ತಾಲೂಕು ಗುತ್ತಿಗೆದಾರರ ಸಂಘಕ್ಕೆ ಸುರೇಶಗೌಡ ಅಧ್ಯಕ್ಷ

| Published : Jan 25 2025, 01:00 AM IST

ಸಾರಾಂಶ

ಮುದ್ದೇಬಿಹಾಳ: ಪಟ್ಟಣದ ಖಾಸಗಿ ಹೊಟೆಲ್‌ನಲ್ಲಿ ಶುಕ್ರವಾರ ನಡೆದ ತಾಲೂಕಾ ಗುತ್ತಿಗೆದಾರರ ಸಂಘದ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಸುರೇಶಗೌಡ ಪಾಟೀಲ(ಇಂಗಳಗೇರಿ), ಉಪಾಧ್ಯಕ್ಷರಾಗಿ ವೈ.ವೈ.ಚಲವಾದಿ ಅವರನ್ನು ಆಯ್ಕೆ ಮಾಡಲಾಯಿತು.

ಮುದ್ದೇಬಿಹಾಳ: ಪಟ್ಟಣದ ಖಾಸಗಿ ಹೊಟೆಲ್‌ನಲ್ಲಿ ಶುಕ್ರವಾರ ನಡೆದ ತಾಲೂಕಾ ಗುತ್ತಿಗೆದಾರರ ಸಂಘದ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಸುರೇಶಗೌಡ ಪಾಟೀಲ(ಇಂಗಳಗೇರಿ), ಉಪಾಧ್ಯಕ್ಷರಾಗಿ ವೈ.ವೈ.ಚಲವಾದಿ ಅವರನ್ನು ಆಯ್ಕೆ ಮಾಡಲಾಯಿತು.

ಈ ವೇಳೆ ಮಾತನಾಡಿದ ನೂತನ ಅಧ್ಯಕ್ಷ ಸುರೇಶಗೌಡ ಪಾಟೀಲ, ದೇಶದಲ್ಲಿ ಮಾತ್ರವಲ್ಲದೇ ವಿಶ್ವದಲ್ಲಿಯೇ ಗುತ್ತಿದಾರರು ಕೈಗೊಳ್ಳದ ಕಾಮಗಾರಿಗಳು ಇಲ್ಲ. ಎಲ್ಲ ರಂಗದಲ್ಲೂ ಒಂದು ನಗರ ರಸ್ತೆ, ಚರಂಡಿ, ಕುಡಿಯುವ ನೀರು ಪೂರೈಕೆ ವಿದ್ಯುತ್ ಸೇರಿದಂತೆ ಸುಂದರವಾಗಿ ಕಾಣಬೇಕಾದರೆ ಗುತ್ತಿಗೆದಾರರ ಪ್ರಾಮಾಣಿಕ ಸೇವೆ ಪ್ರಮುಖ ಪಾತ್ರವಹಿಸುತ್ತದೆ. ಸರ್ಕಾರದ ಅನುದಾನಕ್ಕೆ ಕಾಯದೇ ಕಾಮಗಾರಿ ನಿರ್ವಹಿಸುವ ಮೂಲಕ ಜನಸಾಮಾನ್ಯರಿಗೆ ಅನುಕೂಲ ಮಾಡಿ ಸಾಮಾಜಿಕ ಕಳಕಳಿ ಮೆರೆಯುತ್ತಿರುವುದಾಗಿ ತಿಳಿಸಿದರು.ಕಳೇದ ನಾಲ್ಕು ವರ್ಷಗಳಿಂದ ಸರ್ಕಾರದಿಂದ ಬಿಲ್‌ ಮಂಜೂರು ಮಾಡದ ಹಿನ್ನಲೆಯಲ್ಲಿ ತಾಲೂಕು ಗುತ್ತಿಗೆದಾರರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಬಿಲ್‌ ಪಾಸ್‌ ಮಾಡಿ ಗುತ್ತಿಗೆದಾರರಿಗೆ ಚೈತನ್ಯ ತುಂಬಬೇಕು ಎಂದರು.

ಗುತ್ತಿಗೆದಾರರ ಸಂಘದ ಪ್ರಧಾನ ಕಾರ್ಯದರ್ಶಿ ಬಹದ್ದೂರ ರಾಠೋಡ ಮಾತನಾಡಿ, ಗುತ್ತಿಗೆದಾರರು ಎಂದರೆ ಸರ್ಕಾರದ ಹಣ ಲೂಟಿ ಹೊಡೆಯುವವರು ಎಂದು ನೋಡುವಂತಾಗಿರುವುದು ನೋವಿನ ಸಂಗತಿ. ಕೆಲಸಕ್ಕೆ ಹಾಕಿದ ಹಣ ಪಡೆಯಬೇಕಾದರೆ ಹರಸಾಹಸ ಪಡಬೇಕಾಗುತ್ತದೆ. ಇನ್ನು ಬಾಕಿ ಬಿಲ್‌ ಪಾವತಿಯಾಗಿಲ್ಲ. ಈಗಾಗಲೇ ದಯಾಮರಣಕ್ಕೆ ಅವಕಾಶ ಕಲ್ಪಿಸುವಂತೆ ರಾಜ್ಯಪಾಲರಿಗೆ ಪತ್ರ ಬರೆದಿದ್ದೇನೆ ಎಂದು ಹೇಳಿದರು.ಪ್ರಥಮ ದರ್ಜೆ ಗುತ್ತಿಗೆದಾರ ಕೆ.ಎಸ್.ಪಾಟೀಲ (ಜಮ್ಮಲದಿನ್ನಿ), ಬಸರಕೋಡದ ರಾಜು ಮೇಟಿ ನೇತೃತ್ವದಲ್ಲಿ ಗುತ್ತಿಗೆದಾರರ ಸಂಘದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಮುತ್ತಿನಶೆಟ್ಟಿ ಗೂಳಿ, ಉಪಾಧ್ಯಕ್ಷರಾಗಿ ಯಲ್ಲಪ್ಪ ಚಲವಾದಿ, ಹಣಮಂತ ಕುರಿ, ಕಾರ್ಯದರ್ಶಿಯಾಗಿ ಪ್ರಭುಗೌಡ ಪಾಟೀಲ, ಖಜಾಂಚಿಯಾಗಿ ರಾಜುಗೌಡ ಕೊಂಗಿ ಆಯ್ಕೆಯಾದರು. ರುದ್ರಗೌಡ ಅಂಗಡಗೇರಿ, ಸಚಿನ ಪಾಟೀಲ, ರಾಜು ಮೇಟಿ, ವಾಲು ರಾಠೋಡ, ಭೀಮನಗೌಡ ಪಾಟೀಲ, ರಾಜು ನಾಯಕ, ಚಂದು ಕರೇಕಲ್ಲ, ರಮೇಶ ತಾತರಡ್ಡಿ, ಗುರುಸ್ವಾಮಿ ಬೂದಿಹಾಳ, ಪರುಶುರಾಮ ಭಯ್ಯಾಪೂರ, ಉಮರ ಮಮದಾಪೂರ ಸೇರಿದಂತೆ ತಾಲ್ಲೂಕಿನ ಗುತ್ತಿಗೆದಾರರು ಇದ್ದರು.