ಸಾರಾಂಶ
ಕಲಿಕಾ ಹಂತದಲ್ಲಿಯೇ ಹೆಚ್ಚಿನ ಆಸಕ್ತಿ ವಹಿಸಿ ಶ್ರದ್ಧೆಯಿಂದ ಕಲಿತಲ್ಲಿ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯವಾಗಲಿದೆ ಎಂದು ಸಿದ್ಧಲಿಂಗಯ್ಯ ಹಿರೇಮಠ ಹೇಳಿದರು.
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ವಿದ್ಯಾರ್ಥಿ ಜೀವನ ಭವಿಷ್ಯವನ್ನು ಕಟ್ಟಿಕೊಳ್ಳುವ ಸಮಯವಾಗಿದ್ದು, ಕಲಿಕಾ ಹಂತದಲ್ಲಿಯೇ ಹೆಚ್ಚಿನ ಆಸಕ್ತಿ ವಹಿಸಿ ಶ್ರದ್ಧೆಯಿಂದ ಕಲಿತಲ್ಲಿ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯವಾಗಲಿದೆ ಎಂದು ನಿವೃತ್ತ ಮೇಜರ್ ಹಾಗೂ ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ಕಾರ್ಯನಿರ್ವಾಹಕ ನಿರ್ದೇಶಕ ಸಿದ್ಧಲಿಂಗಯ್ಯ ಹಿರೇಮಠ ಹೇಳಿದರು.ಇಲ್ಲಿನ ಕೆ.ಎಲ್.ಇ. ಸಂಸ್ಥೆಯ ಮೃತ್ಯುಂಜಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಗುರುವಾರ ನಡೆದ ಶೈಕ್ಷಣಿಕ ವರ್ಷದ ಕ್ರೀಡಾ ಹಾಗೂ ಸಾಂಸ್ಕೃತಿಕ ಸಂಘಗಳ ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಶಿಕ್ಷಣ ಮನುಷ್ಯನನ್ನು ಎತ್ತರಕ್ಕೆ ಒಯ್ಯುವುದು. ವಿದ್ಯಾರ್ಥಿ ಜೀವನ ಸುಂದರ, ಶ್ರೇಷ್ಠ ಅನುಭವಗಳೊಂದಿಗೆ ಕೂಡಿರಲಿ. ಓದಿನಲ್ಲಿ ಆಸಕ್ತಿ ಹೆಚ್ಚಿಸಿಕೊಳ್ಳಿ. ಒಳ್ಳೆಯ ಕನಸುಗಳು ನಿಮ್ಮದಾಗಿರಲಿ ಎಂದು ಹಾರೈಸಿದರು.ಇದೇ ಸಂದರ್ಭದಲ್ಲಿ ಮಹಾವಿದ್ಯಾಲಯದಲ್ಲಿ ಪಿ.ಎಚ್.ಡಿ., ಕೆ.ಸೆಟ್ ಹಾಗೂ ರಾಜ್ಯಪ್ರಶಸ್ತಿ ಪಡೆದ, ಡಾ. ಬಿ.ಎನ್. ತಾರಾ, ಡಾ. ಭೀಮಾಶಂಕರ ಎಂ, ಡಾ. ಶರಣಪ್ಪ ಆಡಕರ, ಡಾ. ಸುರೇಶ ಸಂಕಣ್ಣವರ, ಪ್ರೊ.ಶಶಿಧರ ಚಿಕ್ಕಮಠ ಅವರನ್ನು ಹಾಗೂ ನಿವೃತ್ತಿ ಹೊಂದಲಿರುವ ಪ್ರೊ. ಆಶಾ ನಿಡವಣಿ ಮತ್ತು ಮಾರುತಿ ಭರಾಟಕ್ಕೆ ಅವರನ್ನು ಸನ್ಮಾನಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಕೆಎಲ್‌ಇ ಸಂಸ್ಥೆಯ ಸ್ಥಾನಿಕ ಆಡಳಿತ ಮಂಡಳಿ ಸದಸ್ಯ ವೈ.ಬಿ. ಮದ್ನೂರು ಮಾತನಾಡಿದರು. ಪ್ರಾಚಾರ್ಯೆ ಡಾ. ನೀಲಕ್ಕ ಪಾಟೀಲ ಸ್ವಾಗತಿಸಿದರು. ಐ.ಕ್ಯೂ.ಎ.ಸಿ. ಸಂಯೋಜಕ ಪ್ರೊ. ಎಸ್.ಎಸ್. ಸಂಗೊಳ್ಳಿ, ಪ್ರೊ. ನಾಗರಾಜ ಕೋಟಗಾರ, ಸಂದೀಪ ಪಾಟೀಲ, ಎಸ್.ಎಸ್. ಶಿವಳ್ಳಿ, ಅಶೋಕ ಚಿಕ್ಕೋಡಿ, ಸಿ.ಎಸ್. ಪಾಟೀಲ ಸೇರಿದಂತೆ ಹಲವರಿದ್ದರು.