ಹುಣಸಗಿ ಸರ್ಕಾರಿ ಜಮೀನು ರಕ್ಷಣೆಗೆ ಆಗ್ರಹಿಸಿ ಮನವಿ ಸಲ್ಲಿಕೆ

| Published : Aug 30 2024, 01:07 AM IST

ಸಾರಾಂಶ

Submission of petition demanding protection of Hunsagi government land

-ರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಳ ಜಿಲ್ಲಾ ಸಮಿತಿಯಿಂದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಮನವಿ

----

ಕನ್ನಡಪ್ರಭ ವಾರ್ತೆ ಹುಣಸಗಿ

ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿರುವ ಸರ್ವೇ ನಂ. 398 ಖುಲ್ಲಾ ಜಾಗವನ್ನು ಸರ್ಕಾರಿ ಕಚೇರಿಗಳಿಗೆ ಮೀಸಲಿಡಬೇಕು ಎಂದು ಆಗ್ರಹಿಸಿ ರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಳ ಜಿಲ್ಲಾ ಸಮಿತಿ ವತಿಯಿಂದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಕಾಶಿನಾಥ ಹಾದಿಮನಿ ಮಾತನಾಡಿ, ಸರ್ವೇ ನಂ.398 ರಲ್ಲಿ ಸರ್ಕಾರದ ಜಾಗವಿದ್ದು, ಈಗಾಗಲೇ ಈ ಜಾಗದಲ್ಲಿ ರೈತ ಸಂಪರ್ಕ ಕೇಂದ್ರವಿದೆ. ಇನ್ನುಳಿದ ಖುಲ್ಲಾ ಜಾಗವನ್ನು ಸರ್ಕಾರಿ ಕಚೇರಿಗಳಿಗೆ ಹಾಗೂ ಶಿಕ್ಷಣಕ್ಕೆ ಮತ್ತು ಹಿಂದುಳಿದ ಜಾತಿ ಭವನಗಳಿಗೆ ಮೀಸಲಿಡಬೇಕು. ಖಾಲಿ ನಿವೇಶನದಲ್ಲಿ ಸರ್ಕಾರಿ ನಾಮಫಲಕ ಅಳವಡಿಸಬೇಕು. ಜಾಗವನ್ನು ಅತಿಕ್ರಮಣ ಮಾಡಿದ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಹಿಂದೆ ವಾರ್ಡ್ ನಂ.9ರ ವಿದ್ಯಾನಗರ ಕಾಲೋನಿಯಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಿ ರೈತರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಸಲ್ಲಿಸಿ, ತಿಂಗಳು ಕಳೆದರೂ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಂದ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಸವರಾಜ ದೊಡ್ಡಮನಿ, ಬಸವರಾಜ ಕಟ್ಟಿಮನಿ, ಮಂಜುನಾಥ ಹಿಪ್ಪರಗಿ, ನಿಂಗಣ್ಣ ದ್ಯಾಮನಾಳ, ನಿಜಲಿಂಗಪ್ಪ ಅಗ್ನಿ ಇದ್ದರು.

-

ಫೋಟೊ:

29ವೈಡಿಆರ್1: ಹುಣಸಗಿ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿರುವ ಸರ್ವೇ ನಂ.398 ಖುಲ್ಲಾ ಜಾಗವನ್ನು ಸರ್ಕಾರಿ ಕಚೇರಿಗಳಿಗೆ ಮೀಸಲಿಡಬೇಕು ಎಂದು ಆಗ್ರಹಿಸಿ ರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಳ ಜಿಲ್ಲಾ ಸಮಿತಿಯಿಂದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಲಾಯಿತು.