ಬೇಸಿಗೆ ಶಿಬಿರ ಪ್ರತಿಭೆ ಅನಾವರಣಕ್ಕೆ ಸಹಕಾರಿ: ಬಿ.ಸಿ.ಗೀತಾ

| Published : May 17 2024, 12:44 AM IST

ಬೇಸಿಗೆ ಶಿಬಿರ ಪ್ರತಿಭೆ ಅನಾವರಣಕ್ಕೆ ಸಹಕಾರಿ: ಬಿ.ಸಿ.ಗೀತಾ
Share this Article
  • FB
  • TW
  • Linkdin
  • Email

ಸಾರಾಂಶ

ಬಾಳೆಹೊನ್ನೂರುಮಕ್ಕಳಲ್ಲಿ ಅಡಗಿರುವ ಪ್ರತಿಭೆ ಅನಾವರಣಗೊಳಿಸಲು ಬೇಸಿಗೆ ಶಿಬಿರಗಳು ಸಹಕಾರಿಯಾಗಲಿದೆ ಎಂದು ರೋಟರಿ ಕ್ಲಬ್ ಜಿಲ್ಲಾ ಗವರ್ನರ್ ಬಿ.ಸಿ.ಗೀತಾ ಹೇಳಿದರು.

ರೋಟರಿ ಕ್ಲಬ್, ಪೆವಿಕ್ರಿಲ್ ಕಂಪನಿಯ ಉಚಿತ ಪೇಂಟಿಂಗ್ ಶಿಬಿರ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಅನಾವರಣಗೊಳಿಸಲು ಬೇಸಿಗೆ ಶಿಬಿರಗಳು ಸಹಕಾರಿಯಾಗಲಿದೆ ಎಂದು ರೋಟರಿ ಕ್ಲಬ್ ಜಿಲ್ಲಾ ಗವರ್ನರ್ ಬಿ.ಸಿ.ಗೀತಾ ಹೇಳಿದರು.ಪಟ್ಟಣದ ರೋಟರಿ ಭವನದಲ್ಲಿ ರೋಟರಿ ಕ್ಲಬ್ ಹಾಗೂ ಪೆವಿಕ್ರಿಲ್ ಕಂಪನಿಯಿಂದ ಆಯೋಜಿಸಿರುವ ಉಚಿತ ಪೇಂಟಿಂಗ್ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು. ಬೇಸಿಗೆ ರಜೆಯಲ್ಲಿ ಮಕ್ಕಳು ಕಾಲ ಹರಣ ಮಾಡದೆ ಇಂತಹ ಶಿಬಿರಗಳಲ್ಲಿ ಭಾಗವಹಿಸುವುದರಿಂದ ಕಲೆ ಅಧ್ಯಯನ ಹಾಗೂ ಜ್ಞಾನ ವೃದ್ಧಿಸಿಕೊಳ್ಳಬಹುದು. ನಿರಂತರ ಚಟುವಟಿಕೆಯಲ್ಲಿ ತೊಡಗಿಸಿ ಕೊಳ್ಳುವುದರಿಂದ ಸಾಧನೆ ಮಾಡಬಹುದು ಎಂದರು.

ರೋಟರಿ ಕ್ಲಬ್ ಅಧ್ಯಕ್ಷ ಎ.ಆರ್.ಸುರೇಂದ್ರ ಮಾತನಾಡಿ, ಮಕ್ಕಳಿಗೆ ಪೇಂಟಿಂಗ್ ಶಿಬಿರ ಏರ್ಪಡಿಸಿದ್ದು, ಶಿಬಿರದಲ್ಲಿ ಅಧ್ಯಯನ ಮಾಡಿ ತಮ್ಮ ಮನೆ ಗೋಡೆಗಳನ್ನು ಪೇಂಟಿಂಗ್ ಮಾಡಿಕೊಳ್ಳಬಹುದು. ನಿರಂತರ ಪೆಂಟಿಂಗ್ ಕಲೆಯನ್ನು ಅಳವಡಿಸಿ ಕೊಂಡರೆ ಆರ್ಥಿಕ ಸಬಲೀಕರಣ ಸಾಧಿಸಬಹುದು ಎಂದರು. ತರಬೇತುದಾರರಾದ ಶಿವಮೊಗ್ಗದ ಅನ್ನಪೂರ್ಣ ಮಾತನಾಡಿ, ಪೇಂಟಿಂಗ್ ಶಿಬಿರದಲ್ಲಿ ನಿತ್ಯವೂ ಭಾಗವಹಿಸಿ ನಾವುಗಳು ಕಲಿಸುವ ಕಲೆ ಕಲಿತು ಸಾಧನೆ ಮಾಡಬೇಕು ಎಂದರು.ರೋಟರಿ ಕ್ಲಬ್ ಸದಸ್ಯ ಕೆ.ಟಿ.ವೆಂಕಟೇಶ, ಸಿ.ಪಿ.ರಮೇಶ್, ಯಶವಂತ, ತಿಮ್ಮಯ್ಯ, ರಮೇಶ್, ಭೈರವಿ ಒಕ್ಕಲಿಗ ಮಹಿಳಾ ಸಂಘದ ಅಧ್ಯಕ್ಷೆ ಸಿ.ಟಿ ರೇವತಿ, ರಜನಿ ದೇವಯ್ಯ ಮತ್ತಿತರರು ಹಾಜರಿದ್ದರು. ೧೬ಬಿಹೆಚ್‌ಆರ್ ೧: ಬಾಳೆಹೊನ್ನೂರಿನ ರೋಟರಿ ಕ್ಲಬ್ ಆಯೋಜಿಸಿರುವ ಪೇಂಟಿಂಗ್ ತರಬೇತಿ ಶಿಬಿರದಲ್ಲಿ ಭಾಗವಹಿಸಿರುವ ಶಿಬಿರಾರ್ಥಿಗಳು ವಿವಿಧ ಪೇಂಟಿಂಗ್‌ ಮಾಡಿದರು.