ವಿದ್ಯಾರ್ಥಿಗಳು ಮೊಬೈಲ್ ಸಂಸ್ಕೃತಿಯಿಂದ ದೂರವಿರಬೇಕು: ಡಾ.ಪ್ರಬುದ್ಧ

| Published : Dec 22 2024, 01:34 AM IST

ವಿದ್ಯಾರ್ಥಿಗಳು ಮೊಬೈಲ್ ಸಂಸ್ಕೃತಿಯಿಂದ ದೂರವಿರಬೇಕು: ಡಾ.ಪ್ರಬುದ್ಧ
Share this Article
  • FB
  • TW
  • Linkdin
  • Email

ಸಾರಾಂಶ

ಶೃಂಗೇರಿ, ಮೊಬೈಲ್ ನಿಂದ ಎಷ್ಟು ಅನುಕೂಲವಾಗುತ್ತಿದೆಯೋ ಅಷ್ಟೆ ಅನಾನುಕೂಲವೂ ಇದೆ. ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತಿದೆ. ಮಕ್ಕಳ ಬದುಕನ್ನೇ ಹಾಳು ಮಾಡುತ್ತಿದೆ. ವಿದ್ಯಾರ್ಥಿಗಳು ಮೊಬೈಲ್ ಸಂಸ್ಕೃತಿಯಿಂದ ದೂರವಿಡಬೇಕು ಎಂದು ಐಎಫ್ಎಸ್ ಅಧಿಕಾರಿ ಡಾ.ಪ್ರಬುದ್ಧ ಹೇಳಿದರು.

ಪಟ್ಟಣದ ಸರ್ಕಾರಿ ಪ್ರೌಡಶಾಲೆ ಆವರಣದಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ

ಕನ್ನಡಪ್ರಭ ವಾರ್ತೆ, ಶೃಂಗೇರಿ

ಮೊಬೈಲ್ ನಿಂದ ಎಷ್ಟು ಅನುಕೂಲವಾಗುತ್ತಿದೆಯೋ ಅಷ್ಟೆ ಅನಾನುಕೂಲವೂ ಇದೆ. ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತಿದೆ. ಮಕ್ಕಳ ಬದುಕನ್ನೇ ಹಾಳು ಮಾಡುತ್ತಿದೆ. ವಿದ್ಯಾರ್ಥಿಗಳು ಮೊಬೈಲ್ ಸಂಸ್ಕೃತಿಯಿಂದ ದೂರವಿಡಬೇಕು ಎಂದು ಐಎಫ್ಎಸ್ ಅಧಿಕಾರಿ ಡಾ.ಪ್ರಬುದ್ಧ ಹೇಳಿದರು.

ಪಟ್ಟಣದ ಸರ್ಕಾರಿ ಪ್ರೌಡಶಾಲೆ ಆವರಣದಲ್ಲಿ ನಡೆದ ಶಾಲಾ ವಾರ್ಷಿಕೋತ್ಸವದಲ್ಲಿ ಮಾತನಾಡಿದರು. ಇತ್ತಿಚಿನ ದಿನಗಳಲ್ಲಿ ಮೊಬೈಲ್ ನಿಂದ ಉಂಟಾಗುತ್ತಿರುವ ದುಷ್ಪರಿಣಾಮಗಳನ್ನು ಕಾಣುತ್ತಿದ್ದೇವೆ. ಅತಿಯಾದರೆ ಅಮೃತವೂ ವಿಷ ಎಂಬಂತೆ ನಾವು ಪ್ರತಿಯೊಂದನ್ನು ಮಿತವಾಗಿ ಬಳಸಬೇಕು. ಮೊಬೈಲ್, ಕಂಪ್ಯೂಟರ್, ತಂತ್ರಜ್ಞಾನಗಳನ್ನು ಎಷ್ಟು ಬೇಕೊ ಅಷ್ಟೇ ಬಳಸಬೇಕು. ಉತ್ತಮ ಸಾಧನೆ ಮಾಡಬೇಕು.

ಸರ್ಕಾರಿ ಶಾಲೆಗಳಲ್ಲಿ ಉತ್ತಮ, ನುರಿತ ಶಿಕ್ಷಕರಿದ್ದು ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ. ಎಲ್ಲಾ ರೀತಿ ಸೌಲಭ್ಯಗಳಿದ್ದು ಉತ್ತಮ ಪಲಿತಾಂಶಗಳು ಕೂಡ ಬರುತ್ತಿದೆ. ಆದರೆ ಜನರು ಖಾಸಗಿ ಶಾಲೆಗಳತ್ತ ಆಕರ್ಷಿತರಾಗುತ್ತಿರುವುದರಿಂದ ಸರ್ಕಾರಿ ಶಾಲೆಗಳು ಮುಚ್ಚುತ್ತಿರುವುದು ವಿಷಾದಕರ ಸಂಗತಿ.

ಖಾಸಗಿ ಶಾಲೆಗಳು ಹೆಚ್ಚು ಡೊನೇಷನ್, ದುಬಾರಿ ಶುಲ್ಕ ಪಡೆದು ಹೆಚ್ಚಿನ ಅಂಕ, ಫಲಿತಾಂಶ ಪಡೆಯುವಂತೆ ಮಕ್ಕಳ ಮೇಲೆ ಒತ್ತಡ ಹಾಕಿ, ಮಕ್ಕಳು ಹಿಂದೆ ಬಿದ್ದಾಗ ಪೋಷಕರನ್ನು ದೂರುತ್ತವೆ. ಸರ್ಕಾರಿ ಶಾಲೆಗಳಲ್ಲಿ ಓದಿದವರು ದೇಶದ ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಸರ್ಕಾರಿ ಶಾಲೆಗಳೆಂಬ ಕಡೆಗಣನೆ, ನಿರ್ಲಕ್ಷ್ಯ ಮನೋಭಾವನೆ ಸಲ್ಲದು.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಸಾಮಾನ್ಯ ಜ್ಞಾನ ಹೆಚ್ಚಿಸಿಕೊಳ್ಳಬೇಕು ಎಂದರು. ವಿದ್ಯಾರಣ್ಯಪುರ ಗ್ರಾಪಂ ಅಧ್ಯಕ್ಷ ಪ್ರವೀಣ್ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿದರು. ಶಾಲಾಭಿವೃದ್ಧಿ ಸಮಿತಿ ಆನಂದಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಆಟೋಟ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಡಾ.ನಿರಂಜನ್ ಕುಮಾರ್, ಶಶಿಧರ್, ವೆಂಕಟೇಶ್ ಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

20 ಶ್ರೀ ಚಿತ್ರ 2-

ಶೃಂಗೇರಿ ಪಟ್ಟಣದ ಸರ್ಕಾರಿ ಪ್ರೌಡಶಾಲೆ ವಾರ್ಷಿಕೋತ್ಸವ ಸಮಾರಂಭವನ್ನು ವಿದ್ಯಾರಣ್ಯಪುರ ಗ್ರಾಪಂ ಅಧ್ಯಕ್ಷ ಪ್ರವೀಣ್ ಪೂಜಾರಿ ಉದ್ಘಾಟಿಸಿದರು.