ಸಾರಾಂಶ
- ಶ್ರೀಮತಿ ಗಿರಿಯಮ್ಮ ಆರ್. ಕಾಂತಪ್ಪ ಕಾಲೇಜಿನಲ್ಲಿ ವಿವಿಧ ವಿಭಾಗಗಳ ಉದ್ಘಾಟನೆ ಕಾರ್ಯಕ್ರಮ - - - ಕನ್ನಡಪ್ರಭ ವಾರ್ತೆ ಹರಿಹರ ವಿದ್ಯಾರ್ಥಿನಿಯರು ನಿರಂತರ ಪರಿಶ್ರಮ ಏಕಾಗ್ರತೆಯಿಂದ ಅಧ್ಯಯನ ಮಾಡುವ ಮೂಲಕ ಭವಿಷ್ಯದ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಪೌರಸೇವಾ ಸಮಿತಿಯ ಕಾರ್ಯದರ್ಶಿ ಎಸ್. ಪ್ರಸನ್ನಕುಮಾರ್ ಹೇಳಿದರು.
ನಗರದ ಶ್ರೀಮತಿ ಗಿರಿಯಮ್ಮ ಆರ್. ಕಾಂತಪ್ಪ ಶ್ರೇಷ್ಠಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ 2024- 2025ನೇ ಸಾಲಿನ ಸಾಂಸ್ಕೃತಿಕ ವೇದಿಕೆ, ರಾಷ್ಟ್ರೀಯ ಸೇವಾ ಯೋಜನೆ, ಕರಿಯರ್ ಮತ್ತು ಕೌನ್ಸಿಲಿಂಗ್ ವಿಭಾಗ, ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ರೆಡ್ ಕ್ರಾಸ್ ವಿಭಾಗಗಳ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ನಮ್ಮ ಮಹಾವಿದ್ಯಾಲಯದಲ್ಲಿ ಅಧ್ಯಯನ ಮಾಡಿದ ಹಿರಿಯ ವಿದ್ಯಾರ್ಥಿನಿಯರು ಅತ್ಯುತ್ತಮ ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದಾರೆ. ಅನೇಕರು ಜಿಲ್ಲಾ ಹಾಗೂ ರಾಜ್ಯಮಟ್ಟದ ಕ್ರೀಡೆಗಳಲ್ಲಿ ಪದಕ ಪಡೆಯುವ ಮೂಲಕ ಕಾಲೇಜಿಗೂ ಹಾಗೂ ನಗರಕ್ಕೂ ಹೆಮ್ಮೆ ತಂದಿದ್ದಾರೆ. ಇಲ್ಲಿನ ವಿದ್ಯಾರ್ಥಿನಿಯರು ನಾಡಿನ ಅನೇಕ ಇಲಾಖೆಗಳಲ್ಲಿ ಸೇವೆ ಸಲ್ಲಿಸುವ ಮೂಲಕ ಆಡಳಿತ ಮಂಡಳಿಗೆ ಹೆಮ್ಮ ತಂದಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
2023-2024ನೇ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಪ್ರತಿ ತರಗತಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಹಾಗೂ ದಾವಣಗೆರೆ ವಿಶ್ವವಿದ್ಯಾನಿಲಯದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ, ವಿಜೇತರಾದವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.ಪೌರಸೇವಾ ಸಮಿತಿ ಅಧ್ಯಕ್ಷ ಜಿ.ಎಂ. ತಿಪ್ಪೇಸ್ವಾಮಿ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿದರು. ಪೌರಸೇವಾ ಸಮಿತಿಯ ನಿರ್ದೇಶಕರಾದ ಸತ್ಯನಾರಾಯಣ, ಸಾಂಸ್ಕೃತಿಕ ವೇದಿಕೆಯ ಅಮೃತ ಎಸ್. ಕೊಣ್ಣೂರು, ಉಪನ್ಯಾಸಕ ಹಾಲಪ್ಪ ರೆಡ್ಡಿ, ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಎಚ್.ಎಂ. ಗುರುಬಸವರಾಜಯ್ಯ, ವಾಣಿಜ್ಯ ವಿಭಾಗದ ಉಪನ್ಯಾಸಕಿ ಐ.ಕೆ. ರಿಯಾ, ವಿದ್ಯಾರ್ಥಿನಿ ಬಿ.ವಿಜಯಲಕ್ಷ್ಮೀ, ಸಿಬ್ಬಂದಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ವಿದ್ಯಾರ್ಥಿನಿಯರಾದ ಗಂಗಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ರಮ್ಯಾ ಬಿ. ಗೊಲ್ಲರ್ ಸ್ವಾಗತಿಸಿದರು. ಅಂಕಿತ ಕೇಶವ ಗುಡಿ ವಂದಿಸಿದರು.- - -
ಬಾಕ್ಸ್ * ಯುವತಿಯರಿಗೆ ವಿದ್ಯೆಯೇ ಭೂಷಣ: ನಾಗಮಣಿ ಶಾಸ್ತ್ರಿ ಧಾರ್ಮಿಕ ಚಿಂತಕಿ ಕೆ. ನಾಗಮಣಿ ಶಾಸ್ತ್ರಿ ಮಾತನಾಡಿ, ಇಂದಿನ ಯುವತಿಯರಿಗೆ ವಿದ್ಯೆಯೇ ಭೂಷಣ. ವಿದ್ಯಾವಂತರಾದ ಯುವತಿಯರಿಗೆ ಪ್ರಸ್ತುತ ದಿನಮಾನಗಳಲ್ಲಿ ಅತ್ತ್ಯುತ್ತಮ ಅವಕಾಶಗಳು ಇವೆ. ವಿದ್ಯೆಯನ್ನು ಕರಗತ ಮಾಡಿಕೊಳ್ಳಲು ಪ್ರತಿಯೊಬ್ಬರಲ್ಲೂ ಆತ್ಮಚಿಂತನೆ, ಗುರು, ಗುರಿ, ಸ್ಪಷ್ಟತೆ, ಏಕಾಗ್ರತೆ, ನಿರಂತರ ಅಧ್ಯಯನ, ಸಮಯ ಪರಿಪಾಲನೆ ಅತ್ಯಗತ್ಯ ಎಂದರು. ಪಠ್ಯದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ, ಸಮಾಜ ಸೇವೆ, ಅಳವಡಿಸಿಕೊಂಡಲ್ಲಿ ಹೆತ್ತವರ ಕನಸನ್ನು ನನಸು ಮಾಡುವುದರ ಜೊತೆಗೆ ಸಮಾಜ ಮತ್ತು ರಾಷ್ಟ್ರದ ಋಣ ತೀರಿಸಲು ಪ್ರಯತ್ನಿಸಬೇಕು. ಯುವಜನತೆ ದೇಶದ ಸಂಪತ್ತಾಗಿದ್ದು, ಸತ್ಯ ಮಾರ್ಗದ ದುಡಿಮೆಯಿಂದ ದುಡ್ಡನ್ನು ಸಂಪಾದಿಸಬೇಕು. ವಿದ್ಯಾರ್ಥಿಗಳಿಗೆ ವಿದ್ಯೆಯೇ ಪರಬ್ರಹ್ಮ ಶಕ್ತಿಯಾಗಿದೆ. ಕಲಿತ ವಿದ್ಯೆ ವ್ಯಕ್ತಿತ್ವ ವಿಕಸನಕ್ಕೆ ದಾರಿಯಾಗಬೇಕು ಎಂದು ಸಲಹೆ ನೀಡಿದರು.- - - -13ಎಚ್‍ಆರ್‍ಆರ್01:
ಹರಿಹರಿದ ಶ್ರೀಮತಿ ಗಿರಿಯಮ್ಮ ಆರ್.ಕಾಂತಪ್ಪ ಶ್ರೇಷ್ಠಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯದಲ್ಲಿ 2024- 2025ನೇ ಸಾಲಿನ ಸಾಂಸ್ಕೃತಿಕ ವೇದಿಕೆ, ರಾಷ್ಟ್ರೀಯ ಸೇವಾ ಯೋಜನೆ, ಕರಿಯರ್ ಮತ್ತು ಕೌನ್ಸಿಲಿಂಗ್ ವಿಭಾಗ, ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ರೆಡ್ ಕ್ರಾಸ್ ವಿಭಾಗಗಳ ಉದ್ಘಾಟನಾ ಕಾರ್ಯಕ್ರಮದ ಉದ್ಘಾಟನೆ ನಡೆಯಿತು.