ಸಾರಾಂಶ
ರಂಗಹಬ್ಬವನ್ನು ಫೆ.23ರಂದು ಹಿರಿಯ ಸಾಹಿತಿ ಅರವಿಂದ ಮಾಲಗತ್ತಿ ಉದ್ಘಾಟಿಸಲಿದ್ದಾರೆ. ಶಾಸಕ ಯಶ್ಪಾಲ್ ಸುವರ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರತಿದಿನ ರಂಗಸಾಧಕರಿಗೆ ಸನ್ಮಾನ, ಅದೃಷ್ಟ ಪ್ರೇಕ್ಷಕರಿಗೆ ಟ್ರಾವೆಲಿಂಗ್ ಬ್ಯಾಗ್‌ನ ಕೊಡುಗೆ ಇರಲಿದೆ.
ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ಸುಮನಸಾ ಕೊಡವೂರು ನಾಟಕೋತ್ಸವ ‘ರಂಗಹಬ್ಬ’ ಫೆ.23ರಿಂದ ಮಾ.1ರ ವರೆಗೆ ಪ್ರತಿದಿನ ಸಂಜೆ 6.30ಕ್ಕೆ ಅಜ್ಜರಕಾಡಿನ ಭುಜಂಗ ಪಾರ್ಕ್‌ನಲ್ಲಿ ನಡೆಯಲಿದೆ.ಈ ಬಗ್ಗೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ವಿವಿರಗಳನ್ನು ನೀಡಿದ ಸಂಘಟನೆ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು, ರಂಗಹಬ್ಬವನ್ನು ಫೆ.23ರಂದು ಹಿರಿಯ ಸಾಹಿತಿ ಅರವಿಂದ ಮಾಲಗತ್ತಿ ಉದ್ಘಾಟಿಸಲಿದ್ದಾರೆ. ಶಾಸಕ ಯಶ್ಪಾಲ್ ಸುವರ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರತಿದಿನ ರಂಗಸಾಧಕರಿಗೆ ಸನ್ಮಾನ, ಅದೃಷ್ಟ ಪ್ರೇಕ್ಷಕರಿಗೆ ಟ್ರಾವೆಲಿಂಗ್ ಬ್ಯಾಗ್‌ನ ಕೊಡುಗೆ ಇರಲಿದೆ ಎಂದರು.ದಿ. ಯು.ದುಗ್ಗಪ್ಪ ಅವರ ನೆನಪಿನಲ್ಲಿ ನೀಡಲಾಗುವ ‘ಯಕ್ಷಸುಮ’ ಪ್ರಶಸ್ತಿಯನ್ನು ಈ ಬಾರಿ ಯಕ್ಷಗಾನ ಗುರು ಬಿ.ಕೃಷ್ಣಸ್ವಾಮಿ ಜೋಷಿ ಅವರಿಗೆ ನೀಡಲಾಗುವುದು ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಸಂಘ ಪ್ರಮುಖರಾದ ಭಾಸ್ಕರ್ ಪಾಲನ್ ಬಾಚನಬೈಲು, ವಿನಯ್ ಕುಮಾರ್, ಯೋಗೀಶ್ ಕೊಳಲಗಿರಿ, ಚಂದ್ರಕಾಂತ್ ಕುಂದರ್, ವಿಜಯಾ ಭಾಸ್ಕರ್ ಉಪಸ್ಥಿತರಿದ್ದರು.ನಾಟಕಗಳ ವಿವರ:ಫೆ.23: ಪಯಣ, ಬೆಂಗಳೂರು ತಂಡದಿಂದ ಕನ್ನಡ ನಾಟಕ ‘ಕಲ್ಕಿ’, ಫೆ.24: ಸುಮನಸಾ ಕೊಡವೂರು ತಂಡದ ಕನ್ನಡ ನಾಟಕ ‘ಗೊಂದಿ’, ಫೆ.25: ಅನಿಕೇತನ ಹಾಸನ ತಂಡದ ಕನ್ನಡ ನಾಟಕ ‘ಕಿರಗೂರಿನ ಗಯ್ಯಾಳಿಗಳು’, ಫೆ.26: ಸುಮನಸಾ ಕೊಡವೂರು ತಂಡದ ತುಳು ನಾಟಕ ‘ಈದಿ’, ಫೆ.27: ಆಟ-ಮಾಟ ಧಾರವಾಡ ಕಲಾವಿದರಿಂದ ಕನ್ನಡ ನಾಟಕ ‘ಗುಡಿಯ ನೋಡಿರಣ್ಣ’, ಫೆ.28: ಸುಮನಸಾ ಕೊಡವೂರು ತಂಡದ ಕನ್ನಡ ಯಕ್ಷನಾಟಕ ‘ವಿದ್ಯುನ್ಮತಿ ಕಲ್ಯಾಣ’, ಮಾ.1: ಪುನಃ ಥಿಯೇಟರ್ ಉಡುಪಿ ತಂಡದ ಕನ್ನಡ ನಾಟಕ ‘ಯೋಗಿ ಮತ್ತು ಭೋಗಿ’.