ಸಾರಾಂಶ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುದಿಢೀರ್ ಧರಣಿ, ಏಕ ವಚನದಲ್ಲಿ ವಾಕ್ ಸಮರ, ಅಸಂವಿಧಾನಿಕ ಪದಗಳ ಬಳಕೆ, ಕೈ ಕೈ ಮಿಲಾಸಿಯುವ ಹಂತಕ್ಕೆ ತಲುಪಿದ ಜಗಳ, ಸಮಾಧಾನಪಡಿಸಿದ ಸ್ಥಳೀಯರು.- ಇದು, ಸಾಮಾನ್ಯ ಜನರ ನಡುವೆ ನಡೆದ ಘಟನೆಯಾಗಿದ್ದರೆ ಜನರ ಕಣ್ಣಿಗೆ ಅಷ್ಟೇನೂ ಕಾಣುತ್ತಿರಲಿಲ್ಲ. ಚಿಕ್ಕಮಗಳೂರು ನಗರದ ಗೌರಿ ಕಾಲುವೆಯ 60 ಅಡಿ ರಸ್ತೆಯಲ್ಲಿರುವ ಸಹರಾ ಶಾದಿ ಮಹಲ್ ಬಳಿ ಸೋಮವಾರ ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಹಾಗೂ ಅವರದೇ ಬಿಜೆಪಿ ಪಕ್ಷದ ನಗರಸಭೆ ಸದಸ್ಯ ಮಧುಕುಮಾರ್ ರಾಜ್ ಅರಸ್ ನಡುವೆ ನಡೆದ ಬೀದಿ ಜಗಳದ ಮುಖ್ಯಾಂಶ.ವರಸಿದ್ಧಿ ವೇಣುಗೋಪಾಲ್ ಹಾಗೂ ಮಧುಕುಮಾರ್ ರಾಜ್ ಅರಸ್ ನಡುವೆ ಸುಮಾರು ಒಂದು ವರ್ಷದಿಂದ ಶೀತಲ ಸಮರ ನಡೆಯುತ್ತಿತ್ತು. ತೆರೆ ಮರೆಯಲ್ಲಿ ಬೈದಾಡುತ್ತಿದ್ದರು. ಸೋಮವಾರ ಈ ಇಬ್ಬರು ಮುಖಂಡರು ರಸ್ತೆಯಲ್ಲಿ ನಿಂತು ಜಗಳವಾಡುವ ಸಂದರ್ಭ ಬಂದಿತು. ಇದನ್ನು ಜನರು ಪುಕ್ಕಟೆ ಮನೋರಂಜನೆ ಅಂತೆ ನೋಡಿದರು.ಕಸ ವಿಂಗಡಣೆಗೆ ವಿರೋಧನಗರದ 29ನೇ ವಾರ್ಡ್‌ನಲ್ಲಿ ಕೆಲವು ವರ್ಷಗಳಿಂದ ಮನೆ ಮನೆ ಕಸವನ್ನು ವಿಂಗಡಣೆ ಮಾಡಲಾಗುತ್ತಿದೆ. ಇದರಿಂದಾಗಿ ಸುತ್ತಮುತ್ತಲಿನ ಪರಿಸರ ಹಾಳಾಗುತ್ತಿದೆ ಎಂಬುದು ಸ್ಥಳೀಯ ನಿವಾಸಿಗರ ಆರೋಪ. ತಮ್ಮದೆ ವಾರ್ಡ್‌ನಲ್ಲಿ ಈ ರೀತಿ ಯಲ್ಲಿ ಆಗುವುದಕ್ಕೆ ಇದೇ ವಾರ್ಡ್‌ನ ನಗರಸಭೆ ಸದಸ್ಯರಾದ, ಈಗಿನ ಉಪಾಧ್ಯಕ್ಷ ಅಮೃತೇಶ್ ಚನ್ನಕೇಶವ ವಿರೋಧ ವ್ಯಕ್ತಪಡಿಸಿದ್ದರು.ಇದೊಂದು ತಾತ್ಕಾಲಿಕ ವ್ಯವಸ್ಥೆ, ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವವರೆಗೆ ಸಹಕರಿಸುವಂತೆ ಹಿಂದಿನ ಶಾಸಕರು ಕೋರಿಕೊಂಡಿದ್ದರು ಎಂದು ಅಮೃತೇಶ್ ಚನ್ನಕೇಶವ ಹೇಳಿದ್ದಾರೆ.ಕಸ ವಿಂಗಣೆಯನ್ನು ಬೇರೆಡೆಗೆ ಸ್ಥಳಾಂತರ ಮಾಡದೆ, ಇದೇ ಜಾಗದಲ್ಲಿ ಶಾಶ್ವತವಾಗಿ ಕಸ ವಿಲೇವಾರಿ ಮಾಡಿಕೊಳ್ಳಲು ನಗರಸಭೆ ಸಿದ್ಧತೆ ಮಾಡಿಕೊಳ್ಳುವುದನ್ನು ಗಮನಕ್ಕೆ ಬರುತ್ತಿದ್ದಂತೆ ಅಮೃತೇಶ್ ಚನ್ನಕೇಶವ ನೇತೃತ್ವದಲ್ಲಿ ಸೋಮವಾರ ಕಾಮಗಾರಿ ಸ್ಥಳದಲ್ಲಿ ದಿಢೀರ್ ಪ್ರತಿಭಟನೆ ಆರಂಭಗೊಂಡಿತು. ಕಾಮಗಾರಿಯನ್ನು ಸ್ಥಗಿತಗೊಳಿಸುವವರೆಗೆ ಧರಣಿ ಮುಂದುವರೆಸಲಾಗುವುದು ಎಂದು ಹೇಳಿದರು.ಈ ಪ್ರತಿಭಟನೆಗೆ ಬೆಂಬಲ ಕೋರಿ ಬಿಜೆಪಿ ನಗರಸಭೆ ಸದಸ್ಯರಾದ ಮಧುಕುಮಾರ್ ರಾಜ್ ಅರಸ್ ಸೇರಿದಂತೆ ಇತರೆ ಸದಸ್ಯರು ಸ್ಥಳಕ್ಕೆ ಆಗಮಿಸಿದರು. ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಸಹ ಸ್ಥಳಕ್ಕೆ ಬಂದರು. ಆಗ ಮಧುಕುಮಾರ್ ರಾಜ್ ಅರಸ್ ಹಾಗೂ ವರಸಿದ್ದಿ ವೇಣುಗೋಪಾಲ್ ನಡುವೆ ನೇರ ಮಾತಿನ ಚಕಮಕಿ ನಡೆಯಿತು. ಕೈ ಕೈ ಮಿಲಾಯಿಸುವ ಹಂತಕ್ಕೆ ಪರಿಸ್ಥಿತಿ ತಲುಪಿತು. ಏಕವಚನದಲ್ಲೇ ಅಸಂವಿಧಾನಿಕ ಪದಗಳನ್ನು ಬಳಕೆ ಮಾಡಿದರು. ಈ ಕಿತ್ತಾಟವನ್ನು ನೋಡಿದ ಸ್ಥಳೀಯರು ಇಬ್ಬರನ್ನು ಸಮಾಧಾನಪಡಿಸಿದ ನಂತರ ಸ್ಥಳದಿಂದ ನಿರ್ಗಮಿಸಿದರು.---- ಬಾಕ್ಸ್------ನೀರಾವರಿ ಇಲಾಖೆ ಜಾಗದಲ್ಲಿ ನಗರಸಭೆ ಅಭಿವೃದ್ಧಿ ಕಾಮಗಾರಿ29ನೇ ವಾರ್ಡ್‌ನ ಈ ಪ್ರದೇಶದಲ್ಲಿ ನಗರಸಭೆ 80 ಲಕ್ಷ ರು. ವೆಚ್ಚದಲ್ಲಿ ಕಾಂಪೌಂಡ್ ಹಾಗೂ ಇಂಟರ್ ಲಾಕ್ ಕಾಮಗಾರಿ ಕೈಗೊಂಡಿದೆ. ಈ ಕೆಲಸ ಸದ್ದಿಲ್ಲದೆ ನಡೆಯುತ್ತಿದೆ. ಕಸ ವಿಂಗಡಣೆಯನ್ನು ಸ್ಥಳಾಂತರ ಮಾಡುವಂತೆ ಆಗ್ರಹಿಸಿದರೂ ಕೂಡ ಈ ಸ್ಥಳದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ನಗರಸಬೆ ಉಪಾಧ್ಯಕ್ಷ ಅಮೃತೇಶ್ ಚನ್ನಕೇಶವ ಹೇಳಿದ್ದಾರೆ.ಇದು, ನೀರಾವರಿ ಇಲಾಖೆಗೆ ಸೇರಿರುವ ಜಾಗ, ಹಿಂದೆ ಇಲ್ಲೊಂದು ಕೆರೆ ಇತ್ತು, ಈ ಕೆರೆಯಲ್ಲಿ ಬಟ್ಟೆಯನ್ನು ತೊಳೆಯಲು ಡೋಬಿ ಘಟ್ ಇತ್ತೆಂದು ದಾಖಲೆಗಳೇ ಹೇಳುತ್ತಿವೆ. ಆದರೂ ಕೂಡ ನಗರಸಭೆ ಹಣವನ್ನು ಇಲ್ಲಿಗೆ ಖರ್ಚು ಮಾಡಿ ಕಾಮಗಾರಿ ಕೈಗೊಳ್ಳಲಾಗಿದೆ. ಕಾಮಗಾರಿ ಮಾಡುವ ಮೊದಲು ಗುದ್ದಲಿ ಪೂಜೆ ಮಾಡುವುದು ವಾಡಿಕೆ. ನಮ್ಮಗಳ ಗಮನಕ್ಕೆ ಬರಬಾರದೆಂಬ ಕಾರಣಕ್ಕಾಗಿ ಗುದ್ದಲಿ ಪೂಜೆ ಸಹ ಮಾಡದೆ ಕಾಮಗಾರಿ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.ಕಳೆದ ಸಾಮಾನ್ಯಸಭೆಯಲ್ಲಿ ಏಕ ಪಕ್ಷೀಯವಾಗಿ ಕೆಲವು ಕಾಮಗಾರಿಗಳಿಗೆ ಒಪ್ಪಿಗೆ ತೆಗೆದುಕೊಳ್ಳಲಾಗಿದ್ದು, ಅವುಗಳಲ್ಲಿ ಈ ಕಾಮಗಾರಿಯೂ ಕೂಡ ಸೇರಿಕೊಂಡಿದೆ ಎಂದು ಹೇಳಿದ್ದಾರೆ.ಪೋಟೋ ಫೈಲ್ ನೇಮ್ 19 ಕೆಸಿಕೆಎಂ 1-----
ಕರ್ತವ್ಯಕ್ಕೆ ಅಡ್ಡಿ: ನಗರಸಭೆ ಉಪಾಧ್ಯಕ್ಷರು ಸೇರಿ 7 ಜನರ ವಿರುದ್ಧ ಎಫ್‌ಐಆರ್‌ಚಿಕ್ಕಮಗಳೂರು: ಕಸ ವಿಲೇವಾರಿ ಮಾಡುವ ಸಂದರ್ಭದಲ್ಲಿ ತಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿದ ಕಾರಣಕ್ಕಾಗಿ ನಗರಸಭೆಯ ಸಾನಿಟೇಜರ್ ಸೂಪರ್‌ವೈಜರ್ ಅವರು ನಗರಸಭೆ ಉಪಾಧ್ಯಕ್ಷರು, ಸದಸ್ಯರು ಸೇರಿದಂತೆ 7 ಜನರ ವಿರುದ್ಧ ದೂರನ್ನು ನೀಡಿದ್ದಾರೆ.ಇಲ್ಲಿನ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರಿನ ಆಧಾರದ ಮೇಲೆ ಎಲ್ಲರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.ಇಲ್ಲಿನ ನೆಹರು ನಗರದಲ್ಲಿ ಕಸ ವಿಲೇವಾರಿ ಮಾಡುವ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷ ಅಮೃತೇಶ್, ಸದಸ್ಯರಾದ ಕವಿತಾ ಶೇಖರ್, ಮಧುಕುಮಾರ್ ರಾಜ್ ಅರಸ್, ರೂಪಾ ಕುಮಾರ್ ಸ್ಥಳೀಯರಾದ ರಸೂಲ್ ಖಾನ್, ರಾಬರ್ಟ್, ಮಂಜು ಹಾಗೂ ಇತರರು ಸ್ಥಳದಲ್ಲಿ ಪ್ರತಿಭಟನೆ ನಡೆಸುವ ಜತೆಗೆ ನಗರಸಭಾಧ್ಯಕ್ಷರ ವಿರುದ್ಧವೂ ಪ್ರತಿಭಟನೆ ನಡೆಸಿ ಕರ್ತವ್ಯಕ್ಕೆ ಅಡ್ಡಿಸಿದರೆಂದು ಸಾನಿಟೇಜರ್ ಸೂಪರ್ ವೈಜರ್ ಸುನಿಲ್‌ಕುಮಾರ್ ನೀಡಿರುವ ದೂರಿನನ್ವಯ ಪ್ರಕರಣ ದಾಖಲಾಗಿದೆ.ಕಸ ವಿಲೇವಾರಿ ಘಟಕ ಸ್ಥಳಾಂತರ ಮಾಡಬೇಕು, ಇಲ್ಲಿ ಕೈಗೊಂಡಿರುವ ಕಾಮಗಾರಿ ಕೈಬಿಡಬೇಕೆಂದು ಆಗ್ರಹಿಸಿ ಚಿಕ್ಕಮಗಳೂರು ನಗರಸಭೆ ಉಪಾದ್ಯಕ್ಷ ಅಮೃತೇಶ್ ಚನ್ನಕೇಶವ ನೇತೃತ್ವದಲ್ಲಿ ಸೋಮವಾರ ಧರಣಿ ನಡೆಯಿತು.--- ಪೋಟೋ ಫೈಲ್ ನೇಮ್ 19 ಕೆಸಿಕೆಎಂ 2