ಪೋಷಿಸುವ ಶಿಕ್ಷಕಿ ತಾಯಿಗಿಂತ ದೊಡ್ಳವಳು: ಸತ್ಯಣ್ಣ

| Published : May 12 2024, 01:19 AM IST

ಪೋಷಿಸುವ ಶಿಕ್ಷಕಿ ತಾಯಿಗಿಂತ ದೊಡ್ಳವಳು: ಸತ್ಯಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತೀಯ ಯೋಗ ಶಿಕ್ಷಣ ಸಂಸ್ಥೆಯಿಂದ ಮಕ್ಕಳ ಬೇಸಿಗೆ ಶಿಬಿರ

ಕನ್ನಡಪ್ರಭ ವಾರ್ತೆ ಚಿತ್ರದುರ್ಗಶಾಲೆಯಲ್ಲಿನ ಎಲ್ಲ ಮಕ್ಕಳನ್ನು ಪೋಷಿಸುವ ಶಿಕ್ಷಕಿ ತಾಯಿಗಿಂತ ದೊಡ್ಡವಳು ಎಂದು ಭಾರತೀಯ ಯೋಗ ಶಿಕ್ಷಣ ಸಂಸ್ಥೆ ಗೌರವಾಧ್ಯಕ್ಷ ಆರ್.ಸತ್ಯಣ್ಣ ಹೇಳಿದರು.

ಭಾರತೀಯ ಯೋಗ ಶಿಕ್ಷಣ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಮಕ್ಕಳ ಉಚಿತ ಬೇಸಿಗೆ ಶಿಬಿರದ ಸಮಾರೋಪದಲ್ಲಿ ಮಾತನಾಡಿದ ಅವರು, ಶಿಬಿರವು ಮಕ್ಕಳ ಸುಪ್ತ ಪ್ರತಿಭೆಯನ್ನು ಹೊರ ಹಾಕುವ ಕೆಲಸ ಮಾಡಿದೆ ಎಂಬುದು ಮಕ್ಕಳು ತಮ್ಮ ಅನಿಸಿಕೆಗಳಲ್ಲಿ ಆಡಿದ ಮಾತುಗಳಿಂದಲೇ ತಿಳಿಯುತ್ತದೆ ಎಂದರು.

ಮನೆಯಲ್ಲಿ ಒಬ್ಬ ತಾಯಿ ಒಂದು ಮಗುವನ್ನು ಮಾತ್ರ ನಿಭಾಯಿಸಬಲ್ಲಳು. ಆದರೆ ಶಿಕ್ಷಕಿ ಶಿಬಿರದ ಎಲ್ಲಾ ಮಕ್ಕಳನ್ನೂ ತಮ್ಮ ಸ್ವಂತ ಮಕ್ಕಳಂತೆ ನೋಡಿಕೊಂಡು ಸಂಸ್ಕಾರವಂತರನ್ನಾಗಿಸುವುದು ಬಹುದೊಡ್ಡ ಜವಾಬ್ಧಾರಿಯಾಗಿದೆ. ಅಂತಹ ಜವಾಬ್ಧಾರಿಯನ್ನು ಶಿಬಿರದಲ್ಲಿ ಎಲ್ಲಾ ಮಾತೆಯರು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ ಎಂಬುದು ಮಕ್ಕಳ ಹಾಗೂ ಪೋಷಕರ ಮಾತು ಸಾಕ್ಷೀಕರಿಸಿದೆ ಎಂದರು.

ನಿವೃತ್ತ ಪೋಲೀಸ್ ಅಧಿಕಾರಿ ಹಾಗೂ ಸಂಸ್ಥೆಯ ನಿರ್ದೇಶಕ ಮಲ್ಲಿಕಾರ್ಜುನ ಮಾತನಾಡಿ ಟಿವಿ, ಮೊಬೈಲ್‌ ಗಳಿಂದ ವಸ್ತು ನಿಷ್ಠ ಪ್ರಪಂಚವನ್ನೇ ಮರೆತು ಬಿಟ್ಟಿರುವ ಸಂದರ್ಭದಲ್ಲಿ ಬಿಡುವು ಮಾಡಿಕೊಂಡು ನಿಗದಿಗಿಂತ ಹೆಚ್ಚಿನ ಮಕ್ಕಳು ಶಿಬಿರದಲ್ಲಿ ಭಾಗವಹಿಸಿ ಬೇರೆ ಬೇರೆ ವಿಭಾಗದಲ್ಲಿ ಅನುಭವ ಆಸ್ವಾದಿಸಿದ್ದು ಸಂತಸದ ಸಂಗತಿ ಎಂದರು.

ಸಮಾಜ ಸೇವಕಿ ಶೈಲಜಾ ರೆಡ್ಡಿ ಮಾತನಾಡಿ, ಸಾಂಸ್ಕೃತಿಕ ನಾಯಕ ಜಗಜ್ಯೋತಿ ಬಸವಣ್ಣನವರ ಆದರ್ಶ ಜೀವನ ನಮಗೆಲ್ಲಾ ಮಾದರಿಯಾಗಿದ್ದು, ಪ್ರತಿ ಮಕ್ಕಳೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು. ಇದೇ ಸಂದರ್ಭದಲ್ಲಿ ಭಾರತೀಯ ಯೋಗ ಶಿಕ್ಷಣ ಸಂಸ್ಥೆಯಿಂದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ಉಡುಗೊರೆ ನೀಡಲಾಯಿತು.

ಶಿಬಿರದ ಆಯೋಜಕ ರವಿ ಕೆ.ಅಂಬೇಕರ್, ಶಿಕ್ಷಕಿಯರಾದ ನಾಗಲತಾ, ಅಂಬುಜಾಕ್ಷಿ, ನಿರ್ಮಲಾ, ಶೈಲಜಾ, ರೇಣುಕಾ ಹಿರಿಯ ಯೋಗ ಸಾಧಕಿ ವನಜಾಕ್ಷಮ್ಮ, ಬಾಲಗೋಕುಲ ಜಿಲ್ಲಾ ಪ್ರಮುಖ ದೇವರಾಜ್ ಕೋಟ್ಲ, ತಿಪ್ಪೇರುದ್ರಪ್ಪ, ವಿಶ್ವನಾಥ್ ಇದ್ದರು.---- ಪೋಟೋ ಕ್ಯಾಪ್ಸನ್ ಬೇಸಗೆ ಶಿಬಿರದ ಸಮಾರೋಪದಲ್ಲಿ ಭಾರತೀಯ ಯೋಗ ಶಿಕ್ಷಣ ಸಂಸ್ಥೆ ಗೌರವಾಧ್ಯಕ್ಷ ಆರ್.ಸತ್ಯಣ್ಣ ಮಾತನಾಡಿದರು.