ಲಿಖಿತ ದೂರು ನೀಡಿ : ಶಾಸಕರಿಗೆ ಸುರ್ಜೇವಾಲಾ

| N/A | Published : Jul 09 2025, 12:18 AM IST / Updated: Jul 09 2025, 09:21 AM IST

ಸಾರಾಂಶ

ಸಚಿವರ ವಿರುದ್ಧ ಮತ್ತು ಸರ್ಕಾರದ ಕಾರ್ಯವೈಖರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಶಾಸಕರಿಗೆ ಲಿಖಿತ ರೂಪದಲ್ಲಿ ಅಭಿಪ್ರಾಯ ಸಲ್ಲಿಸುವಂತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಸೂಚನೆ ನೀಡಿದ್ದಾರೆ.

 ಬೆಂಗಳೂರು :  ಸಚಿವರ ವಿರುದ್ಧ ಮತ್ತು ಸರ್ಕಾರದ ಕಾರ್ಯವೈಖರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಶಾಸಕರಿಗೆ ಲಿಖಿತ ರೂಪದಲ್ಲಿ ಅಭಿಪ್ರಾಯ ಸಲ್ಲಿಸುವಂತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಸೂಚನೆ ನೀಡಿದ್ದಾರೆ.

ಸುರ್ಜೇವಾಲಾ ಅವರು ಮಂಗಳವಾರ ಪೂರ್ವ ನಿಗದಿಯಂತೆ 16ಕ್ಕೂ ಹೆಚ್ಚಿನ ಶಾಸಕರೊಂದಿಗೆ ಮುಖಾಮುಖಿ ಸಭೆ ನಡೆಸಿದರು. ಸಭೆಯಲ್ಲಿ ನಾಯಕತ್ವ ಬದಲಾವಣೆ, ಮತ್ತಿತರ ವಿಚಾರಗಳ ಕುರಿತು ಚರ್ಚೆ ಮಾಡದೆ ಸಚಿವರ ಕಾರ್ಯವೈಖರಿ, ಕ್ಷೇತ್ರಗಳಲ್ಲಿನ ಅಭಿವೃದ್ಧಿ ಕೆಲಸಗಳ ಕುರಿತು ಶಾಸಕರಲ್ಲಿ ಮಾಹಿತಿ ಪಡೆದಿದ್ದಾರೆ. ಈ ವೇಳೆ ಸಚಿವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದವರನ್ನು ಸಮಾಧಾನ ಪಡಿಸುವ ಕೆಲಸ ಮಾಡಿದ ಸುರ್ಜೇವಾಲಾ, ಏನೇ ದೂರಿದ್ದರೂ ಲಿಖಿತ ರೂಪದಲ್ಲಿ ಸಲ್ಲಿಸುವಂತೆ ಸೂಚಿಸಿದ್ದಾರೆ.

ಹಲವು ಶಾಸಕರು ಸುರ್ಜೇವಾಲಾ ಬಳಿ ಸಚಿವರ ಬಗ್ಗೆ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ. ಪ್ರಮುಖವಾಗಿ ಸಚಿವರು ಕ್ಷೇತ್ರದ ಸಮಸ್ಯೆಗಳ ಬಗ್ಗೆ ಸ್ಪಂದಿಸುತ್ತಿಲ್ಲ, ತಾವು ನೀಡುವ ಶಿಫಾರಸು ಪತ್ರ ಪರಿಗಣಿಸುತ್ತಿಲ್ಲ, ತಮ್ಮ ಹಿರಿತನಕ್ಕೆ ತಕ್ಕಂತೆ ಗೌರವ ನೀಡುತ್ತಿಲ್ಲ ಹಾಗೂ ಸಚಿವರು ಸಮಸ್ಯೆ ಹೇಳಿಕೊಳ್ಳಲು ಸಿಗುವುದೇ ಇಲ್ಲ ಎಂಬಂತಹ ದೂರು ನೀಡಿದ್ದಾರೆ. ಶಾಸಕರೊಂದಿಗಿನ ಸಭೆ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸುರ್ಜೇವಾಲಾ, ಕೆಲ ಶಾಸಕರಿಗೆ ಸಚಿವರಿಂದ ಇರುಸು ಮುರುಸಾಗಿದೆ. ಈ ಕುರಿತು ಅವರು ಅಳಲು ತೋಡಿಕೊಂಡಿದ್ದಾರೆ. ಅದಕ್ಕೆ ಸಂಬಂಧಿಸಿ ಸಮಸ್ಯೆಗಳೇನೇ ಇದ್ದರೂ ಲಿಖಿತ ರೂಪದಲ್ಲಿ ನೀಡುವಂತೆ ಸೂಚಿಸಿದ್ದೇನೆ. ಉಳಿದಂತೆ ಕ್ಷೇತ್ರದ ಪ್ರಗತಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ, ಜನರ ಪ್ರತಿಕ್ರಿಯೆ, ಮುಂದಿನ ವಿಧಾನಸಭಾ ಚುನಾವಣೆಗೆ ಪಕ್ಷ ಸಂಘಟನೆ ಕುರಿತಂತೆ ಶಾಸಕರೊಂದಿಗೆ ಚರ್ಚೆ ಮಾಡಿದ್ದೇನೆ ಎಂದು ತಿಳಿಸಿದರು.

ಎಲ್ಲವನ್ನೂ ಆಲಿಸಿರುವ ಸುರ್ಜೇವಾಲಾ, ಯಾವೆಲ್ಲ ಸಚಿವರ ಕಾರ್ಯವೈಖರಿ ಸರಿಯಿಲ್ಲ ಎಂಬುದನ್ನು ಲಿಖಿತವಾಗಿ ನೀಡಿ. ಅದರಲ್ಲೂ ಸಚಿವರು ತೋರಿರುವ ನಿರ್ಲಕ್ಷ್ಯ, ಶಿಫಾರಸನ್ನು ಲೆಕ್ಕಕ್ಕೆ ತೆಗೆದುಕೊಳ್ಳದಿರುವುದು, ಕ್ಷೇತ್ರದ ಸಮಸ್ಯೆಗಳೇನು ಮತ್ತು ಅದನ್ನು ಪರಿಹರಿಸಲು ಮುಂದಾಗದ ಸಚಿವರ ಮಾಹಿತಿ ಕೂಲಂಕಷವಾಗಿ ಬರೆದು ಸಲ್ಲಿಸುವಂತೆ ಸೂಚಿಸಿ ಕಳುಹಿಸಿದ್ದಾರೆ.ಕೆಲ ಶಾಸಕರಿಗೆ ಸಚಿವರಿಂದ ಇರುಸು ಮುರುಸಾಗಿದೆ. ಈ ಕುರಿತು ಅವರು ಅಳಲು ತೋಡಿಕೊಂಡಿದ್ದಾರೆ. ಅದಕ್ಕೆ ಸಂಬಂಧಿಸಿ ಸಮಸ್ಯೆಗಳೇನೇ ಇದ್ದರೂ ಲಿಖಿತ ರೂಪದಲ್ಲಿ ನೀಡುವಂತೆ ಸೂಚಿಸಿದ್ದೇನೆ. ಉಳಿದಂತೆ ಕ್ಷೇತ್ರದ ಪ್ರಗತಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ, ಜನರ ಪ್ರತಿಕ್ರಿಯೆ, ಮುಂದಿನ ವಿಧಾನಸಭಾ ಚುನಾವಣೆಗೆ ಪಕ್ಷ ಸಂಘಟನೆ ಕುರಿತಂತೆ ಶಾಸಕರೊಂದಿಗೆ ಚರ್ಚೆ ಮಾಡಿದ್ದೇನೆ ಎಂದು ತಿಳಿಸಿದರು.

ಸಿದ್ದರಾಮಯ್ಯ ಅವರೇ 5 ವರ್ಷ ಸಿಎಂ: ದೇಶಪಾಂಡೆ

ಸುರ್ಜೇವಾಲಾ ಜತೆಗಿನ ಸಭೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಹಿರಿಯ ಶಾಸಕ ಆರ್‌.ವಿ. ದೇಶಪಾಂಡೆ, ಕ್ಷೇತ್ರದ ಸಮಸ್ಯೆಗಳ ಬಗ್ಗೆ ಕೇಳಿದ್ದಾರೆ. ರಾಜ್ಯ, ಜಿಲ್ಲೆ ಮತ್ತು ನಮ್ಮ ಕ್ಷೇತ್ರದ ಸಮಸ್ಯೆಗಳನ್ನು ಅವರ ಗಮನಕ್ಕೆ ತಂದಿದ್ದೇನೆ. ಅದನ್ನು ಲಿಖಿತ ರೂಪದಲ್ಲೂ ನೀಡಿದ್ದೇನೆ. ನನಗೆ ಯಾವ ಸಚಿವರ ಮೇಲೂ ಅಸಮಧಾನವಿಲ್ಲ. ಎಲ್ಲ ಸಚಿವರೂ ಆತ್ಮೀಯರೇ. ನಮ್ಮ ಸಮಸ್ಯೆ ಬಗ್ಗೆ ಸ್ಪಂದಿಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಒಳ್ಳೆಯ ಆಡಳಿತ ಜನರಿಗೆ ಸಿಗುತ್ತಿದೆ ಎಂದು ತಿಳಿಸಿದರು.

ನಾಯಕತ್ವ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತಮ ಕೆಲಸ ಮಾಡುತ್ತಿದ್ದಾರೆ. ನಾಯಕತ್ವ ಬದಲಾವಣೆ ಅವಶ್ಯಕತೆಯಿಲ್ಲ. ಬಡವರ ಪರವಾಗಿ ಕೆಲಸ ಮಾಡುತ್ತಿರುವಾಗ ಬದಲಾವಣೆ ಮಾಡುವ ಅವಶ್ಯಕತೆಯಿಲ್ಲ. ಐದು ವರ್ಷ ನಾನೇ ಸಿಎಂ ಆಗಿರುತ್ತೇನೆ ಎಂದು ಸಿದ್ದರಾಮಯ್ಯ ಅವರೇ ಹೇಳಿದ್ದಾರೆ. ಅದರಲ್ಲಿ ತಪ್ಪೇನಿಲ್ಲ. ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿದ್ದರಾಮಯ್ಯ ಅವರನ್ನು 1-2 ವರ್ಷಕ್ಕೆ ಆಯ್ಕೆ ಮಾಡಿಲ್ಲ. ಐದು ವರ್ಷಕ್ಕೆ ಅವರನ್ನು ಸಿಎಂ ಆಗಿ ಆಯ್ಕೆ ಮಾಡಿದ್ದೇವೆ ಎಂದು ಹೇಳಿದರು.ನಾಯಕತ್ವ ಬಗ್ಗೆ ಹೈಕಮಾಂಡ್ನಿರ್ಧರಿಸುತ್ತದೆ: ಸುರ್ಜೇವಾಲಾನಾಯಕತ್ವ ಬದಲಾವಣೆ ಕುರಿತು ಕೆಲ ಶಾಸಕರಿಗೆ ಆಸೆಯಿರಬಹುದು. ಆದರೆ, ಎಲ್ಲವನ್ನೂ ಹೈಕಮಾಂಡ್‌ ನಿರ್ಧಾರ ಮಾಡುತ್ತದೆ. ಆ ಬಗ್ಗೆ ಹೆಚ್ಚು ಮಾತನಾಡುವ ಅವಶ್ಯಕತೆಯಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ ತಿಳಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾಯಕತ್ವ ಬದಲಾವಣೆ ಕುರಿತಂತೆ ಹಿಂದೆಯೇ ಸ್ಪಷ್ಟಪಡಿಸಿದ್ದೇನೆ. ಅಲ್ಲದೆ, ಈ ವಿಚಾರವನ್ನು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಅವರೊಂದಿಗೂ ಮಾತನಾಡಿದ್ದೇನೆ. ಶಾಸಕರಿಗೆ ಕೆಲವು ಆಸೆಯಿರಬಹುದು. ಹಲವು ಪತ್ರಕರ್ತರಿಗೆ ಸಂಪಾದಕರಾಗುವ ಆಸೆಯಿರುತ್ತದೆ. ಆದರೆ, ಸಂಸ್ಥೆಯ ಮಾಲೀಕರು ಅದನ್ನು ತೀರ್ಮಾನಿಸುತ್ತಾರೆ. ಅದೇ ರೀತಿ ನಾಯಕತ್ವ ಬದಲಾವಣೆ ಸೇರಿದಂತೆ ಎಲ್ಲವನ್ನೂ ಹೈಕಮಾಂಡ್‌ ನಿರ್ಧರಿಸುತ್ತದೆ. ಅದರ ಬಗ್ಗೆ ಹೆಚ್ಚು ಚರ್ಚಿಸುವ ಅಗತ್ಯವಿಲ್ಲ ಎಂದರು.

ಸಿಎಂ, ಡಿಸಿಎಂ ದೆಹಲಿ ಪ್ರವಾಸದ ಕುರಿತು ಪ್ರತಿಕ್ರಿಯಿಸಿ, ಸಿಎಂ ಮತ್ತು ಡಿಸಿಎಂ ಅವರಿಗೆ ಜವಾಬ್ದಾರಿಯಿರುತ್ತದೆ. ಅದನ್ನು ಅವರು ನಿರ್ವಹಿಸುತ್ತಿದ್ದಾರೆ. ಕರ್ನಾಟಕ ಜನರ ಹಿತ ದೃಷ್ಟಿಯಿಂದ ದೆಹಲಿಗೆ ಹೋಗಿ ಬರುತ್ತಿರುತ್ತಾರೆ. ಅದೇ ರೀತಿ ಈಗಲೂ ಹೋಗಿದ್ದಾರೆ. ಅವರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ರಾಜ್ಯದ ಬೇಡಿಕೆ ಮತ್ತು ರಾಜ್ಯಕ್ಕಾಗುತ್ತಿರುವ ತಾರತಮ್ಯದ ಕುರಿತು ಕೇಂದ್ರ ಸರ್ಕಾರದ ಗಮನ ಸೆಳೆಯುತ್ತಿದ್ದಾರೆ. ದೆಹಲಿ ಪ್ರವಾಸದ ಬಗ್ಗೆ ವಿಶೇಷ ಅರ್ಥ ಕಲ್ಪಿಸುವ ಅವಶ್ಯಕತೆಯಿಲ್ಲ ಎಂದರು.

Read more Articles on