8ರಂದು ಸುರಪುರ ವಿಜಯೋತ್ಸವ: ಭಾಸ್ಕರರಾವ್ ಮೂಡಬೂಳ

| Published : Feb 05 2024, 01:53 AM IST

ಸಾರಾಂಶ

ಸುರಪುರ ಇತಿಹಾಸ ತಿರುಚಿ ಬರೆಯಲಾಗಿದೆ. ರಾಜಾ ನಾಲ್ವಡಿ ವೆಂಕಟಪ್ಪ ನಾಯಕ ಅವರು ಹೋರಾಡಿದ ಮಾದರಿ ಹಾಗೂ ಆಡಳಿತ ಸಗರನಾಡಿನ ಜನತೆ ಮರೆತಿಲ್ಲ. ಸುರಪುರ ಇತಿಹಾಸ ಬರೆಯುವ ಅಗತ್ಯವಿದೆ

ಕನ್ನಡಪ್ರಭ ವಾರ್ತೆ ಸುರಪುರ

ಸುರಪುರ ಇತಿಹಾಸ ಸಂಶೋಧನಾ ಕೇಂದ್ರ, ಭೀಮರಾಯನ ಗುಡಿ ಓಕುಳಿ ಪ್ರಕಾಶನ ಸಂಯುಕ್ತಾಶ್ರಯದಲ್ಲಿ 1857ರಲ್ಲಿ ಬ್ರಿಟಿಷರ ವಿರುದ್ಧ ನಡೆದ ಯುದ್ಧದಲ್ಲಿ ಸುರಪುರ ಸಂಸ್ಥಾನದ ಸೈನ್ಯ ವಿಜಯಶಾಲಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ಸುರಪುರ ವಿಜಯೋತ್ಸವ ಫೆ.8ರಂದು ಬೆಳಗ್ಗೆ 10.30ಕ್ಕೆ ನಗರದ ಸಂಸ್ಥಾನದ ಕನಡಿ ಮಹಲ್ ಹೊಸ ಅರಮನೆಯಲ್ಲಿ ನಡೆಯಲಿದೆ ಎಂದು ಇತಿಹಾಸ ಸಂಶೋಧಕ, ಹಿರಿಯ ನ್ಯಾಯವಾದಿ ಭಾಸ್ಕರರಾವ್ ಮೂಡಬೂಳ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸುರಪುರ ಇತಿಹಾಸ ತಿರುಚಿ ಬರೆಯಲಾಗಿದೆ. ರಾಜಾ ನಾಲ್ವಡಿ ವೆಂಕಟಪ್ಪ ನಾಯಕ ಅವರು ಹೋರಾಡಿದ ಮಾದರಿ ಹಾಗೂ ಆಡಳಿತ ಸಗರನಾಡಿನ ಜನತೆ ಮರೆತಿಲ್ಲ. ಸುರಪುರ ಇತಿಹಾಸ ಬರೆಯುವ ಅಗತ್ಯವಿದೆ ಎಂದರು.

ಬಲವಂತ ಬಹರಿ ಬಹದ್ದೂರ್‌ ಸಂಸ್ಥಾನದ ಡಾ. ರಾಜಾ ಕೃಷ್ಣಪ್ಪ ನಾಯಕ ಅಧ್ಯಕ್ಷತೆ ವಹಿಸುವರು. ಸಾಂಸ್ಕೃತಿಕ ಚಿಂತಕ ಡಾ. ಚಲುವರಾಜು ಉದ್ಘಾಟಿಸುವರು. ಡಾ. ಲಕ್ಷ್ಮಿಕಾಂತ ವಿ. ಮೋಹರೀರ್ ಉಪನ್ಯಾಸ ನೀಡುವರು. ಮುಖ್ಯ ಅತಿಥಿಗಳಾಗಿ ಟಿಎಚ್‌ಒ ಡಾ. ರಾಜಾ ವೆಂಕಪ್ಪ ನಾಯಕ, ಇತಿಹಾಸಕಾರ ಭಾಸ್ಕರರಾವ್ ಮೂಡಬೂಳ, ಪಿಎಸ್‌ಐ ಕೃಷ್ಣಾ ಸುಬೇದಾರ ಪಾಲ್ಗೊಳ್ಳುವರು ಎಂದರು.

ಸನ್ಮಾನ:

ಹೈಕೋರ್ಟ್ ನ್ಯಾಯವಾದಿ ಜೆ. ಅಗಸ್ಟಿನ್, ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಬಸವರಾಜ ಜಮದ್ರಾಖಾನಿ, ಸಾಮಾಜಿಕ ಹೋರಾಟಗಾರ ಮಾನಪ್ಪ ಹಡಪದ, ಪಿಡಿಒ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜಕುಮಾರ ಸುಬೇದಾರ, ಪತ್ರಕರ್ತ ಆನಂದ ಎಂ. ಸೌದಿ ಅವರನ್ನು ಸನ್ಮಾನಿಸಲಾಗುತ್ತದೆ ಎಂದು ಭಾಸ್ಕರರಾವ್‌ ತಿಳಿಸಿದರು. ಪಿಎಸ್‌ಐ ಕೃಷ್ಣಾ ಸುಬೇದಾರ, ಎಸ್‌ಬಿಐ ಯಂಕಪ್ಪ, ಮರೆಪ್ಪ ನಾಯಕ ಗುಡ್ಡಕಾಯಿ, ರಾಜಕುಮಾರ, ರಮೇಶ ಕುಲಕರ್ಣಿ ಸೇರಿದಂತೆ ಇತರರಿದ್ದರು.