ವಿದ್ಯಾರ್ಥಿಗಳು ಜೀವನದಲ್ಲಿ ಮೌಲ್ಯಗಳ ಅಳವಡಿಸಿಕೊಳ್ಳಿ-ನವೀನಕುಮಾರ್‌

| Published : Dec 09 2024, 12:47 AM IST

ವಿದ್ಯಾರ್ಥಿಗಳು ಜೀವನದಲ್ಲಿ ಮೌಲ್ಯಗಳ ಅಳವಡಿಸಿಕೊಳ್ಳಿ-ನವೀನಕುಮಾರ್‌
Share this Article
  • FB
  • TW
  • Linkdin
  • Email

ಸಾರಾಂಶ

ಈ ಶಿಕ್ಷಣ ಸಂಸ್ಥೆ ಕೇವಲ ಕ್ರೀಡೆ ಮತ್ತು ಶಿಕ್ಷಣಕ್ಕೆ ಒತ್ತು ಕೊಡದೆ ಸಂಪನ್ಮೂಲ ಅಭಿವೃದ್ಧಿಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತದೆ. ವಿದ್ಯಾರ್ಥಿಗಳು ಹೆಚ್ಚು ಜೀವನದ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಪಶು ವೈದ್ಯಾಧಿಕಾರಿ ನವೀನ್ ಕುಮಾರ್‌ ಹೇಳಿದರು.

ಹಿರೇಕೆರೂರು:ಈ ಶಿಕ್ಷಣ ಸಂಸ್ಥೆ ಕೇವಲ ಕ್ರೀಡೆ ಮತ್ತು ಶಿಕ್ಷಣಕ್ಕೆ ಒತ್ತು ಕೊಡದೆ ಸಂಪನ್ಮೂಲ ಅಭಿವೃದ್ಧಿಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತದೆ. ವಿದ್ಯಾರ್ಥಿಗಳು ಹೆಚ್ಚು ಜೀವನದ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಪಶು ವೈದ್ಯಾಧಿಕಾರಿ ನವೀನ್ ಕುಮಾರ್‌ ಹೇಳಿದರು.ತಾಲೂಕಿನ ಹಂಸಭಾವಿ ಗ್ರಾಮದ ಮೃತ್ಯುಂಜಯ ವಿದ್ಯಾಪೀಠದ ಶತಮಾನೋತ್ಸವದ ಅಂಗವಾಗಿ ಏರ್ಪಡಿಸಿದ್ದ ನಾಲ್ಕನೇ ದಿನದ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನಮ್ಮ ಬೆಳವಣಿಗೆಗೆ ಗುರುಗಳು ಮತ್ತು ಪಾಲಕರ ಹೆಚ್ಚು ಪಾಲು ಇರುತ್ತದೆ. ಜಾತಿಯಿಂದ ಗುರುತಿಸಿಕೊಳ್ಳದೆ ವಿದ್ಯಾರ್ಹತೆಯಿಂದ ಸಮಾಜದಲ್ಲಿ ಗುರುತಿಸಿಕೊಳ್ಳಬೇಕು. ಎಲ್ಲ ಕ್ಷೇತ್ರದಲ್ಲಿ ಸೋಲು ಗೆಲುವು ಇರುತ್ತದೆ. ಅದಕ್ಕೆ ಅಂಜದೆ ಭಾಗವಹಿಸಿ ಪ್ರಯತ್ನ ಮಾಡಬೇಕು. ಆ ಪ್ರಯತ್ನದಿಂದ ಫಲ ನಮ್ಮದಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಡಾ.ಸಿ.ಎಂ. ಕುಂದಗೋಳ ಮಾತನಾಡಿ, ಶಿಕ್ಷಣ ಸಂಸ್ಥೆಯಿಂದ ಎಲ್ಲಾ ಡೊಂಕುಗಳನ್ನು ತಿದ್ದಬಹುದು. ಬೇವಿನ ಬೀಜ ಬಿತ್ತಿದರೆ ಬೇವಿನ ಮರವೇ ಹುಟ್ಟುವುದು. ಹೀಗಾಗಿ ಶಿಕ್ಷಕರು ಮಕ್ಕಳಿಗೆ ನೈತಿಕ ಶಿಕ್ಷಣ ಕೊಡಬೇಕು. ಕೇವಲ ಉದ್ಯೋಗಕ್ಕಾಗಿ ಶಿಕ್ಷಣ ಕೊಡುವ ಬದಲು ಒಬ್ಬ ವ್ಯಕ್ತಿ ಚಾರಿತ್ರೆ ಹುಟ್ಟುವ ಶಿಕ್ಷಣವನ್ನು ಕೊಡುವುದು ಶಿಕ್ಷಕರ ಕರ್ತವ್ಯ. ಜೀವನದಲ್ಲಿ ಸತ್ಯ, ವಿನಯತೆ ಗೌರವದಿಂದ ಬೆಳೆಯಬೇಕೆಂದರೆ ಕಾಯಕದಿಂದ ಇರುವುದು ಬಹಳ ಮುಖ್ಯ. ವಚನಗಳು ನಮ್ಮ ಬದುಕು ಆಗಬೇಕು, ವಚನಗಳ ಇದ್ದ ಹಾಗೆ ನಾವು ಬದುಕಬೇಕು. ವಿದ್ಯಾರ್ಥಿಗಳಲ್ಲಿ ಕೆಟ್ಟ ವಿಚಾರ, ದ್ವೇಷ, ಕೆಟ್ಟ ಚಟ ಹೀಗೆ ಹಲವು ವಿಚಾರಗಳನ್ನು ತೆಗೆಯುವುದು ಕೇವಲ ಶಿಕ್ಷಣ ಸಂಸ್ಥೆಯಿಂದ ಮಾತ್ರ ಸಾಧ್ಯ. ನಮ್ಮ ಜೀವನದಲ್ಲಿ ಜ್ಞಾನದ ಸಂಪತ್ತು ಬಹಳ ಮುಖ್ಯ, ಯಾವುದೇ ವಡವೆ ವೈಢೂರ್ಯ ನಮ್ಮದಲ್ಲ. ನಾಟಕದ ಬದುಕು ನಡೆಸಬಾರದು. ಸಂಸ್ಕಾರ ಮತ್ತು ಸಂಸ್ಕೃತಿ ಕೊಡುವುದರಲ್ಲಿ ಪಾಲಕರ ಮತ್ತು ಗುರುಗಳ ಸ್ಥಾನ ಬಹಳ ಮುಖ್ಯ ಎಂದರು. ಮಲೆಬೆನ್ನೂರಿನ ಕೃಷಿ ತಜ್ಞರಾದ ಕರಿಬಸಪ್ಪ ಎಂ.ಜಿ. ಮಾತನಾಡಿ, ಈಗಿನ ಕೃಷಿ ಪದ್ಧತಿಯಲ್ಲಿ ಹೆಚ್ಚು ರಾಸಾಯನಿಕ ಕೀಟ ನಾಶಗಳನ್ನು ಬಳಸುತ್ತಿದ್ದು ಇದರ ಬಳಕೆ ಕಡಿಮೆ ಮಾಡಿ ಸಾವಯವ ಕೃಷಿ ಪದ್ಧತಿಗೆ ಹೆಚ್ಚು ಒತ್ತು ಕೊಡಬೇಕು ಎಂದು ಹೇಳಿದರು.

ಆಯುರ್ವೇದ ಭಾರತದ ಪುರಾತನ ವೈದ್ಯಕೀಯ ಪದ್ಧತಿ ಆಗಿದೆ. ಇದು ಇತರ ವೈದ್ಯಕೀಯ ಪದ್ಧತಿಕ್ಕಿಂತ ವಿಭಿನ್ನವಾಗಿರುತ್ತದೆ ಎಂದರು.ಈ ಸಂದರ್ಭದಲ್ಲಿ ಶಿವಮೊಗ್ಗದ ಟಿ.ಎಮ್. ಎ.ಇ. ಎಸ್. ನ ಸಹ ಪ್ರಾಧ್ಯಾಪಕ ನಾಗರಾಜ್ ಅಂಗಡಿ, ಆಡಳಿತ ಮಂಡಳಿಯ ಸದಸ್ಯರಾದ ಬಸವರಾಜ್ ಉಳ್ಳಾಗಡ್ಡಿ. ಪ್ರಭಣ್ಣ ಬಳಗಾನೂರ. ಎಸ್.ವಿ. ಪಾಟೀಲ್, ಶಾಲಾ ವಿದ್ಯಾರ್ಥಿಗಳು, ಮುಖ್ಯಸ್ಥರು, ಸಿಬ್ಬಂದಿ ವರ್ಗದವರು ಇದ್ದರು,