ಶರನ್ನವರಾತ್ರಿ ಅಂಗವಾಗಿ ಶಿವ ಶೈಲದಲ್ಲಿ ಶಾಸಕ ಜಿ. ಟಿ. ದೇವೇಗೌಡರಿಂದ ಸುದರ್ಶನ ಹೋಮ

| Published : Oct 07 2024, 01:45 AM IST / Updated: Oct 07 2024, 01:11 PM IST

ಶರನ್ನವರಾತ್ರಿ ಅಂಗವಾಗಿ ಶಿವ ಶೈಲದಲ್ಲಿ ಶಾಸಕ ಜಿ. ಟಿ. ದೇವೇಗೌಡರಿಂದ ಸುದರ್ಶನ ಹೋಮ
Share this Article
  • FB
  • TW
  • Linkdin
  • Email

ಸಾರಾಂಶ

ಶರನ್ನವರಾತ್ರಿ ಅಂಗವಾಗಿ ಪಟ್ಟಸೋಮನಹಳ್ಳಿ ಹೊರವಲಯದ ಶ್ರೀಶಿವಶೈಲದ ದೇವಾಲಯದಲ್ಲಿ ಮಾಜಿ ಸಚಿವ, ಶಾಸಕ ಜಿ.ಟಿ.ದೇವೇಗೌಡರು ಕುಟುಂಬ ಸಮೇತ ಪಾಲ್ಗೊಂಡು ಸುದರ್ಶನ ಹೋಮ ನಡೆಸಿದರು. ನವರಾತ್ರಿ ಮೂರನೇ ದಿನವಾದ ಶನಿವಾರ ಮಹಾಸುದರ್ಶನ ಹೋಮದಲ್ಲಿ ಪಾಲ್ಗೊಂಡ ದೇವೇಗೌಡರು ದೇಶದ ಸುಭಿಕ್ಷೆಗಾಗಿ ಪ್ರಾರ್ಥಿಸಿದರು.

 ಪಾಂಡವಪುರ :  ಶರನ್ನವರಾತ್ರಿ ಅಂಗವಾಗಿ ತಾಲೂಕಿನ ಪಟ್ಟಸೋಮನಹಳ್ಳಿ ಹೊರವಲಯದ ಶ್ರೀಶಿವಶೈಲದ ದೇವಾಲಯದ ಆವರಣದಲ್ಲಿ ಮಾಜಿ ಸಚಿವ, ಶಾಸಕ ಜಿ.ಟಿ.ದೇವೇಗೌಡರು ಕುಟುಂಬ ಸಮೇತ ಪಾಲ್ಗೊಂಡು ಸುದರ್ಶನ ಹೋಮ ನಡೆಸಿದರು.

ಕಾಮಾಕ್ಷಿ ಚಂದ್ರಮೌಳೇಶ್ವರ ದೇವಾಲಯದಲ್ಲಿ ನವರಾತ್ರಿ ಮಹೋತ್ಸವದ ಅಂಗವಾಗಿ 9 ದಿನಗಳ ಕಾಲ ವಿವಿಧ ಹೋಮ ಹವನಗಳು ನಡೆಯಲಿವೆ. ನವರಾತ್ರಿ ಮೂರನೇ ದಿನ ಶನಿವಾರ ಮಹಾಸುದರ್ಶನ ಹೋಮದಲ್ಲಿ ಪಾಲ್ಗೊಂಡರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಹಲವು ವರ್ಷಗಳಿಂದ ಇಲ್ಲಿ ನಡೆಯುವ ನವರಾತ್ರಿ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದೇವೆ. ದೇವಿಯಲ್ಲಿ ಪ್ರಾರ್ಥಿಸಿ ಮಹಾಸುದರ್ಶನ ಹೋಮ ಸೇರಿದಂತೆ ಇತರೆ ವಿಶೇಷ ಪೂಜೆಗಳನ್ನು ಸಲ್ಲಿಸಲಾಗಿದೆ. ಸಂಕಷ್ಠ ನಿವಾರಣೆ ಹಾಗೂ ದೇಶ ಸುಭಿಕ್ಷೆಯಾಗಿರಬೇಕೆಂಬ ಅಶ್ರಯದಿಂದ ಪ್ರಾರ್ಥಿಸಲಾಗಿದೆ ಎಂದರು.

ನವರಾತ್ರಿ ಆಚರಣೆಗಳು ಬಹಳ ಮಹತ್ವ ಹೊಂದಿದ್ದು ಜೀವನದ ಮೂಲ ನಿಯಮಗಳಾಗಿವೆ. ನಿಯಮ ನಂಬಿಕೆ ಮತ್ತು ವಿಶ್ವಾಸಗಳಿಗೆ ಶರಣಾಗುವುದರಿಂದ ಅರ್ಥಪೂರ್ಣವಾದ ಬದುಕಿಗೆ ನಾಂದಿ ಹಾಡಬಹುದು ಎಂದರು.

ಈ ಬಾರಿ ದಸರಾ ಸಂಪ್ರದಾಯವಾಗಿ ಅದ್ದೂರಿಯಾಗಿ ಆಚರಣೆಯಾಗುತ್ತಿದೆ. ಹಾಗಾಗಿ ನಾಡು ಸುಭಿಕ್ಷವಾಗಿರಲಿ, ಕಾಲಕಾಲಕ್ಕೆ ಮಳೆ ಬೆಳೆಯಾಗಿ ರೈತರ ಕಲ್ಯಾಣವಾಗಲಿ, ಮೈಸೂರು ದಸರಾ ಯಶಸ್ವಿಯಾಗಲೆಂದು ಪ್ರಾರ್ಥಿಸಿ ಹೋಮದಲ್ಲಿ ಪಾಲ್ಗೊಂಡಿರುವುದಾಗಿ ತಿಳಿಸಿದರು.

ಈ ವೇಳೆ ನಿವೃತ್ತ ನ್ಯಾಯಾಧೀಶ, ಶಿವಶೈಲ ದತ್ತಿ ಧಾರ್ಮಿಕ ಸಂಸ್ಥೆ ಮುಖ್ಯಸ್ಥರಾದ ಸಿ.ಶಿವಪ್ಪ, ಪುತ್ರ ಡಾ.ಸಿ.ಎಸ್.ರಾಜೇಶ್, ರಾಜ್ಯ ಪತ್ತಿನ ಸಹಕಾರ ಸಂಘಗಳ ಮಹಾಮಂಡಳಿ ಮಾಜಿ ಅಧ್ಯಕ್ಷೆ ಲಲಿತಾ ದೇವೇಗೌಡ, ವಿಧಾನ ಪರಿಷತ್ತ್ ಸದಸ್ಯ ವಿವೇಕನಂದ, ಜಿಟಿಡಿ ಸಹೋದರ ಯಧುವರ್, ಪುತ್ರಿ ಅನ್ನಪೂರ್ಣ ವಿಶ್ವೇಶ್ವರಯ್ಯ, ಯಶೋಧ, ಮಹಾಲಕ್ಷ್ಮೀ ಸ್ವಿಟ್ ಮಾಲೀಕ ಶಿವಕುಮಾರ್, ವಕೀ ಪಾಲಾಕ್ಷ , ಜಿಪಂ ಮಾಜಿ ಸದಸ್ಯೆ ಚಂದ್ರಿಕಾ ಸುರೇಶ್, ಬಿಜೆಪಿ ಮುಖಂಡ ರೈಸ್‌ಮಿಲ್ ತಮ್ಮಣ್ಣ, ಬೆಳವಾಡಿ ರವಿ, ಎಚ್.ಎನ್.ವಿಜಯ್, ಶಂಭುಲಿಂಗೇಗೌಡ, ಭರತ್, ಗಿರೀಶ್‌ಬಾಬು, ಜಿಟಿಡಿ ಅಪ್ತ ಕಾರ್ಯದರ್ಶಿ ಹರೀಶ್, ಪ್ರಧಾನ ಅರ್ಚಕರಾದ ದತ್ತತ್ರೇಯಾಭಟ್, ಶಿವಶೈಲ ಮ್ಯಾನೇಜರ್ ನಂಜುಂಡೆಗೌಡ ಹಾಗೂ ಭಕ್ತರು ಪಾಲ್ಗೊಂಡಿದ್ದರು.