ಅರಸೀಕೆರೆಯಲ್ಲಿ ಸಂಭ್ರಮದಿಂದ ನೆರವೇರಿದ ನವರಾತ್ರಿ ದಾಂಡಿಯ

Oct 05 2025, 01:00 AM IST
ಈ ಬಾರಿ ವಿಶೇಷವಾಗಿ ತಾಯಿ ಚಾಮುಂಡೇಶ್ವರಿಯ ವಿಗ್ರಹವನ್ನು ಪ್ರತಿಷ್ಠಾಪಿಸಿ ಪ್ರತಿದಿನ ದೇವಿಗೆ ಅಲಂಕಾರ, ಪೂಜೆ, ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ಕಾರ್ಯಕ್ರಮ ನೆರವೇರಿಸಲಾಯಿತು. ಮಹಾಮಂಗಳಾರತಿ ನಂತರ ದಾಂಡಿಯ, ಗುಜರಾತಿ ಗರ್ಭ, ಮಕ್ಕಳಿಗೆ ಫ್ಯಾನ್ಸಿ ಡ್ರೆಸ್ ಸೇರಿದಂತೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಯುವ ಮಂಡಳಿಯ ಅಧ್ಯಕ್ಷ ಚೇತನ್ ಜೈನ್ ಮಾತನಾಡಿ, ಕಳೆದ ಹದಿಮೂರು ವರ್ಷಗಳಿಂದ ಜೈನ ಭವನದಲ್ಲಿ ನವರಾತ್ರಿ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದೇವೆ. ಎಲ್ಲಾ ಸಮಾಜದ ಬಂಧುಗಳ ಪ್ರೋತ್ಸಾಹದಿಂದ ಇದು ಯಶಸ್ವಿಯಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ದೇವಿಯ ಶಕ್ತಿ ದೊರಕಲಿ ಎಂದು ಶುಭ ಹಾರೈಸಿದರು.