ಗ್ಯಾರೆಂಟಿ ಯೋಜನೆಯಿಂದಾದ ಅನುಕೂಲದ ಯಶೋಗಾಥೆ ಸಲ್ಲಿಸಿ: ಗ್ಯಾರಂಟಿ ಸಮಿತಿಯ ಜಿಲ್ಲಾಧ್ಯಕ್ಷ ಸತೀಶ ಪಿ ನಾಯ್ಕ

| Published : Jan 19 2025, 02:20 AM IST / Updated: Jan 19 2025, 09:41 AM IST

ಗ್ಯಾರೆಂಟಿ ಯೋಜನೆಯಿಂದಾದ ಅನುಕೂಲದ ಯಶೋಗಾಥೆ ಸಲ್ಲಿಸಿ: ಗ್ಯಾರಂಟಿ ಸಮಿತಿಯ ಜಿಲ್ಲಾಧ್ಯಕ್ಷ ಸತೀಶ ಪಿ ನಾಯ್ಕ
Share this Article
  • FB
  • TW
  • Linkdin
  • Email

ಸಾರಾಂಶ

ಯಲ್ಲಾಪುರ ತಾಪಂ ಸಭಾಭವನದಲ್ಲಿ ಜ. ೧೮ರಂದು ನಡೆದ ಜಿಲ್ಲೆ ಹಾಗೂ ತಾಪಂ ಗ್ಯಾರಂಟಿ ಸಮಿತಿಯ ಸಭೆ ನಡೆಯಿತು.

ಯಲ್ಲಾಪುರ: ಪ್ರತಿ ತಾಲೂಕಿನ ಫಲಾನುಭವಿಗಳಿಗೆ ಗ್ಯಾರಂಟಿ ಯೋಜನೆಯಿಂದಾದ ಅನುಕೂಲತೆಗಳ ಬಗೆಗೆ ಆಯಾಯ ಇಲಾಖೆಗೆ ಸಂಬಂಧಿಸಿದಂತೆ ಯಶೋಗಾಥೆ ತಕ್ಷಣ ಸಲ್ಲಿಸಬೇಕು ಎಂದು ಗ್ಯಾರಂಟಿ ಸಮಿತಿಯ ಜಿಲ್ಲಾಧ್ಯಕ್ಷ ಸತೀಶ ಪಿ. ನಾಯ್ಕ ಹೇಳಿದರು.

ತಾಪಂ ಸಭಾಭವನದಲ್ಲಿ ಜ. 18 ರಂದು ನಡೆದ ಜಿಲ್ಲೆ ಹಾಗೂ ತಾಪಂ ಗ್ಯಾರಂಟಿ ಸಮಿತಿಯ ಗ್ಯಾರಂಟಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗ್ಯಾರಂಟಿ ಯೋಜನೆಯಲ್ಲಿ ಹೆಸ್ಕಾಂಗೆ ಯಾವುದೇ ಕೆಲಸ ಇಲ್ಲ. ಆದಾಗ್ಯೂ ವರದಿ ಕಳುಹಿಸಲು ಆಗುತ್ತಿಲ್ಲ ಅಂತಾದರೆ ಹೇಗೆಂದು ಪ್ರಶ್ನಿಸಿದರು.

ಮಹಿಳಾ ಉಚಿತ ಟಿಕೆಟ್‌ ಅನ್ನು ಕೆಲ ಪುರುಷರಿಗೆ ನೀಡುತ್ತಿದ್ದು, ಇದು ಹಾಗಾಗದಂತೆ ಎಚ್ಚರ ವಹಿಸಲು ಸೂಚಿಸಿದರು. ಶಕ್ತಿ ಯೋಜನೆ ಆರಂಭವಾದಾಗಿನಿಂದ ಜಿಲ್ಲೆಯಲ್ಲಿ ೮ ಕೋಟಿ ಜನ ಉಚಿತವಾಗಿ ಬಸ್‌ನಲ್ಲಿ ಓಡಾಡಿದ್ದಾರೆ. ಶಕ್ತಿ ಯೋಜನೆಯಿಂದ ಬಸ್ ಕೊರತೆ ಆರೋಪ ಇದೆ. ಹೀಗಿರುವಾಗ ಜಿಲ್ಲೆಗೆ ೪೮ ಹೊಸ ಬಸ್ ಬಂದಿದೆ. ಆದರೂ ಯಾಕೆ ಪ್ರಚಾರ ಮಾಡ್ತಿಲ್ಲ ಎಂದು ಪ್ರಶ್ನಿಸಿದರು. ಇನ್ನು ಮುಂದೆ ಹಾಗಾಗದಂತೆ ಕ್ರಮಕ್ಕೆ ಸೂಚಿಸಿದರು.

ಹಳಿಯಾಳ ಭಾಗದಲ್ಲಿ ಕೆವೈಸಿ ಪೆಂಡಿಂಗ್ ಇದ್ದು, ಅಲ್ಲಿ ಅದಾಲತ್ ಮೂಲಕ ಬಗೆಹರಿಸಿಕೊಳ್ಳಲು ಸೂಚಿಸಿದರು. ಯುವನಿಧಿ ಜಾರಿಯಾಗಿ ವರ್ಷ ಕಳೆಯಿತು. ಜಿಲ್ಲೆಯಲ್ಲಿ 5348 ಜನನೋಂದಣಿ ಮಾಡಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಶಿರಸಿಯಲ್ಲಿ ಬೇಕರಿ ತರಬೇತಿ, ಘಟ್ಟದ ಕೆಳಗೆ ಅಂಕೋಲಾ ಕಾರವಾರದಲ್ಲಿ ಸೇರಿಸಿ ಬ್ಯೂಟಿಷಿಯನ್ ತರಬೇತಿ ಆಯೋಜಿಸಲಾಗುತ್ತದೆ. ಆದರೆ, ಆಸಕ್ತಿ ಸ್ಪಂದನೆ ಅಷ್ಟಾಗಿ ದೊರೆಯುತ್ತಿಲ್ಲ ಎಂದರು.

ಜಿಲ್ಲಾ ಉಪಾಧ್ಯಕ್ಷ ಪುರುಷೋತ್ತಮ ನಾಯ್ಕ, ತಾಪಂ ಇಒ ರಾಜೇಶ ಧನವಾಡಕರ್, ವಿವಿಧ ತಾಲೂಕುಗಳ ಅಧ್ಯಕ್ಷರು, ಜಿಲ್ಲಾ ಹಾಗೂ ತಾಲೂಕು ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ತಾಲೂಕು ಸಮಿತಿ ಅಧ್ಯಕ್ಷ ಉಲ್ಲಾಸ ಶಾನಭಾಗ ಸ್ವಾಗತಿಸಿದರು.