ಸಾರಾಂಶ
ರೈತರು ತಮ್ಮ ರಾಸುಗಳಿಗೆ ವಿಮೆ ಹಾಗೂ ಗುಂಪು ವಿಮೆ ಮಾಡಿಸಬೇಕು. ಇದರಿಂದ ರಾಸು ಸಾವನ್ನಪ್ಪಿದರೆ 50 ಸಾವಿರ ರು. ವಿಮೆ ಪರಿಹಾರ ದೊರಕಲಿದೆ. ಜೊತೆಗೆ ಒಕ್ಕೂಟದಿಂದ ಹಾಲು ಕರೆಯುವ ಯಂತ್ರ, ರಬ್ಬರ್ ಮ್ಯಾಟ್, ಮೇವು ಕತ್ತರಿಸುವ ಯಂತ್ರ ಸೇರಿದಂತೆ ಹತ್ತು ಹಲವು ಸೌಲಭ್ಯ ನೀಡಲಾಗುತ್ತಿದೆ. ಪ್ರತಿಯೊಬ್ಬರೂ ಸದುಪಯೋಗಪಡಿಸಿಕೊಳ್ಳಬೇಕು.
ಕನ್ನಡಪ್ರಭ ವಾರ್ತೆ ಪಾಂಡವಪುರ
ರೈತರು ಡೇರಿಗೆ ಗುಣಮಟ್ಟದ ಹಾಲು ಸರಬರಾಜು ಮಾಡುವ ಮೂಲಕ ಮಂಡ್ಯ ಹಾಲು ಒಕ್ಕೂಟದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ನಿರ್ದೇಶಕ ಕೆ.ರಾಮಚಂದ್ರು ಹೇಳಿದರು.ತಾಲೂಕಿನ ಲಕ್ಷ್ಮೀಸಾಗರ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಮೇಲಂತಸ್ತಿನ ಕಟ್ಟಡ ಉದ್ಘಾಟನೆ ಹಾಗೂ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.
ರೈತರು ತಮ್ಮ ರಾಸುಗಳಿಗೆ ವಿಮೆ ಹಾಗೂ ಗುಂಪು ವಿಮೆ ಮಾಡಿಸಬೇಕು. ಇದರಿಂದ ರಾಸು ಸಾವನ್ನಪ್ಪಿದರೆ 50 ಸಾವಿರ ರು. ವಿಮೆ ಪರಿಹಾರ ದೊರಕಲಿದೆ. ಜೊತೆಗೆ ಒಕ್ಕೂಟದಿಂದ ಹಾಲು ಕರೆಯುವ ಯಂತ್ರ, ರಬ್ಬರ್ ಮ್ಯಾಟ್, ಮೇವು ಕತ್ತರಿಸುವ ಯಂತ್ರ ಸೇರಿದಂತೆ ಹತ್ತು ಹಲವು ಸೌಲಭ್ಯ ನೀಡಲಾಗುತ್ತಿದೆ. ಪ್ರತಿಯೊಬ್ಬರೂ ಸದುಪಯೋಗಪಡಿಸಿಕೊಳ್ಳಬೇಕು ಎಂದರು.ಸಭೆಯಲ್ಲಿ ಸಂಘದ ಅಧ್ಯಕ್ಷ ಲೋಕೇಶ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸುರೇಶ್, ನಿರ್ದೇಶಕರಾದ ಶಿವಣ್ಣ, ಎಲ್.ಎ.ಅಶೋಕ್, ಯಜಮಾನ್ ಎಲ್.ಕೆ.ರವಿ, ಎಲ್.ಎಸ್.ರವಿ, ಸ್ವಾಮಿ, ಶಾಂತ, ಸರಸ್ವತಿ, ಮಹದೇವಮ್ಮ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಲ್.ಎಸ್.ಜಯಕುಮಾರ, ಗ್ರಾಪಂ ಮಾಜಿ ಸದಸ್ಯ ಎಲ್.ಡಿ.ಸಂಜಯ್, ಸಂಘದ ನೌಕರ ವರ್ಗದವರಾದ ಎಲ್.ವಿ.ಮನೋಹರ್, ಎಲ್.ಎಂ.ಚೇತನ್, ಎಲ್.ಆರ್.ಜಯರಾಮು ಸೇರಿದಂತೆ ಇತರರಿದ್ದರು.