ಸಾರಾಂಶ
ವಿದ್ಯಾರ್ಥಿ ಸಂಘದ ಉದ್ಘಾಟನೆ ಮತ್ತು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಇಲ್ಲಿನ ಸಂತ ಜೋಸೆಫರ ವಿದ್ಯಾಸಂಸ್ಥೆಗಳ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘದ ಉದ್ಘಾಟನೆ ಮತ್ತು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಚರ್ಚ್ ಸಭಾಂಗಣದಲ್ಲಿ ನಡೆಯಿತು.ಸಮಾರಂಭ ಉದ್ಘಾಟಿಸಿ ಮಾತನಾಡಿದ ವೀರಾಜಪೇಟೆ ಸೆಂಟ್ ಆನ್ಸ್ ವಿದ್ಯಾಸಂಸ್ಥೆ ಮುಖ್ಯಸ್ಥ ರೆ.ಫಾ. ಮದುಲೈ ಮುತ್ತು, ವಿದ್ಯಾರ್ಥಿಗಳು ಸತತ ಪರಿಶ್ರಮ, ಗುರಿ, ಜಾಗ್ರತೆ, ಒಳ್ಳೆತನ ಹೊಂದಿದ್ದರೆ ಮಾತ್ರ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ. ಶಿಸ್ತು ಮೈಗೂಡಿಸಿಕೊಳ್ಳಬೇಕು. ನಾಯಕತ್ವಕ್ಕೆ ಉತ್ತಮ ನಡವಳಿಕೆಯೇ ಅಡಿಪಾಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂತ ಜೋಸೆಫರ ವಿದ್ಯಾಸಂಸ್ಥೆಗಳ ಮುಖ್ಯಸ್ಥ ಫಾ.ಅವಿನಾಶ್ ಮಾತನಾಡಿ, ವಿದ್ಯಾರ್ಥಿಗಳು ಸಮಯದ ಸದ್ಬಳಕೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಎಂತಹ ಸಂದರ್ಭದಲ್ಲೂ ಸಮಯದ ವ್ಯರ್ಥ ಸಲ್ಲದು. ನಾಟಕೀಯತೆಗಿಂತ ವಾಸ್ತವತೆಯಲ್ಲಿ ಬದುಕಬೇಕು. ಪೋಷಕರ ಪರಿಶ್ರಮ ವ್ಯರ್ಥವಾಗದಂತೆ ಬದುಕು ರೂಪಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ಓಎಲ್‌ವಿ ವಿದ್ಯಾಸಂಸ್ಥೆಯ ಮುಖ್ಯಸ್ಥರಾದ ಜೋಶ್ನಾ, ದಿವ್ಯಜ್ಯೋತಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ, ಚರ್ಚ್ ಆಡಳಿತ ಮಂಡಳಿ ಸದಸ್ಯ ವಿನ್ಸಿ ಡಿಸೋಜ, ಪದವಿ ಕಾಲೇಜು ಪ್ರಾಂಶುಪಾಲ ಹರೀಶ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಥೋಮಸ್ ಅಂತೋಣಿ, ಪ್ರೌಢಶಾಲಾ ವಿಭಾಗದ ಮುಖ್ಯೋಪಾಧ್ಯಾಯ ಹ್ಯಾರಿ ಮೋರಸ್ ಇದ್ದರು.
ಕಾಲೇಜು ವಿದ್ಯಾರ್ಥಿ ಸಂಘ ಅಧ್ಯಕ್ಷರಾಗಿ ಎಂ. ದಿವಿನ್, ಕಾರ್ಯದರ್ಶಿಯಾಗಿ ಹಿತೈಷಿ, ಕ್ರೀಡಾ ಸಮಿತಿಯ ಅಧ್ಯಕ್ಷ ಶಿವಕುಮಾರ್, ಉಪಾಧ್ಯಕ್ಷೆ ನಿತ್ಯಾ, ಸಾಂಸ್ಕೃತಿಕ ಸಮಿತಿಯ ನೀತಾ-ಶಾನ್ ಗೌಡ, ಶಿಸ್ತು ಸಮಿತಿಯ ಅಧ್ಯಕ್ಷರಾಗಿ ಇಂದುನಾಥ್-ಉಪಾಧ್ಯಕ್ಷರಾಗಿ ರಿಶಾಲ್ ಸಿಕ್ವೇರಾ, ಸ್ವಚ್ಛತಾ ಸಮಿತಿಗೆ ಪ್ರಜ್ಞಾ-ಸೃಜನ್, ಎನ್‌ಎಸ್‌ಎಸ್ ನಾಯಕನಾಗಿ ಸೃಜನ್- ಉಪ ನಾಯಕಿಯಾಗಿ ಹರ್ಷಿತ, ರೆಡ್ ಕ್ರಾಸ್ ಸಮಿತಿಗೆ ಯೋಗೇಶ್ವರ್-ದೀಪಾಲಿ, ಇ.ಎಲ್.ಸಿ. ಸಮಿತಿಗೆ ಪ್ರನೂಶ್-ವಿಯೋಲಿನ್ ಲೋಬೋ, ರೋವರ್ಸ್ ಕ್ಲಬ್‌ಗೆ ವೈಭವ್, ರೇಂಜರ್ಸ್ ಕ್ಲಬ್‌ಗೆ ಆದ್ಯಾ, ಇಕೋ ಕ್ಲಬ್‌ಗೆ ತನ್ಮಯ್-ಜೆಸ್ವಿನ್, ರೆಡ್ ಹೌಸ್‌ಗೆ ಮೋಕ್ಷಿತ್, ಗ್ರೀನ್ ಹೌಸ್‌ಗೆ ಹರಿಣಿ, ಬ್ಲೂ ಹ್ಸೌಸ್‌ಗೆ ನಂದಿನಿ, ಯೆಲ್ಲೋ ಹೌಸ್‌ಗೆ ಅಮೃತ ಆಯ್ಕೆಯಾಗಿದ್ದು, ಅಧಿಕಾರ ಸ್ವೀಕರಿಸಿದರು.ಆಡಳಿತ ಮಂಡಳಿ ಪದಾಧಿಕಾರಿಗಳಾಗಿ ನಿಖಿಲೇಶ್, ರತನ್, ವೇದಿತ, ಸಂಜಯ್, ರಿತು, ನಿತಿನ್, ವೈಷ್ಣವಿ, ಕುಶಾಲ್, ಧನ್ಯ, ವೆಂಕಟೇಶ್, ತೌಫೀನಾ, ಮಾನಸ ಅವರುಗಳು ಆಯ್ಕೆಯಾಗಿದ್ದು, ವಿದ್ಯಾರ್ಥಿ ಸಂಘದ ಎಲ್ಲಾ ನಾಯಕರಿಗೆ ಫಾ. ಅವಿನಾಶ್, ಪ್ರತಿಜ್ಞಾವಿಧಿ ಬೋಧಿಸಿದರು.
ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಉಪನ್ಯಾಸಕರುಗಳಾದ ಕಲ್ಪನಾ, ಸೋನಿ, ದೀಪ್ತಿ, ಗಾನವಿ ಕಾರ್ಯಕ್ರಮ ನಿರ್ವಹಿಸಿದರು.