Students of Sanskrit Pathshala are attracted to Tunge
-ತುಂಗಾರತಿ ಮಂಟಪದಲ್ಲಿ ಬಾಗಿನ ಸಮರ್ಪಣಾ ಕಾರ್ಯಕ್ರಮಕ್ಕೆ ಪ್ರದೀಪ್ ತೇಲ್ಕರ್ ಚಾಲನೆ
----ಕನ್ನಡಪ್ರಭ ವಾರ್ತೆ ಹರಿಹರ
ಮಧ್ಯ ಕರ್ನಾಟಕದ ಜೀವನಾಡಿ ತುಂಗಭದ್ರಾ ನದಿಯು ಪಶ್ಚಿಮ ಘಟ್ಟಗಳ ಆಸರೆಯಿಂದ ವರ್ಷವಿಡೀ ತುಂಬಿ ಹರಿಯುತ್ತ, ರೈತಾಪಿ ವರ್ಗ ಮತ್ತು ಜನರ ಜೀವನದಿ ಆಗಿದೆ ಎಂದು ಸಂಸ್ಕೃತ ಪ್ರಾಧ್ಯಾಪಕ ಪ್ರದೀಪ್ ತೇಲ್ಕರ್ ಹೇಳಿದರು.ಶ್ರೀವಿದ್ಯಾನಿಧಿ ಫೌಂಡೇಶನ್‌ನ ಸಂಸ್ಕೃತ ಪಾಠಶಾಲಾ ವಿದ್ಯಾರ್ಥಿಗಳಿಂದ, ತುಂಗಭದ್ರಾ ನದಿಯ ತಟದಲ್ಲಿರುವ ತುಂಗಾರತಿ ಮಂಟಪದಲ್ಲಿ ಬಾಗಿನ ಸಮರ್ಪಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಕೃಷಿ, ಕುಡಿವ ನೀರು ಮತ್ತು ಜನರ ಬಳಕೆಗೂ ನದಿ ಆಸರೆ ಆಗಿದ್ದು, ಮಳೆಗಾಲದ ಪ್ರಾರಂಭದಲ್ಲಿ ನೀರಿನ ಹರಿವು ಕಡಿಮೆಯಾಗಿತ್ತು. ಪ್ರಕೃತಿಯ ಆಶೀರ್ವಾದದಿಂದ ತುಂಗಾ ಹಾಗೂ ಭದ್ರಾ ನದಿಗಳ ಪಾತ್ರಗಳಲ್ಲಿ ಮಳೆಯ ಅಬ್ಬರ ತುಸು ಹೆಚ್ಚಾಗಿದ್ದರಿಂದ ನದಿಯು ಮೈತುಂಬಿ ಹರಿಯುತ್ತಿರುವುದು ಸಂತಸ ತಂದಿದೆ.
ಈ ದಿಸೆಯಲ್ಲಿ ಬಾಗಿನ ಅರ್ಪಿಸುವ ಕಾರ್ಯಕ್ರಮ ಅರ್ಥಪೂರ್ಣ ಹಾಗೂ ಪ್ರಕೃತಿಗೆ ಧನ್ಯವಾದ ಸಲ್ಲಿಸುವ ಕಾರ್ಯಕ್ರಮ ಆಗಿದೆ. ಈ ನಿಟ್ಟಿನಲ್ಲಿ ವಿದ್ಯಾನಿಧಿ ಫೌಂಡೇಶನ್‌ಗೆ ನಾನು ಅಭಿನಂದಿಸುತ್ತೇನೆ. ಮಾನವ ಜನ್ಮ ಸಾರ್ಥಕಕ್ಕಾಗಿ ಗಂಗಾ ಸ್ನಾನ-ತುಂಗಾ ಪಾನ ಎಂದು ಹೇಳುತ್ತಾರೆ. ನಿತ್ಯ ತುಂಗಭದ್ರಾ ನದಿ ನೀರನ್ನು ಸವಿಯುತ್ತಿರುವ ನಾವೆಲ್ಲರೂ ಧನ್ಯರು. ಅದರಂತೆ ನದಿಯ ಪಾವಿತ್ರತೆ ಕಾಪಾಡುವುದು ನಮ್ಮೆಲ್ಲರ ಹೊಣೆ ಎಂದು ತಿಳಿಸಿದರು.ಫೌಂಡೇಶನ್‌ನ ಸಂಸ್ಥಾಪಕ ಅಧ್ಯಕ್ಷ ವಕೀಲ ವೀರೇಶ್ ಬ. ಅಜ್ಜಣ್ಣನವರ್, ಗೌರವಾಧ್ಯಕ್ಷ ಬಸವರಾಜ ವಿ ಅಜ್ಜಣ್ಣನವರ್, ನಿರ್ದೇಶಕ ಆರ್.ಎಲ್. ಯೋಗೇಶ್, ಕಾರ್ತಿಕ್.ಎಸ್.ಆರ್, ಚಂದ್ರಕಲಾ ಬಸವರಾಜ್, ವಿಜಯಲಕ್ಷ್ಮಿ ಗಣೇಶ್ ಮಾತನಾಡಿದರು.
ಸಂಸ್ಕೃತ ಪಾಠ ಶಾಲೆಯ ವಿದ್ಯಾರ್ಥಿಗಳಾದ ಕವಿತಾ ಎಸ್ ಪೇಟೆಮಠ, ಸುಷ್ಮಾ ಪಿ.ಸಿ, ರೇಖಾ ಮಹಾಂತೇಶ್, ಕಲ್ಲಮ್ಮ, ನಂದಿನಿ ಶೇಟ್, ಯಶಿಕಾ ಎಲಿಗಾರ್ ಪ್ರಾರ್ಥಿಸಿದರು. ಮುಖಂಡರಾದ ಕಂಚಿಕೆರೆ ಕರಿಬಸಣ್ಣ, ಶಿವಯೋಗಿ, ಪ್ರಶಾಂತ್, ವಿಶ್ವನಾಥ್, ನಾಗರಾಜ್, ಪಾಂಡುರಂಗ ಭಾಗವಹಿಸಿದ್ದರು.ಫೋಟೋ
೨೪ ಹೆಚ್.ಆರ್.ಆರ್ ೧ಶ್ರೀವಿದ್ಯಾನಿಧಿ ಫೌಂಡೇಶನ್‌ನ ಸಂಸ್ಕೃತ ಪಾಠಶಾಲಾ ವಿದ್ಯಾರ್ಥಿಗಳಿಂದ ತುಂಗಭದ್ರಾ ನದಿಯ ತಟದಲ್ಲಿರುವ ತುಂಗಾರತಿ ಮಂಟಪದಲ್ಲಿ ಸೋಮವಾರ ಬಾಗಿನ ಸಮರ್ಪಣಾ ಕಾರ್ಯಕ್ರಮ ನಡೆಯಿತು.