ಸೂರಜ್ ಮಹಾನ್ ದೈವ ಭಕ್ತ, ಆರೋಪಗಳಿಂದ ಹೊರಬರ್ತಾನೆ: ರೇವಣ್ಣ

| Published : Jul 03 2024, 01:21 AM IST

ಸೂರಜ್ ಮಹಾನ್ ದೈವ ಭಕ್ತ, ಆರೋಪಗಳಿಂದ ಹೊರಬರ್ತಾನೆ: ರೇವಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಎಂಎಲ್ಸಿ, ಪುತ್ರ ಸೂರಜ್ ಮಹಾನ್ ದೈವ ಭಕ್ತ. ಆತ ಬಹಳ ಬೇಗ ಎಲ್ಲ ಆರೋಪಗಳಿಂದ ಹೊರಬರುತ್ತಾನೆ ಅನ್ನುವ ನಂಬಿಕೆ ಇದೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದರು.

ಪ್ರಜ್ವಲ್‌ ನೋಡಲು ಜೈಲಿಗೆ ಹೋಗಲ್ಲ

ಕನ್ನಡಪ್ರಭ ವಾರ್ತೆ ಮೈಸೂರು

ಎಂಎಲ್ಸಿ, ಪುತ್ರ ಸೂರಜ್ ಮಹಾನ್ ದೈವ ಭಕ್ತ. ಆತ ಬಹಳ ಬೇಗ ಎಲ್ಲ ಆರೋಪಗಳಿಂದ ಹೊರಬರುತ್ತಾನೆ ಅನ್ನುವ ನಂಬಿಕೆ ಇದೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಮಗೆ ಸದ್ಯಕ್ಕೆ ದೇವರು ಬಿಟ್ಟರೆ ಇನ್ಯಾರು? ಉಳಿದ ಯಾವ ವಿಚಾರಗಳ ಬಗ್ಗೆಯೂ ನಾನು ಮಾತನಾಡುವುದಿಲ್ಲ. ಎಲ್ಲವೂ ನ್ಯಾಯಾಲಯದ ಮುಂದೆ ಇವೆ ಎಂದು ಹೇಳಿದರು.

ಮೊದಲು ಎಲ್ಲವೂ ಮುಗಿಯಲಿ, ಆಮೇಲೆ ಎಲ್ಲವನ್ನೂ ಎಳೆ ಎಳೆಯಾಗಿ ಬಿಚ್ಚಿಡುತ್ತೇನೆ. ಎಂತೆಂಥವರಿಗೋ ಕಷ್ಟ ಬರುತ್ತದೆ, ಅದರಲ್ಲಿ ನಮ್ಮದು ಏನಿದೆ? ದೇವೇಗೌಡರು ಒಂದು ತಿಂಗಳಿನಿಂದ ಸಹಜವಾಗಿ ನೋವಿನಲ್ಲೇ ಇದ್ದಾರೆ. ಎಲ್ಲದಕ್ಕೂ ಕಾಲ ಉತ್ತರ ಕೊಡುತ್ತದೆ. ನಾನು ಯಾವತ್ತೂ, ಯಾವುದಕ್ಕೂ ಎದೆಗುಂದುವುದಿಲ್ಲ. 30 ವರ್ಷದಿಂದ ರಾಜಕಾರಣ ಮಾಡಿದ್ದೇನೆ. ಇಂಥವನ್ನೆಲ್ಲ ಬಹಳ ನೋಡಿದ್ದೇನೆ ಎಂದರು.

ಪ್ರಜ್ವಲ್ ಭೇಟಿಗೆ ಹೋಗಲ್ಲ: ನಾನು ಸದ್ಯಕ್ಕೆ ಪುತ್ರ ಪ್ರಜ್ವಲ್ ಭೇಟಿಗೆ ಹೋಗಲ್ಲ. ನಾನು ಭೇಟಿಗೆ ಹೋದರೆ ರೇವಣ್ಣ ಏನೋ ಹೇಳಿಕೊಟ್ಟ ಅಂತ ಹೇಳುತ್ತಾರೆ. ಹೀಗಾಗಿ ನಾನು ಹೋಗಲ್ಲ. ಸೋಮವಾರ ನನ್ನ ಪತ್ನಿ ಹೋಗಿ ಭೇಟಿ ಮಾಡಿ ಬಂದಿದ್ದಾರೆ. ತಾಯಿ- ಮಗ ಏನು ಮಾತಾಡಿದ್ದಾರೆ ನನಗೆ ಗೊತ್ತಿಲ್ಲ, ಕೇಳಲೂ ಹೋಗಿಲ್ಲ ಎಂದು ಸ್ಪಷ್ಟಪಡಿಸಿದರು.