ಗುಂಡಿಬಿದ್ದ ಸುಬ್ರಹ್ಮಣ್ಯಸ್ವಾಮಿ ದೇವಾಲಯ ರಸ್ತೆ
Aug 24 2025, 02:00 AM ISTಕಾವೇರಿ ನದಿ- ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯಕ್ಕೆ ಹೋಗುವ ರಸ್ತೆಯು ಗುಂಡಿ ಬಿದ್ದು ಹಾಳಾಗಿದ್ದು, ಸಂಚಾರಕ್ಕೆ ತೊಂದರೆ ಉಂಟಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ರಾಜ್ಯದ ಹೆದ್ದಾರಿಯ ಮುಖ್ಯರಸ್ತೆಯಿಂದ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದವರೆಗೆ ಸುಮಾರು 500 ಮೀಟರ್ ಉದ್ದದ ರಸ್ತೆ ಮೂಲಕ ಪ್ರತಿನಿತ್ಯ ನೂರಾರು ವಾಹನಗಳು ಬರುತ್ತವೆ. ಈ ರಸ್ತೆಯು ಗುಂಡಿ ಬಿದ್ದಿರುವುದರಿಂದ ಬೈಕ್, ಆಟೋ, ಕಾರ್ ಮತ್ತಿತರೆ ವಾಹನಗಳ ಓಡಾಟಕ್ಕೆ ತೀರ ಸಮಸ್ಯೆಯಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.