ಸಾರಾಂಶ
ಕನ್ನಡಪ್ರಭ ವಾರ್ತೆ ಹುಕ್ಕೇರಿ
ಉತ್ತಮ ಗುಣಮಟ್ಟ ಹಾಗೂ ನಿರಂತರ ವಿದ್ಯುತ್ ಪೂರೈಸಲು ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯಲ್ಲಿ ಸ್ವಾಭಿಮಾನಿ ರೈತ ಪೆನಲ್ ಬೆಂಬಲಿಸುವಂತೆ ಸಾಮಾನ್ಯ ಕ್ಷೇತ್ರದ ಅಭ್ಯರ್ಥಿ ಮಹಾವೀರ ನಿಲಜಗಿ ಮನವಿ ಮಾಡಿದರು.ತಾಲೂಕಿನ ಸಾರಾಪೂರ, ಶಿರಹಟ್ಟಿ ಬಿ.ಕೆ, ಎಲಿಮುನ್ನೋಳಿ, ಶಿರಹಟ್ಟಿ ಕೆ.ಡಿ, ಹುಕ್ಕೇರಿ ಬಜಾರ್ ರಸ್ತೆ ಮತ್ತಿತರ ಕಡೆಗಳಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಹಕ-ಸದಸ್ಯರು, ರೈತರಿಗೆ ಗುಣಮಟ್ಟದ ಮತ್ತು ನಿರಂತರ ವಿದ್ಯುತ್ ಸರಬರಾಜು ಮಾಡಲು ತಮ್ಮನ್ನು ಸೇರಿದಂತೆ ಸ್ವಾಭಿಮಾನಿ ರೈತ ಪೆನಲ್‌ನ ಅಭ್ಯರ್ಥಿಗಳಿಗೆ ಮತ ನೀಡಿ ಆಶೀರ್ವದಿಸಬೇಕು ಎಂದು ಕೋರಿದರು.ಮಾಜಿ ಸಂಸದ ರಮೇಶ ಕತ್ತಿ, ಮಾಜಿ ಸಚಿವ ಎ.ಬಿ.ಪಾಟೀಲ ನೇತೃತ್ವದಲ್ಲಿ ಈ ಸಂಘದ ಚುನಾವಣೆ ಎದುರಿಸಲಾಗುತ್ತಿದೆ. ಸುಮಾರು ಎರಡೂವರೆ ದಶಕಗಳಿಂದ ಕತ್ತಿ ಕುಟುಂಬದ ಸಮರ್ಥ ಹಾಗೂ ಸದೃಢ ಆಡಳಿತದಿಂದ ಈ ಸಂಸ್ಥೆಯು ಸಹಕಾರಿ ತತ್ವದಡಿ ವಿದ್ಯುತ್ ಪೂರೈಸುತ್ತಿರುವ ದೇಶದ ಏಕೈಕ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ವಿದ್ಯುತ್ ಸಂಘದ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ರೂಪಿಸಿದ್ದು ಸಂಘವನ್ನು ಮತ್ತಷ್ಟು ಗ್ರಾಹಕ ಸ್ನೇಹಿಯನ್ನಾಗಿ ಮಾಡಲು ತಮ್ಮ ಗುಂಪಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.ಮುಖಂಡರಾದ ಡಿ.ಕೆ.ಅವರಗೋಳ, ಸಿದ್ದು ಉಪಾಧ್ಯೆ, ಅಶೋಕ ಪಾಟೀಲ, ರಾಮಗೌಡ ಹೆಬ್ಬಾಳ, ಪುಟ್ಟು ಚೌಗಲಾ, ಆನಂದ ದಪ್ಪಾದೂಳಿ, ಮಲಗೌಡ ಪಾಟೀಲ, ಅಜೀತ ಮುನ್ನೋಳಿ, ಸಂಜು ದೇಸಾಯಿ, ಲಾಜಮ್ ನಾಯಿಕವಾಡಿ, ಸುಭಾಶ ಪಾತ್ರೋಟ, ಪ್ರಕಾಶ ಪಾಟೀಲ, ರಿಯಾಜ್ ಮುಲ್ಲಾ, ದಾದಾ ಖಾಜಿ, ಅಜೀತ ಪಂಚನ್ನವರ ಮತ್ತಿತರರು ಉಪಸ್ಥಿತರಿದ್ದರು.ಬಳಿಕ ಮುಖಂಡರು, ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಸ್ವಾಭಿಮಾನಿ ರೈತ ಪೆನಲ್‌ನ ಅಭ್ಯರ್ಥಿಗಳ ಪರ ಮತಯಾಚಿಸಿದರು. ಸ್ವಾಭಿಮಾನಿ ರೈತ ಪೆನಲ್‌ನ ಅಭ್ಯರ್ಥಿಗಳನ್ನು ಗ್ರಾಮಸ್ಥರು ಪುಷ್ಪಗಳ ಸುರಿಮಳೆಗೈದು ಬರಮಾಡಿಕೊಂಡು ಬೆಂಬಲಿಸಿದರು. ಇದರೊಂದಿಗೆ ಗ್ರಾಮಗಳಲ್ಲಿ ಈ ಪೆನಲ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
;Resize=(128,128))
;Resize=(128,128))
;Resize=(128,128))
;Resize=(128,128))