ಸಾರಾಂಶ
ಸೂಲಿಬೆಲೆ: ವಾಗ್ಮಿ ಚಕ್ರವರ್ತಿ ಸೂಲಿಬೆಲೆಯವರ ತಂದೆ ದೇವಿದಾಸ್ ಸುಬ್ರಾಯ್ ಸೇಠ್(೮೨) ಇಹಲೋಕ ತ್ಯಜಿಸಿದ್ದಾರೆ. ಮೂಲತ: ಹೊನ್ನಾವರದವರಾದ ದೇವಿದಾಸ್ ಸುಬ್ರಾಯ್ ಸೇಠ್ ಇಲ್ಲಿನ ವಿವೇಕಾನಂದ ಪ್ರೌಢಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿ ವೃತ್ತಿ ಜೀವನ ಪ್ರಾರಂಭಿಸಿ ಇಲ್ಲಿಯೇ ನೆಲೆ ಕಂಡುಕೊಂಡಿದ್ದರು, ೩೩ ವರ್ಷಗಳ ಕಾಲ ವಿವೇಕಾನಂದ ಪ್ರೌಢಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು. ನಿವೃತ್ತಿ ನಂತರ ವಿವೇಕಾನಂದ ಪ್ರೌಢಶಾಲೆಯ ಆಶ್ರಯದಲ್ಲಿದ್ದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸುಮಾರು ೮ ವರ್ಷ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಸಿದ್ದರು.
ಸದಾ ಕ್ರಿಯಾಶೀಲರಾಗಿದ್ದ ದೇವಿದಾಸ್ ಸುಬ್ರಾಯ್ ಸೇಠ್ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಭಿವೃದ್ಧಿ ಸಮಿತಿ ಸದಸ್ಯರಾಗಿದ್ದರು. ನಿವೃತ್ತಿ ನಂತರ ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ತೊಡಸಿಕೊಂಡಿದ್ದರು. ಜೇನುಗೂಡು ರೂರಲ್ ಡೆವಲ್ಪಮೆಂಟ್ ಅಂಡ್ ಕಲ್ಚರಲ್ ಟ್ರಸ್ಟ ನಿರ್ದೇಶಕರಾಗಿದ್ದರು. ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಯಲ್ಲಿಯೂ ತೊಡಗಿಕೊಂಡಿದ್ದರು.ಇತ್ತೀಚೆಗೆ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದವರು ಸೆ.೭ರಂದು ಭಾನುವಾರ ಬೆಳಿಗ್ಗೆ ೮ ಗಂಟೆಯಲ್ಲಿ ಸ್ವಗೃಹ ಸೂಲಿಬೆಲೆ ಶಾರದಾ ಮಂದಿರದಲ್ಲಿ ಕೊನೆಯುಸಿರೆಳೆದಿದ್ದಾರೆ.
ಅಂತಿಮ ದರ್ಶನ: ಇಲ್ಲಿನ ಶಾರದಾ ಮಂದಿರದಲ್ಲಿ ದೇವಿದಾಸ್ ಸುಬ್ರಾಯ್ ಸೇಠ್ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಅಪಾರ ಸಂಖ್ಯೆಯ ಹಳೆಯ ವಿದ್ಯಾರ್ಥಿಗಳು ಅಭಿಮಾನಿಗಳು ಆಗಮಿಸಿ ದರ್ಶನ ಪಡೆದರು.ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಬ್ರಾಹ್ಮಣ ಸ್ಮಶಾನದಲ್ಲಿ ಅಂತಿಮ ಸಂಸ್ಕಾರದ ವಿಧಿ ವಿಧಾನಗಳನ್ನು ನೆರವೇರಿಸಿದರು. ರಾಜ್ಯ ಬಿಜೆಪಿಯ ಅಧ್ಯಕ್ಷ ಬಿ.ವೈ.ವಿಜೇಯಂದ್ರ ದರ್ಶನ ಪಡೆದು ಸಂತಾಪ ಸೂಚಿಸಿದರು. ಶಾಸಕ ಶರತ್ ಬಚ್ಚೇಗೌಡ, ಬಮೂಲ್ ನಿರ್ದೇಶಕ ಬಿ.ವಿ.ಸತೀಶಗೌಡ, ಯುವ ಮುಖಂಡ ಜಿ.ನಾರಾಯಣಗೌಡ, ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ಬಿ.ವಿ.ರಾಜಶೇಖರಗೌಡ, ಮಾಜಿ ನಿರ್ದೇಶಕ ಬಿ.ಎನ್.ಗೋಪಾಲಗೌಡ, ಜಿಪಂ ಮಾಜಿ ಅಧ್ಯಕ್ಷ ವಿ.ಪ್ರಸಾದ್, ವಿವೇಕಾನಂದ ವಿದ್ಯಾಭಿವೃದ್ಧಿ ಸಂಘದ ಮಾಜಿ ಅಧ್ಯಕ್ಷ ಎಸ್.ಆರ್.ರಂಗನಾಥ್, ಗ್ರಾಪಂ ಅಧ್ಯಕ್ಷ ಜನಾರ್ಧನರೆಡ್ಡಿ, ಮಾಜಿ ಶಾಸಕ ಪಿ.ರಾಜೀವ್, ಜೇನುಗೂಡು ಟ್ರಸ್ಟ್ ಉಪಾಧ್ಯಕ್ಷ ಕೆ.ಎಂ.ಚೌಡೇಗೌಡ, ಸಂಘಟನಾ ಕಾರ್ಯದರ್ಶಿ ಎಸ್.ಕೆ.ವಸಂತಕುಮಾರ್, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಶ್ರೀನಿವಾಸಮೂರ್ತಿ, ವಹ್ನಿಕುಲ ತಿಗಳ ಸಂಘದ ಅಧ್ಯಕ್ಷ ಸಿ.ಜಯರಾಜ್, ಯುವ ಬ್ರಿಗೇಡ್ ಪದಾಧಿಕಾರಿಗಳು ಅಂತಿಮ ದರ್ಶನ ಪಡೆದರು.
ಕೋಟ್...........೩೩ ವರ್ಷ ಶಿಕ್ಷಣ ಕ್ಷೇತ್ರಕ್ಕೆ ದೇವಿದಾಸ್ ಸುಬ್ರಾಯ್ ಸೇಠ್ ಅವರ ಸೇವೆ ಅನನ್ಯ. ಇಂತಹ ಸಾಮಾಜಿಕ ಕಾಳಜಿಯ ವ್ಯಕ್ತಿಯನ್ನು ಸಮಾಜ ಕಳೆದುಕೊಂಡಿರುವುದು ಶೈಕ್ಷಣಿಕ ಕ್ಷೇತ್ರಕ್ಕೆ ನಷ್ಟವಾಗಿದೆ.-ಬಿ.ವೈ.ವಿಜೇಯಂದ್ರ, ರಾಜ್ಯಾಧ್ಯಕ್ಷರು, ಬಿಜೆಪಿ
(ಫೋಟೋ ಕ್ಯಾಪ್ಷನ್)ಸೂಲಿಬೆಲೆಯ ಬ್ರಾಹ್ಮಣರ ಸ್ಮಶಾನದಲ್ಲಿ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರು ತಂದೆ ದೇವಿದಾಸ್ ಸುಬ್ರಾಯ್ ಸೇಠ್ ಅವರ ಅಂತಿಮ ಸಂಸ್ಕಾರ ಕ್ರಿಯೆಗಳನ್ನು ನೆರವೇರಿಸಿದರು.