ಸಾರಾಂಶ
ಎಲ್ಲ ಮೇಧಾವಿ ವಿದ್ಯಾರ್ಥಿಗಳಿಗೆ ಪ್ರತಿ ವಿಷಯದಲ್ಲಿ ಬರುವ ಪಾಠದಲ್ಲಿ ಅರ್ಥವಾಗದ ಅಂಶಗಳನ್ನು ಪಟ್ಟಿ ಮಾಡಿ, ವಿಷಯ ಪರಿಣತರಿಂದ ವಿವರಣೆ ಪಡೆಯಬೇಕು.
ನರಗುಂದ: ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು ವಿಷಯ ಪರಿಣತರನ್ನು ಕೇಳಿ ಜ್ಞಾನ ವೃದ್ಧಿಸಿಕೊಂಡು ಪ್ರತಿ ವಿಷಯದಲ್ಲೂ ಹೆಚ್ಚಿನ ಅಂಕ ಗಳಿಸಬೇಕು ಎಂದು ಶಿಕ್ಷಣ ಇಲಾಖೆ ಉಪನಿರ್ದೇಶಕ ಆರ್.ಎಸ್. ಬುರಡಿ ಹೇಳಿದರು.
ಜಿಪಂ, ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಲಯ, ಬೆನಕನಕೊಪ್ಪ ಮೊರಾರ್ಜಿ ವಸತಿ ಪ್ರೌಢಶಾಲೆ, ಮಾಧ್ಯಮಿಕ ಶಾಲಾ ನೌಕರರ ಸಂಘ ಹಾಗೂ ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಆಶ್ರಯದಲ್ಲಿ ಪಟ್ಟಣದ ಬಾಲಕಿಯರ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಮೇಧಾವಿ ವಿದ್ಯಾರ್ಥಿಗಳ ಪುನಶ್ಚೇತನ, ವಸತಿ ಸಹಿತ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಎಲ್ಲ ಮೇಧಾವಿ ವಿದ್ಯಾರ್ಥಿಗಳಿಗೆ ಪ್ರತಿ ವಿಷಯದಲ್ಲಿ ಬರುವ ಪಾಠದಲ್ಲಿ ಅರ್ಥವಾಗದ ಅಂಶಗಳನ್ನು ಪಟ್ಟಿ ಮಾಡಿ, ವಿಷಯ ಪರಿಣತರಿಂದ ವಿವರಣೆ ಪಡೆಯಬೇಕು. ಪ್ರತಿ ವಿಷಯದಲ್ಲೂ ಸಂಪೂರ್ಣ ಅಂಕ ಗಳಿಸಲು ಯತ್ನಿಸಬೇಕು ಎಂದರು.ಶಿಕ್ಷಣಾಧಿಕಾರಿ ಡಾ. ಗುರುನಾಥ ಹೂಗಾರ ಮಾತನಾಡಿ, ಶಿಬಿರದಲ್ಲಿ ಪಾಲ್ಗೊಂಡಿದ್ದ ತಾಲೂಕಿನ ಎಲ್ಲ ಮೇಧಾವಿ ವಿದ್ಯಾರ್ಥಿಗಳಿಗೆ ಯಾವ ರೀತಿ ಹೆಚ್ಚಿನ ಅಂಕ ಗಳಿಸಬೇಕು ಎಂದು ಸಲಹೆ ನೀಡಿದರು. ಶೇ. 95 ಅಂಕ ಗಳಿಸುವ ಸಾಮರ್ಥ್ಯವಿರುವ ಮೇಧಾವಿ ವಿದ್ಯಾರ್ಥಿಗಳು ಇನ್ನುಳಿದ ಶೇ. 5 ಅಂಕ ಗಳಿಸಲು ಪ್ರಯತ್ನಿಸಿ ಎಂದರು.
ಗದಗ ಶಿಕ್ಷಣಾಧಿಕಾರಿ ವಿ.ವಿ. ನಡುವಿನಮನಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಶಂಕರ ಹಡಗಲಿ, ಬಿ.ಎಫ್. ಮಜ್ಜಗಿ, ಕ್ಷೇತ್ರ ಸಮನ್ವಯಧಿಕಾರಿ ಬಿ.ಎಫ್. ಮಜ್ಜಗಿ, ಶಿಕ್ಷಕರಾದ ಪಿ.ಸಿ. ಕಲಹಾಳ, ಜೆಡ್.ಎಂ. ಖಾಜಿ, ಎಸ್.ಎಲ್. ಮರಿಗೌಡರ, ಎಂ.ಆರ್. ನಾಯಕ, ರೂಪಾ ನಾಯ್ಡು, ಜಿ.ಎನ್. ದೊಡ್ಡಲಿಂಗಪ್ಪನವರ, ಬಿ.ಎ. ನದಾಫ, ಶಂಕರಗೌಡ ನಾಯ್ಕರ, ಉಮೇಶ ಗಣಿತ, ಶಂಕರ ನರಗುಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಬಿ.ಎಫ್. ಮಜ್ಜಗಿ ಸ್ವಾಗತಿಸಿದರು. ನಿತಿನ್ ಕೇಸರಕರ ಕಾರ್ಯಕ್ರಮ ನಿರೂಪಿಸಿದರು.