೆಸ್ ಸದಸ್ಯರುಗಳೊಂದಿಗೆ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಶಾಸಕರು ಹಾಗೂ ಸಂಸದರ ಮಾರ್ಗದರ್ಶನ ಮತ್ತು ಸಹಕಾರದೊಂದಿಗೆ ನಗರದ ಸರ್ವತೋಮುಖ ಅಭಿವೃದ್ಧಿಗೆ ನಾವು ಶ್ರಮಿಸುತ್ತೇವೆ ಎಂದರು.

24 ಗಂಟೆಯಲ್ಲಿ ಇ-ಖಾತೆ: ಇ- ಖಾತೆ ಮಾಡಿಸಲು ಅರ್ಜಿ ಕೊಟ್ಟ 24 ಗಂಟೆಗಳಲ್ಲಿ ಈ ಖಾತೆಯನ್ನು ಮಾಡಿಕೊಡಲಾಗುತ್ತದೆ. ಅವರಿಗೆ ಮೊದಲು ಈ ಖಾತಾದ ಒಂದು ಪ್ರತಿಯನ್ನು ಕೊಡಲಾಗುತ್ತದೆ ಅವರು ಅದನ್ನು ತೆಗೆದುಕೊಂಡು ಹೋಗಿ ಪರಿಶೀಲಿಸಿಕೊಂಡು ಮರುದಿನ ಬೆಳಗ್ಗೆ 11 ಗಂಟೆಗೆ ಕಚೇರಿಗೆ ಬಂದು ಏನಾದರೂ ತಿದ್ದುಪಡಿ ಇದ್ದಲ್ಲಿ ತಿದ್ದುಪಡಿ ಮಾಡಿಸಿಕೊಳ್ಳಬಹುದು. ಇಲ್ಲವೇ ಎಲ್ಲವೂ ಸರಿಯಾಗಿದೆ ಎಂದರೆ ಈ ಖಾತೆಯನ್ನು ಅವರಿಗೆ ಆಗಲೇ ಮಾಡಿಕೊಡಲಾಗುತ್ತದೆ ಎಂದು ಹೇಳಿದರು. ಈಗಾಗಲೇ 35 ಈ ಖಾತಗಳನ್ನು ಮಾಡಿಕೊಡಲಾಗಿದೆ ಎಂದು ಮಾಹಿತಿ ನೀಡಿದರು.

ಸುಳ್ಳು ಆರೋಪವನ್ನು ಹೀಗೆ ಮಾಡುತ್ತಿದ್ದರೆ ಮಾನನಷ್ಟ ಮಕದ್ದಮೆಯನ್ನು ಹಾಕಬೇಕಾದೀತು, ಅವರು ಜೇನುಕಲ್ ಬೆಟ್ಟಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಜೆಡಿಎಸ್ ಸದಸ್ಯೆ ಅನ್ನಪೂರ್ಣ ಜಿ ವಿ ಬಸವರಾಜ್ ಕುರಿತು ಹೇಳಿದರು. ನಾನು ಸಹ 2 ಬಾರಿ ಸದಸ್ಯೆಯಾಗಿ ಬಂದಿದ್ದೇನೆ. ಸಮಿವುಲ್ಲಾ ಅವರ ಕಾರ್ಯದಕ್ಷತೆಯನ್ನು ಮನಗಂಡು ನಾವು ಒಮ್ಮತದಿಂದ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದೇವೆ, ನಮಗೂ ಸ್ವಾಭಿಮಾನವಿದೆ. ನಮ್ಮ ಗೌರವವನ್ನು ಮಾರಿಕೊಳ್ಳಲು ಯಾವ ಸದಸ್ಯರೂ ಸಿದ್ಧರಿಲ್ಲ ಎಲ್ಲಾ ಸದಸ್ಯರು ಶ್ರೀಮಂತರಲ್ಲ ಆದರೆ ಸ್ವಾಭಿಮಾನಿಗಳು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಸದಸ್ಯರು ಮತ್ತು ಉಪಾಧ್ಯಕ್ಷ, ಮನೋಹರ್ ಮತ್ತು ಸದಸ್ಯರು ಉಪಸ್ಥಿತರಿದ್ದರು.

*ಹೇಳಿಕೆ 1

ನಾನೂ ಅಧ್ಯಕ್ಷನಾಗಿದ್ದೆ, ಸದಸ್ಯರುಗಳಿಗೆ 5 ಲಕ್ಷ ರು. ಹಂಚಲು ಯಾವ ಹಣ ಬರುತ್ತದೆ ನನಗೆ ಗೊತ್ತಿಲ್ಲ. ಅದನ್ನು ಬಸವರಾಜರವರೇ ಹೇಳಬೇಕು. ಇಂತಹ ಹುಸಿ ಹೇಳಿಕೆಗಳನ್ನು ಕೊಡಬಾರದು.ಇದೇ ರೀತಿ ಹೇಳಿಕೆಗಳು ಮುಂದುವರಿದರೆ ನಾವು ಕಾನೂನಿನ ಮೊರೆ ಹೋಗಬೇಕಾಗುತ್ತದೆ. - ಗಣೇಶ್‌, ನಗರಸಭೆ ಮಾಜಿ ಅಧ್ಯಕ್ಷ

*ಹೇಳಿಕೆ 2

ಬಸವರಾಜು ಅವರು ಸುಳ್ಳು ಆರೋಪ ಮಾಡಬಾರದು. ಅವರು ಇದೇ ರೀತಿ ಮುಂದುವರಿಸಿದರೆ ನಾವು ಮಾನನಷ್ಟ ಮೊಕದ್ದಮೆ ಹೂಡಬೇಕಾಗುತ್ತದೆ.

- ಪ್ರೇಮ ಮಲ್ಲಿಕಾರ್ಜುನ್, ಸದಸ್ಯೆ