ಸಾರಾಂಶ
ಜೆ.ಎಚ್.ಪಟೇಲ್ ಬಡಾವಣೆಯಲ್ಲಿ ಕ್ಷತ್ರಿಯ ಮರಾಠ ಪರಿಷತ್ ಶಿವಮೊಗ್ಗ ಜಿಲ್ಲಾ ಶಾಖೆ ವತಿಯಿಂದ ನೂತನವಾಗಿ ನಿರ್ಮಿಸಿರುವ ವಿದ್ಯಾರ್ಥಿ ನಿಲಯದ ಲೋಕಾರ್ಪಣೆ ಹಾಗೂ ಸಮುದಾಯ ಭವನದ ಭೂಮಿ ಪೂಜೆ ಕಾರ್ಯಕ್ರಮವು ಮೇ 26ರಂದು ನೆರವೇರಲಿದೆ ಎಂದು ಪರಿಷತ್‍ನ ಜಿಲ್ಲಾ ಉಪಾಧ್ಯಕ್ಷ ಎಚ್.ಬಿ. ರಮೇಶ್ ಬಾಬು ಜಾಧವ್ ತಿಳಿಸಿದರು.
ಶಿವಮೊಗ್ಗ : ಜೆ.ಎಚ್.ಪಟೇಲ್ ಬಡಾವಣೆಯಲ್ಲಿ ಕ್ಷತ್ರಿಯ ಮರಾಠ ಪರಿಷತ್ ಶಿವಮೊಗ್ಗ ಜಿಲ್ಲಾ ಶಾಖೆ ವತಿಯಿಂದ ನೂತನವಾಗಿ ನಿರ್ಮಿಸಿರುವ ವಿದ್ಯಾರ್ಥಿ ನಿಲಯದ ಲೋಕಾರ್ಪಣೆ ಹಾಗೂ ಸಮುದಾಯ ಭವನದ ಭೂಮಿ ಪೂಜೆ ಕಾರ್ಯಕ್ರಮವು ಮೇ 26ರಂದು ಬೆಳಗ್ಗೆ 10.30ಕ್ಕೆ ನೆರವೇರಲಿದೆ ಎಂದು ಪರಿಷತ್‍ನ ಜಿಲ್ಲಾ ಉಪಾಧ್ಯಕ್ಷ ಎಚ್.ಬಿ. ರಮೇಶ್ ಬಾಬು ಜಾಧವ್ ತಿಳಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬೆಂಗಳೂರಿನಲ್ಲಿರುವ ಗೋಸಾಯಿ ಮರಾಠ ಮಠದ ಶ್ರೀ ಮಂಜುನಾಥ ಭಾರತಿ ಸ್ವಾಮೀಜಿ ಸಾನ್ನಿಧ್ಯವಹಿಸಿ ವಿದ್ಯಾರ್ಥಿನಿಲಯ ಉದ್ಘಾಟಿಸಲಿದ್ದಾರೆ ಎಂದರು. ಮುಖ್ಯ ಅತಿಥಿಯಾಗಿ ಪರಿಷತ್‍ನ ರಾಜ್ಯ ಗವರ್ನಿಂಗ್ ಕೌನ್ಸಿಲ್ ಛೇರ್ಮನ್ ಎಸ್.ಆರ್.ಸಿಂಧ್ಯಾ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಆರ್. ಸುನೀಲ್ ಚವಾಣ್, ಖಜಾಂಚಿ ಟಿ.ಆರ್. ವೆಂಕಟರಾವ್ ಚವಾಣ್, ರಾಜ್ಯ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ಪ್ರಕಾಶ್ ಆರ್.ಪಾಗೋಜಿ ಆಗಮಿಸಲಿದ್ದು, ಛತ್ರಾಪತಿ ಶಿವಾಜಿ ಮರಾಠ ಟ್ರಸ್ಟ್‍ನ ಅಧ್ಯಕ್ಷ ಎಚ್.ಸಿದ್ಧೋಜಿರಾವ್ ಜಾಧವ್, ಶಿವಮೊಗ್ಗದ ಕ್ಷತ್ರಿಯ ಮರಾಠ ಸಹಕಾರ ಸಂಘದ ಆರ್.ಬಿ. ಸುರೇಶ್ ಬಾಬು ಮೋರೆ, ಪರಿಷತ್‍ನ ನಗರಾಧ್ಯಕ್ಷ ಬಿ.ಕೆ. ದಿನೇಶ್‍ರಾವ್ ಚವಾಣ್, ಶಿವಮೊಗ್ಗ ತಾಲೂಕು ಗ್ರಾಮಾಂತರ ಅಧ್ಯಕ್ಷ ದೇವರಾಜ್ ಶಿಂಧೆ ಎಂ.ಡಿ. ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಇಂದಿರಾಬಾಯಿ ಲಕ್ಷ್ಮೀಕಾಂತ್ ಪವಾರ್ ಹಾಗೂ ಮಿಥುನ್ ಜೆ.ಜಗದಾಳೆರನ್ನು ಸನ್ಮಾನಿಸಲಾಗುವುದು. ಕಾರ್ಯಕ್ರಮದ ಅಧ್ಯಕ್ಷತೆ ಪರಿಷತ್‍ನ ರಾಜ್ಯಾಧ್ಯಕ್ಷೆ ಎಸ್. ಸುರೇಶ್‍ರಾವ್ ಸಾಠೆ ವಹಿಸಲಿದ್ದಾರೆ ಎಂದರು.ಪರಿಷತ್‍ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ಬಿ.ಸುರೇಶ್ ಬಾಬು ಮೋರೆ ಮಾತನಾಡಿ, ಸೂಡಾದಿಂದ ನಿವೇಶನ ಖರೀದಿಸಲಾಗಿದ್ದು, ಸುಮಾರು 4 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗಿರುವ ವಿದ್ಯಾರ್ಥಿ ನಿಲಯದಲ್ಲಿ 29 ಕೊಠಡಿಗಳಿದ್ದು, ಸಮಾಜದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ನೀಡಲಾಗುವುದು. ನಿವೇಶನದ ಖಾಲಿ ಜಾಗದಲ್ಲಿ ಸಮುದಾಯ ಭವನಕ್ಕೆ ಅಂದು ಭೂಮಿ ಪೂಜೆ ನಡೆಯಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪರಿಷತ್‍ನ ಜಿಲ್ಲಾಧ್ಯಕ್ಷ ಆರ್.ಚಂದ್ರರಾವ್ ಘಾರ್ಗೆ, ಕಾರ್ಯಾಧ್ಯಕ್ಷ ಇ.ಚೂಡಾಮಣಿ ಪವಾರ್, ಉಪಾಧ್ಯಕ್ಷ ಎಚ್.ಸಿದ್ಧೋಜಿರಾವ್ ಜಾಧವ್, ಪ್ರಮುಖರಾದ ಡಿ.ಎಂ. ರಾಜ್‍ಕುಮಾರ್ ಜಗತಾಪ್, ಬಿ.ಕೆ.ದಿನೇಶ್‍ರಾವ್ ಚವಾಣ್, ಡಿ.ತುಕಾರಾಂ ಮಾನೆ ಮತ್ತಿತರರಿದ್ದರು.