ಡ್ರಗ್ಸ್‌ ವಿರುದ್ಧ ವಿದ್ಯಾರ್ಥಿಗಳ ದಿಟ್ಟ ಸಂದೇಶ: ಡಿಸಿಪಿ ಸಿದ್ಧಾರ್ಥ ಗೋಯಲ್‌

| Published : Oct 19 2024, 12:22 AM IST

ಡ್ರಗ್ಸ್‌ ವಿರುದ್ಧ ವಿದ್ಯಾರ್ಥಿಗಳ ದಿಟ್ಟ ಸಂದೇಶ: ಡಿಸಿಪಿ ಸಿದ್ಧಾರ್ಥ ಗೋಯಲ್‌
Share this Article
  • FB
  • TW
  • Linkdin
  • Email

ಸಾರಾಂಶ

ಎಸ್‌ಡಿಎಂ ಕಾಲೇಜು, ಬೆಸೆಂಟ್‌, ರೋಶನಿ ನಿಲಯ, ಶ್ರೀದೇವಿ ಕಾಲೇಜು, ಶಾರದಾ ಪಿಯು ಕಾಲೇಜು, ಸರ್ಕಾರಿ ಮಹಿಳಾ ಕಾಲೇಜು ಬಲ್ಮಠ, ಸೈಂಟ್‌ ಆಗ್ನೆಸ್‌ ಕಾಲೇಜು, ಮಿಲಾಗ್ರಿಸ್‌, ಸೈಂಟ್‌ ರೇಮಂಡ್ಸ್‌ ಪದುವಾ ಮೊದಲಾದ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ವಾಕಥಾನ್‌ನಲ್ಲಿ ಹೆಜ್ಜೆ ಹಾಕಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

‘ಸೇ ನೋ ಟು ಡ್ರಗ್ಸ್‌’ ವಾಕಥಾನ್‌ನಲ್ಲಿ ಐದು ಸಾವಿರಕ್ಕೂ ಅಧಿಕ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸುವ ಮೂಲಕ ಸಮಾಜದ ಕುರಿತಾಗಿನ ತಮ್ಮ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ. ಮಾತ್ರವಲ್ಲದೆ, ಡ್ರಗ್ಸ್‌ ವಿರುದ್ಧದ ಅಭಿಯಾನಕ್ಕೆ ಪೂರಕವಾಗಿ ದಿಟ್ಟ ಸಂದೇಶವನ್ನು ಮಂಗಳೂರಿನಲ್ಲಿ ನೀಡಿದ್ದಾರೆ ಎಂದು ಡಿಸಿಪಿ ಸಿದ್ಧಾರ್ಥ್‌ ಗೋಯಲ್‌ ಹೇಳಿದ್ದಾರೆ.ಮಂಗಳೂರು ಕ್ಯಾಥೋಲಿಕ್‌ ಧರ್ಮಪ್ರಾಂತ್ಯ, ಫಾದರ್‌ ಮುಲ್ಲರ್‌ ಚಾರಿಟೇಬಲ್‌ ಟ್ರಸ್ಟ್‌, ಅಲೋಶಿಯಸ್‌ ಡೀಮ್ಡ್‌ ಯೂನಿವರ್ಸಿಟಿ, ಸಂತ ಜೋಸೆಫ್‌ ಎಂಜಿನಿಯರಿಂಗ್‌ ಕಾಲೇಜು ಮತ್ತು ಕ್ಯಾಥೋಲಿಕ್‌ ಶಿಕ್ಷಣ ಮಂಡಳಿ ಸಹಯೋಗದಲ್ಲಿ ಶುಕ್ರವಾರ ನೆಹರೂ ಮೈದಾನದಲ್ಲಿ ನಡೆದ ‘ಸೇ ನೋ ಟು ಡ್ರಗ್ಸ್‌’ ವಾಕಥಾನ್‌ನ ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿ ಅವರು ಮಾತನಾಡಿದರು.

‘ಸೇ ನೋ ಟು ಡ್ರಗ್ಸ್‌’ ಎಂಬ ಘೋಷಣೆಯೊಂದಿಗೆ, ಬಿಷಪ್‌ ರೆ.ಫಾ. ಡಾ. ಪೀಟರ್‌ ಪೌಲ್‌ ಸಲ್ಡಾನಾ ಅವರ ಮಾರ್ಗದರ್ಶನದಲ್ಲಿ ಆಯೋಜಿಸಲಾದ ವಾಕಥಾನ್‌ಗೆ ಸಂತ ಅಲೋಶಿಯಸ್‌ ಮೈದಾನದಲ್ಲಿ ಸಂತ ಅಲೋಶಿಯಸ್‌ ಡೀಮ್ಡ್‌ ವಿವಿಯ ರೆಕ್ಟರ್‌ ರೆ.ಫಾ. ಮೆಲ್ವಿನ್‌ ಪಿಂಟೊ ಚಾಲನೆ ನೀಡಿದರು.

ಡ್ರಗ್ಸ್‌ ವಿರುದ್ಧದ ಘೋಷಣೆಯಿಂದ ಕೂಡಿದ ಭಿತ್ತಿಪತ್ರಗಳನ್ನು ಹಿಡಿದು ಸಹಸ್ರಾರು ಸಂಖ್ಯೆಯಲ್ಲಿ ಪಾದಯಾತ್ರೆ ನಡೆಸಿದ ವಿದ್ಯಾರ್ಥಿಗಳು ನೆಹರೂ ಮೈದಾನದಲ್ಲಿ ಸಮಾವೇಶಗೊಂಡರು.

ಬ‍ಳಿಕ ನಡೆದ ಸಮಾರೋಪ ಸಮಾರಂಭದಲ್ಲಿ ಡಿಸಿಪಿ ದಿನೇಶ್‌ ಕುಮಾರ್‌, ಕ್ಯಾಥೋಲಿಕ್‌ ಧರ್ಮಪ್ರಾಂತ್ಯದ ಡ್ರಗ್ಸ್‌ ವಿರೋಧಿ ಅಭಿಯಾನದ ಸಂಯೋಜಕ ಲೂವಿ ಜೆ. ಪಿಂಟೋ, ಸೈಂಟ್‌ ಅಲೋಶಿಯಸ್‌ ಡೀಮ್ಡ್‌ ಯೂನಿವರ್ಸಿಟಿಯ ಕುಲಪತಿ ರೆ.ಫಾ. ಡಾ. ಪ್ರವೀಣ್‌ ಮಾರ್ಟಿಸ್‌, ಡ್ರಗ್ಸ್‌ ತಡೆ ಸೊಸೈಟಿ ನೋಡೆಲ್‌ ಅಧಿಕಾರಿ ಡಾ. ರೋಶನ್‌ ಮೊಂತೆರೋ, ಫಾದರ್‌ ಮುಲ್ಲರ್‌ ಮೆಡಿಕಲ್‌ ಕಾಲೇಜು ಆಡಳಿತಾಧಿಕಾರಿ ಫಾ. ಅಜಿತ್‌ ಮಿನೇಜಸ್‌, ಕ್ಯಾಥಲಿಕ್‌ ಶಿಕ್ಷಣ ಮಂಡಳಿ ಕಾರ್ಯದರ್ಶಿ ಪ್ರವೀಣ್‌ ಲಿಯೋ ಲಸ್ರಾದೋ, ಜಾನ್‌ ಡಿಸಿಲ್ವಾ ಮತ್ತಿತರರಿದ್ದರು. ಫಾದರ್‌ ಮುಲ್ಲರ್‌ ಮೆಡಿಕಲ್‌ ಕಾಲೇಜು ಉಪನ್ಯಾಸಕ ಡಾ. ಶಿವಶಂಕರ್‌ ವಂದಿಸಿದರು.ಕ್ರೈಸ್ತ ಶಿಕ್ಷಣ ಮಂಡಳಿಯ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಜತೆಗೆ ಕೆನರಾ, ಶ್ರೀನಿವಾಸ ಯುನಿವರ್ಸಿಟಿ, ಎಸ್‌ಡಿಎಂ ಕಾಲೇಜು, ಬೆಸೆಂಟ್‌, ರೋಶನಿ ನಿಲಯ, ಶ್ರೀದೇವಿ ಕಾಲೇಜು, ಶಾರದಾ ಪಿಯು ಕಾಲೇಜು, ಸರ್ಕಾರಿ ಮಹಿಳಾ ಕಾಲೇಜು ಬಲ್ಮಠ, ಸೈಂಟ್‌ ಆಗ್ನೆಸ್‌ ಕಾಲೇಜು, ಮಿಲಾಗ್ರಿಸ್‌, ಸೈಂಟ್‌ ರೇಮಂಡ್ಸ್‌ ಪದುವಾ ಮೊದಲಾದ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ವಾಕಥಾನ್‌ನಲ್ಲಿ ಹೆಜ್ಜೆ ಹಾಕಿದರು.