ಸಾರಾಂಶ
ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು ಪರೀಕ್ಷೆ ಸಮಯದವರೆಗೆ ಓದಿನ ಬಗ್ಗೆ ಹೆಚ್ಚು ಗಮನ ನೀಡಿ ಅಭ್ಯಾಸ ಮಾಡಬೇಕೆಂದು ತಾಲೂಕು ಶಿಕ್ಷಣ ಸಂಯೋಜಕರಾದ ಬಿ.ಎಫ್. ಮಜ್ಜಿಗಿ ಹೇಳಿದರು.
ನರಗುಂದ: ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು ಪರೀಕ್ಷೆ ಸಮಯದವರೆಗೆ ಓದಿನ ಬಗ್ಗೆ ಹೆಚ್ಚು ಗಮನ ನೀಡಿ ಅಭ್ಯಾಸ ಮಾಡಬೇಕೆಂದು ತಾಲೂಕು ಶಿಕ್ಷಣ ಸಂಯೋಜಕರಾದ ಬಿ.ಎಫ್. ಮಜ್ಜಿಗಿ ಹೇಳಿದರು.
ಅವರು ತಾಲೂಕಿನ ಕಣಿಕಿಕೊಪ್ಪ ಗ್ರಾಮದ ಶ್ರೀ ಎನ್.ಸಿ.ಕೆ ಸರ್ಕಾರಿ ಪ್ರೌಢ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ತಾಯಿಂದಿರ ಸಭೆಯಲ್ಲಿ ಮಾತನಾಡಿದರು.ಈ ವರ್ಷ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯುವ 44 ವಿದ್ಯಾರ್ಥಿಗಳು ಓದಿನ ಬಗ್ಗೆ ಹೆಚ್ಚು ಸಮಯ ನೀಡಿ ಉತ್ತಮ ಅಭ್ಯಾಸ ಮಾಡಿದರೆ ನೀವು ಉತ್ತಮ ಫಲಿತಾಂಶ ಶಾಲೆಗೆ ತರಲು ಸಾಧ್ಯವಾಗುತ್ತದೆ. ತಾಯಿಂದಿರು ಈ ನಿಮ್ಮ ಮಕ್ಕಳಿಗೆ ಶಾಲೆ ಬಿಟ್ಟ ನಂತರ ಮನೆ ಕೆಲಸ ಹಚ್ಚದೇ ಅವರನ್ನು ಅಭ್ಯಾಸ ಮಾಡಲು ಹೆಚ್ಚಿನ ಸಮಯ ಅವಕಾಶ ಮಾಡಿಕೊಡಬೇಕೆಂದು ಕರೆ ನೀಡಿದರು.
ಪ್ರಭಾರಿ ಮುಖ್ಯೋಪಾಧ್ಯಾಯ ಕೆ.ಬಿ. ಕುರಹಟ್ಟಿವರು ಮಾತನಾಡಿ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಹೆಚ್ಚಿನ ಅಂಕ ಪಡೆಯಬೇಕೆಂದರೆ ಮೊದಲು ನೀವು ಸಮಯಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಪ್ರತಿ ದಿವಸ ನೀವು ಓದಲು ಸಮಯದ ಯೋಜನೆ ಹಾಕಿಕೊಂಡು ಹೆಚ್ಚಿನ ಆಸಕ್ತಿ ನೀಡಿ ಉತ್ತಮವಾಗಿ ಅಭ್ಯಾಸ ಮಾಡಿದರೆ ಎಲ್ಲಾ ವಿದ್ಯಾರ್ಥಿಗಳು ಈ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿ ನಿಮ್ಮ ಶಾಲೆಗೆ ಮತ್ತು ತಂದೆ ತಾಯಿಗಳಿಗೆ ಗೌರವ ತರಬೇಕು. ಅದೇ ರೀತಿ ವಿದ್ಯಾರ್ಥಿಗಳ ಮನೆಯವರು ಓದಲು ವಿದ್ಯಾರ್ಥಿಗಳಿಗೆ ಹೆಚ್ಚಿನ ಕಾಳಜಿ ತೆಗೆದುಕೊಳ್ಳಬೇಕೆಂದು ಹೇಳಿದರು.ಎಸ್.ಡಿ.ಎಂ.ಸಿ ಅಧ್ಯಕ್ಷ ರಮೇಶಗೌಡ ರಾಯನಗೌಡ್ರ, ಈರಣ್ಣ ನಂದಿ, ವಿಠಲರಡ್ಡಿ ಮೂಗನೂರ, ಬಸವ್ವ ಕೌಜಗೇರಿ, ಗೂಳಪ್ಪ ಕೊಳ್ಳಿಯವರ, ಗೀತಾ ಬೇಡಗೌಡರ, ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು, ತಾಯಿಂದರು ಇದ್ದರು.