ಯೋಗ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಪೂರಕ: ಭೀಮಣ್ಣ ನಾಯ್ಕ

| Published : Jun 17 2024, 01:35 AM IST

ಯೋಗ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಪೂರಕ: ಭೀಮಣ್ಣ ನಾಯ್ಕ
Share this Article
  • FB
  • TW
  • Linkdin
  • Email

ಸಾರಾಂಶ

ಯೋಗವು ದೇಹದ ಚೈತನ್ಯ, ಹುಮ್ಮಸ್ಸನ್ನು ಮತ್ತು ಜೀವನೋತ್ಸಾಹವನ್ನು ಹೆಚ್ಚಿಸಿ ಕ್ರಿಯಾಶೀಲಗೊಳಿಸುತ್ತದೆ.

ಶಿರಸಿ: ಯೋಗವು ವಿದ್ಯಾರ್ಥಿಗಳ ದೈಹಿಕ ಸದೃಢತೆಯನ್ನು ಹೆಚ್ಚಿಸಿ ಅವರ ಸರ್ವಾಂಗೀಣ ಬೆಳವಣಿಗೆಗೆ ಸಹಕಾರಿಯಾಗಿ ಓದುವ ಆಸಕ್ತಿಯನ್ನು ಬೆಳೆಸುವುದರಿಂದ ಅದು ನಮ್ಮ ಜೀವನದ ದೈನಂದಿನ ಉತ್ಸವವಾಗಲಿ ಎಂದು ಶಾಸಕ ಭೀಮಣ್ಣ ನಾಯ್ಕಅಭಿಪ್ರಾಯಪಟ್ಟರು.

ಇಳಸೂರಿನ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯಲ್ಲಿ ಯೋಗೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ವಸತಿ ಶಾಲೆಗಳಲ್ಲಿ ಸಂಸ್ಕಾರಯುಕ್ತ ಶಿಕ್ಷಣ ಪಡೆದು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಆದರ್ಶಗಳನ್ನು ಪರಿಪಾಲಿಸಬೇಕು ಎಂದರು.

ಡಾ. ಪ್ರಸನ್ನ ಆಯುಷ್ ವೈದ್ಯಾಧಿಕಾರಿಗಳು, ಮತ್ತಿಘಟ್ಟ ಮಾತನಾಡಿ, ಸದೃಢ ದೇಹದಲ್ಲಿ ಸದೃಢ ಮನಸ್ಸು ಇರುತ್ತದೆ. ಸದೃಢ ದೇಹಕ್ಕೆ ಯೋಗವು ಅತಿ ಉಪಯುಕ್ತವಾದದ್ದು. ಅದನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಪ್ರಾಂಶುಪಾಲರಾದ ಗಿರಿಜಾ ಪೂಜಾರಿ ಮಾತನಾಡಿ, ಯೋಗವು ದೇಹದ ಚೈತನ್ಯ, ಹುಮ್ಮಸ್ಸನ್ನು ಮತ್ತು ಜೀವನೋತ್ಸಾಹವನ್ನು ಹೆಚ್ಚಿಸಿ ಕ್ರಿಯಾಶೀಲಗೊಳಿಸುತ್ತದೆ ಎಂದರು.

ದೈಹಿಕ ಶಿಕ್ಷಣ ಶಿಕ್ಷಕ ಶಂಕರಪ್ಪ ಕುರುಬರ ಹಾಗೂ ಆಯುಷ್ ವೈದ್ಯಾಧಿಕಾರಿಗಳು ಯೋಗದ ವಿವಿಧ ಆಸನಗಳ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ರೂಪಾ ನಾಯ್ಕ ಸ್ವಾಗತಿಸಿದರು. ದೈಹಿಕ ಶಿಕ್ಷಕ ಶಂಕರಪ್ಪ ಕುರುಬರ ಪ್ರಾಸ್ತಾವಿಕವಾಗಿ ಮಾತನಾಡಿದರು. ನರ್ಸಿಂಗ್ ಅಧಿಕಾರಿ ಸಂಗೀತ ನಾಯ್ಕ ನಿರೂಪಿಸಿದರು. ರೇವತಿ ಭಟ್ ವಂದಿಸಿದರು.

ಸಂಗೀತ ಶಿಕ್ಷಕ ವಿಶ್ವನಾಥ್ ಹಿರೇಮಠ ಅವರು ಯೋಗಗೀತೆಯನ್ನು ಹಾಡುವ ಮೂಲಕ ಹಾಗೂ ಆಂಗ್ಲ ಶಿಕ್ಷಕಿ ಸೌಖ್ಯ ಭಟ್ ನಿರ್ದೇಶನದಲ್ಲಿ ಮೂಡಿಬಂದ ಯೋಗ ನೃತ್ಯವು ಕಾರ್ಯಕ್ರಮಕ್ಕೆ ಮೆರುಗನ್ನು ಹೆಚ್ಚಿಸಿದವು.

ಕಾರ್ಯಕ್ರಮದಲ್ಲಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡರ, ಗ್ರಾಮ ಪಂಚಾಯಿತಿ ಸದಸ್ಯರು, ಕಾರ್ಯದರ್ಶಿಗಳು, ಪಂಚಾಯಿತಿ ಸಿಬ್ಬಂದಿ, ಶಾಲೆಯ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಸಿಬ್ಬಂದಿ ಉಪಸ್ಥಿತರಿದ್ದರು.