ಪೋಷಕರ ಕನಸು ನನಸು ಮಾಡಲು ಶ್ರಮಿಸಿ: ನಾಗರಹಳ್ಳಿ ಕರೆ

| Published : Feb 22 2024, 01:48 AM IST

ಪೋಷಕರ ಕನಸು ನನಸು ಮಾಡಲು ಶ್ರಮಿಸಿ: ನಾಗರಹಳ್ಳಿ ಕರೆ
Share this Article
  • FB
  • TW
  • Linkdin
  • Email

ಸಾರಾಂಶ

ವಿಜಯಪುರ: ವಿದ್ಯಾರ್ಥಿಗಳು ಸತತ ಅಧ್ಯಯನದಿಂದ ಉತ್ತಮ ಸಾಧನೆ ಮಾಡಿ ಪೋಷಕರ ಕನಸುಗಳನ್ನು ನನಸು ಮಾಡಲು ಶ್ರಮಿಸಬೇಕು ಎಂದು ರಾಜ್ಯ ಶುಶ್ರೂಷ ಪರೀಕ್ಷಾ ಮಂಡಳಿ ಕಾರ್ಯದರ್ಶಿ ಮಡಿವಾಳಪ್ಪ ನಾಗರಹಳ್ಳಿ ಹೇಳಿದರು. ನಗರದ ಬಿಎಲ್.ಡಿಇ ಸಂಸ್ಥೆಯ ಬಿ.ಎಂ.ಪಾಟೀಲ ಶೂಶ್ರುಷ ಮಹಾವಿದ್ಯಾಲಯದ ಬಿಎಸ್ಸಿ ಪದವಿ ಮತ್ತು ಜಿ.ಎನ್.ಎಂ ವಿದ್ಯಾರ್ಥಿಗಳ ಪ್ರತಿಜ್ಞಾವಿಧಿ ಬೋಧಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ವಿಜಯಪುರ: ವಿದ್ಯಾರ್ಥಿಗಳು ಸತತ ಅಧ್ಯಯನದಿಂದ ಉತ್ತಮ ಸಾಧನೆ ಮಾಡಿ ಪೋಷಕರ ಕನಸುಗಳನ್ನು ನನಸು ಮಾಡಲು ಶ್ರಮಿಸಬೇಕು ಎಂದು ರಾಜ್ಯ ಶುಶ್ರೂಷ ಪರೀಕ್ಷಾ ಮಂಡಳಿ ಕಾರ್ಯದರ್ಶಿ ಮಡಿವಾಳಪ್ಪ ನಾಗರಹಳ್ಳಿ ಹೇಳಿದರು. ನಗರದ ಬಿಎಲ್.ಡಿಇ ಸಂಸ್ಥೆಯ ಬಿ.ಎಂ.ಪಾಟೀಲ ಶೂಶ್ರುಷ ಮಹಾವಿದ್ಯಾಲಯದ ಬಿಎಸ್ಸಿ ಪದವಿ ಮತ್ತು ಜಿ.ಎನ್.ಎಂ ವಿದ್ಯಾರ್ಥಿಗಳ ಪ್ರತಿಜ್ಞಾವಿಧಿ ಬೋಧಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಈ ಭಾಗದ ಜನರಿಗೆ ಉತ್ತಮ ಶಿಕ್ಷಣ ನೀಡುವ ಗುರಿ ಹೊಂದಿರುವ ಪ್ರತಿಷ್ಠಿತ ಬಿ.ಎಲ್.ಡಿ.ಇ ಶಿಕ್ಷಣ ಸಂಸ್ಥೆಯ ಕಾಲೇಜಿಗೆ ಸೇರುವ ಮೂಲಕ ವಿದ್ಯಾರ್ಥಿಗಳು ಉತ್ತಮ ನಿರ್ಧಾರ ಕೈಗೊಂಡಿದ್ದೀರಿ ಎಂದು ಪ್ರಶಂಸಿಸಿದರು.

ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಬೋರ್ಡ್ ಆಫ್ ಸ್ಟಡೀಸ್ ಸದಸ್ಯ ಶ್ರೀಕಾಂತ ಪುಲಾರಿ ಮಾತನಾಡಿ, ಶುಶ್ರೂಷ ವೃತ್ತಿಗೆ ವಿಶ್ವದಲ್ಲಿ ಹೆಚ್ಚಿನ ಬೇಡಿಕೆ ಇದೆ. ನರ್ಸಿಂಗ್ ಪದವೀಧರರು ಯಾರೂ ನಿರುದ್ಯೋಗಿಗಳಾದ ಉದಾಹರಣೆಗಳಿಲ್ಲ. ಅಲ್ಲದೇ, ವೃತ್ತಿಕೌಶಲ ಹೆಚ್ಚಿಸಿಕೊಂಡರೆ ಉತ್ತಮ ಹುದ್ದೆಗಳು ಸಿಗುತ್ತವೆ ಎಂದು ಹೇಳಿದರು.

ಕಾಲೇಜಿನ ಪ್ರಾಚಾರ್ಯ ಡಾ.ಶಾಲ್ಮೋನ್ ಚೋಪಡೆ, ಕಾಲೇಜಿನಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದ್ದು, ವಿದ್ಯಾರ್ಥಿಗಳು ಸೌಲಭ್ಯಗಳನ್ನು ಬಳಸಿಕೊಂಡು ಉತ್ತಮ ಸಾಧನೆ ಮಾಡಬೇಕು ಎಂದರು.

ಉಪ ಪ್ರಾಂಶುಪಾಲ ಡಾ.ಸುಚಿತ್ರ ರಾಟಿ ವಾರ್ಷಿಕ ವರದಿ ವಾಚಿಸಿದರು. ಕಾರ್ಯಕ್ರಮದ ಮಹತ್ವವನ್ನು ಸೌಜನ್ಯ ಪೂಜಾರ ವಿವರಿಸಿದರು. ಬೋಧಕ ಸಿಬ್ಬಂದಿಯಾದ ಡಾ.ಬಶೀರ ಅಹಮದ್ ಸಿಕಂದರ್, ಅಮರ ಷಣ್ಮುಗೆ, ನಜೀರ ಬಳಗಾರ, ಪ್ರವೀಣ ಬಗಲಿ, ಸತೀಶ ನಡಗಡ್ಡಿ, ಶ್ವೇತಾ ಹಿಟ್ನಾಳ, ಸಾವಿತ್ರಿ, ಡಾ. ಅಮಿತಕುಮಾರ ಬಿರಾದಾರ, ಲಕ್ಷ್ಮೀ ಅಗ್ನಿಹೋತ್ರಿ, ಬಾಬು ಕೊದ್ನಾಪುರ, ಡಾ.ಸಂಕಪ್ಪ ಗುಲಗಂಜಿ, ಸಿಬ್ಬಂದಿ ಭಾಗ್ಯಶ್ರೀ, ಅನಿತಾ, ಸುಮಾ, ಸುಧೀರ ಬಾಳಿ, ಪರಶುರಾಮ, ಪ್ರಾನ್ಸಿಸ್, ಕಿರಣ ಶಿರೋಳಕರ, ಸೋಮೇಶ ಬುರುಕುಲೆ, ಯಲ್ಲಮ್ಮ, ರೇಷ್ಮಾ ಚವ್ಹಾಣ, ಐಶ್ವರ್ಯ, ರಾಜಶ್ರೀ, ಪೃಥ್ವಿ, ಅನಿಲ, ಆಶಾ, ವಿದ್ಯಾರ್ಥಿಗಳು, ಪೋಷಕರು ಇದ್ದರು. ಡಾ.ಕವಿತಾ.ಕೆ ಸ್ವಾಗತಿಸಿದರು. ಡಾ.ಜಯಶ್ರೀ ಪೂಜಾರಿ, ರೂಪಾ ಪಾಟೀಲ ನಿರೂಪಿಸಿದರು. ಗುರುರಾಜ ಗುಗ್ಗರಿ ವಂದಿಸಿದರು.