ಸಾರಾಂಶ
ಕನ್ನಡಪ್ರಭ ವಾರ್ತೆ ಚಿಂತಾಮಣಿ
ಪಶ್ಚಿಮ ಬಂಗಾಳದ ಸರ್ಕಾರಿ ಆರ್.ಜಿ.ಕಾರ್ ವೈದ್ಯಕೀಯ ಕಾಲೇಜಿನಲ್ಲಿ ಆಗಸ್ಟ್ ೯ ರಂದು ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿ ನಗರ ಹಾಗೂ ತಾಲೂಕಿನ ಎಲ್ಲ ಖಾಸಗಿ ಆಸ್ಪತ್ರೆಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದರು.ನಗರದ ಪ್ರವಾಸಿ ಮಂದಿರದಿಂದ ವೈದ್ಯರು ಹಾಗೂ ಆಸ್ಪತ್ರೆಗಳ ಸಿಬ್ಬಂದಿ ಕಿಡಿಗೇಡಿಗಳ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನ ರ‍್ಯಾಲಿ ನಡೆಸಿದರು.
ಭೀತಿಯ ವಾತಾವರಣ ಸೃಷ್ಟಿಡಾ.ಎಂ.ಪಾಷ, ಡಾ.ಜಯಂತಿ, ಡಾ.ಯಾಸ್ಮಿನ್, ಡಾ. ಸಂತೋಷ್ ಕುಮಾರ್ ಮಾತನಾಡಿ, ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲೇ ವೈದ್ಯಕೀಯ ವಿದ್ಯಾರ್ಥಿ ಮೇಲೆ ಅತ್ಯಾಚಾರ ಎಸಗಿ ಕೊಲೆಮಾಡಿರುವುದು ಹೇಯಕೃತ್ಯ. ಜೊತೆಗೆ ಸಾಕ್ಷ್ಯವನ್ನು ನಾಶಪಡಿಸಲು ಕಿಡಿಗೇಡಿಗಳು ಆಸ್ಪತ್ರೆಯ ಆವರಣಕ್ಕೆ ನುಗ್ಗಿ ಆಸ್ಪತ್ರೆಯ ಕಟ್ಟಡ, ತುರ್ತು ವಿಭಾಗ, ಶುಶ್ರೂಷೆ ಕೇಂದ್ರ, ವೈದ್ಯಕೀಯ ಯಂತ್ರೋಪಕರಣ, ಪೀಠೋಪಕರಣ, ಔಷಧ ಮಳಿಗೆ, ಹೊರರೋಗಿ ವಿಭಾಗ ಹಾಗೂ ಇತರೆ ವೈದ್ಯಕೀಯ ಸಲಕರಣೆಗಳನ್ನು ಧ್ವಂಸಗೊಳಿಸಿ ದಾಂದಲೆ ನಡೆಸಿ ಭೀತಿಯ ವಾತಾವರಣ ನಿರ್ಮಾಣ ಮಾಡಿದ್ದಾರೆಂದರು.
ಈ ಘಟನೆ ಆಕಸ್ಮಿಕ ಅಥವಾ ಯಾರೋ ಒಬ್ಬರು ಮಾಡಿರುವ ಕೃತ್ಯವಲ್ಲ. ಇದೊಂದು ಪೂರ್ವನಿಯೋಜಿತ ಕೃತ್ಯದಂತೆ ಕಾಣುತ್ತಿದೆ. ಆರೋಪಿಗಳನ್ನು ಶೀಘ್ರವಾಗಿ ಬಂಧಿಸಬೇಕು. ಹಿಂಸಾಚಾರ ಹಾಗೂ ದುಷ್ಕೃತ್ಯಗಳನ್ನು ನಡೆಸಿರುವ ಕಿಡಿಗೇಡಿಗಳನ್ನು ಬಂಧಿಸಿ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕೆಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ನೂರಾರು ವೈದ್ಯರು, ದಾದಿಯರು, ಆರೋಗ್ಯ ಸಿಬ್ಬಂದಿ ಸರ್ಕಾರಕ್ಕೆ ಒತ್ತಾಯಿಸಿದರು.ಕಠಿಣ ಕಾನೂನು ರೂಪಿಸಲಿ
ವೈದ್ಯರು ಮತ್ತು ಕ್ಲೀನಿಕ್‌ಗಳ ಮೇಲೆ ದಾಳಿ ಮಾಡುವ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ನೀಡುವ ಕಾನೂನು ನಿಯಮಾವಳಿಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ರೂಪಿಸಿ ಅನುಷ್ಠಾನಗೊಳಿಸಬೇಕೆಂದು ಒತ್ತಾಯಿಸಿದರು.ನಂತರ ಪ್ರತಿಭಟನಾನಿರತ ವೈದ್ಯರು, ತಹಸೀಲ್ದಾರ್ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಡಾ. ಶ್ರೀಧರ್, ಡಾ.ಬೈರೆಡ್ಡಿ, ಡಾ.ಭಾಸ್ಕರ್ ರೆಡ್ಡಿ, ಡಾ. ಪ್ರಸನ್ನ, ಡಾ. ಮುನಿವೆಂಕಟರೆಡ್ಡಿ, ಡಾ.ವಿಕ್ರಮ್, ಡಾ. ಕಲ್ಯಾಣ್, ಡಾಅಫ್ತಾಬ್‌ಬೇಗ್, ಡಾ.ಆಸಾದುಲ್ಲಬೇಗ್, ಡಾ.ಯಲ್ಲಪ್ಪ ಗೌಡ, ಡಾ.ವಾಣಿರೆಡ್ಡಿ, ಡಾ.ದ್ರಾಕ್ಷಾಯಣಿ ಡಾ.ಮಂಜುನಾಥ್ ಎಲ್ಲ ಕಿರಿಯ ವೈದ್ಯರು, ಆಸ್ಪತ್ರೆಯ ದಾದಿಯರು, ಸಿಬ್ಬಂದಿ ಭಾಗವಹಿಸಿದ್ದರು.