ಸಾರಾಂಶ
ಕನ್ನಡಪ್ರಭ ವಾರ್ತೆ ತಾಳಿಕೋಟೆ ಮಾನವನು ಪ್ರಕೃತಿಗೆ ಧಕ್ಕೆ ಮಾಡುತ್ತಿರುವುದರಿಂದ ಪ್ರಕೃತಿ ಮುನಿಸಿಕೊಳ್ಳುತ್ತಿದೆ. ಇದರಿಂದ ಶರಣರು ಸತ್ಪುರುಷರು ಲೋಕಕಲ್ಯಾಣಾರ್ಥವಾಗಿ ಮೌನಾನುಷ್ಠಾನ ಕೈಗೊಳ್ಳುತ್ತಾರೆ ಎಂದು ಹುಬ್ಬಳ್ಳಿಯ ಮೂರು ಸಾವಿರದ ಮಠದ ಜಗದ್ಗುರು ಶ್ರೀ ರಾಜಯೋಗ ಗುರುಸಿದ್ಧ ರಾಜಯೋಗೇಂದ್ರ ಮಹಾಸ್ವಾಮಿಗಳು ನುಡಿದರು.
ಕನ್ನಡಪ್ರಭ ವಾರ್ತೆ ತಾಳಿಕೋಟೆ
ಮಾನವನು ಪ್ರಕೃತಿಗೆ ಧಕ್ಕೆ ಮಾಡುತ್ತಿರುವುದರಿಂದ ಪ್ರಕೃತಿ ಮುನಿಸಿಕೊಳ್ಳುತ್ತಿದೆ. ಇದರಿಂದ ಶರಣರು ಸತ್ಪುರುಷರು ಲೋಕಕಲ್ಯಾಣಾರ್ಥವಾಗಿ ಮೌನಾನುಷ್ಠಾನ ಕೈಗೊಳ್ಳುತ್ತಾರೆ ಎಂದು ಹುಬ್ಬಳ್ಳಿಯ ಮೂರು ಸಾವಿರದ ಮಠದ ಜಗದ್ಗುರು ಶ್ರೀ ರಾಜಯೋಗ ಗುರುಸಿದ್ಧ ರಾಜಯೋಗೇಂದ್ರ ಮಹಾಸ್ವಾಮಿಗಳು ನುಡಿದರು.ತಾಲೂಕಿನ ಇಂಗಳಗೇರಿ ಗ್ರಾಮದ ಖಾಸ್ಗತೇಶ್ವರ ಮಠದ ಶರಣೆ ಶ್ರೀಅಕ್ಕಮಹಾದೇವಿ ಅಮ್ಮನವರು ಇಳಕಲ್ಲ ತಾಲೂಕಿನ ಗೊರಬಾಳ ಗ್ರಾಮದ ಸಾಧೂರ ತೋಟದಲ್ಲಿ ೩೧ ದಿನಗಳ ಕಾಲ ಕೈಕೊಂಡ ಮೌನಾನುಷ್ಠಾನ ಮುಕ್ತಾಯ ಸಮಾರಂಭದಲ್ಲಿ ಅವರು ಮಾತನಾಡಿದರು. ಅಕ್ಕಮಹಾದೇವಿ ಅಮ್ಮನವರು ೨೨ ವರ್ಷಗಳಿಂದ ನಿರಂತರ ಮೌನಾನುಷ್ಠಾನ ಕೈಗೊಳ್ಳುತ್ತಿದ್ದಾರೆ. ಎಲ್ಲ ಮೌನಾನುಷ್ಠಾನಗಳು ಭಕ್ತಾಧಿಗಳ ಒಳಿತಿಗಾಗಿಯೇ. ಲೋಕ ಕಲ್ಯಾರ್ಣಾವಾಗಿ ಈ ವರ್ಷ ೩೧ ದಿನಗಳ ಕಾಲ ಮೌನ ವೃತ ಕೈಗೊಂಡು ಭಕ್ತರ ಬೇಡಿಕೆ ಮತ್ತು ರೈತರ ಸಂಕಷ್ಟ ಕಳೆಯಲಿ, ದೇಶದಲ್ಲಿ ಶಾಂತಿ ನೆಲೆಸಲಿ ಎಂಬ ಸಂದೇಶವನ್ನು ಪರಮಾತ್ಮನಿಗೆ ಸಲ್ಲಿಸಿದ್ದಾರೆ ಎಂದರು.
ಮಾತೋಶ್ರೀ ಯೋಗೀಶ್ವರಿ ಅಮ್ಮನವರು ಮಾತನಾಡಿ, ಅಕ್ಕಮಹಾದೇವಿ ತಾಯಿಯವರು ಇಂಗಳಗೇರಿ ಖಾಸ್ಗತಮಠದಿಂದ ಇಳಕಲ್ಲದ ಗೊರಬಾಳ ಗ್ರಾಮದವರೆಗೆ ಬಂದು ಮೌನಾನುಷ್ಠಾನ ಕೈಗೊಂಡಿರುವುದು ಇದು ಮಹಾತ್ಮರ ನೆಲವೆಂದು ತಿಳಿಯುತ್ತದೆ. ಈ ನೆಲದಲ್ಲಿ ಕೈಗೊಂಡ ಮೌನಾನುಷ್ಠಾನ ಭಕ್ತರ ಭಾಗ್ಯದ ಬಾಗಿಲು ತೆಗೆದಂತಾಗಿದೆ. ಈ ಮೌನಾನುಷ್ಠಾನದಿಂದ ಒಳ್ಳೆಯ ವಾತಾವರಣ ಸೃಷ್ಟಿಯಾಗಲಿದೆ. ಆದರೂ ತೋಟ ಎನ್ನುವ ತಪೋವನದಲ್ಲಿ ೩೧ ದಿನಗಳ ಕಾಲ ಕೈಗೊಂಡ ತಪ್ಪಸ್ಸು ಪರಮಾತ್ಮನಿಗೆ ಸಲ್ಲಲ್ಲಿದೆ, ಭಕ್ತರ ಬೇಡಿಕೆ ಇಡೇರಲಿದೆ ಎಂದು ಆಶಿಸಿದರು.ಕಾರ್ಯಕ್ರಮದಲ್ಲಿ ಶ್ರೀ ಶಿವಪಂಚಾಕ್ಷರಿ ಸ್ವಾಮಿಗಳು, ಶ್ರೀ ಗುರು ಮಡಿವಾಳೇಶ್ವರ ಮಠದ ಬುಡರಕಟ್ಟಿ ರಮೇಶ ಸ್ವಾಮಿಗಳು, ಯೋಗ ಮತ್ತು ಜ್ಞಾನಾಶ್ರಮ ಗೋವಿನಹಳ್ಳಿಯ ಶ್ರೀ ಶಿವಭದ್ರ ಶಿವಾಚಾರ್ಯರು, ಸಿಂದಗಿ ಶ್ರೀಬೃಂಗಿಮಠದ ಶ್ರೀಗಳು, ಇಂಗಳೇಶ್ವರ ಶ್ರೀಗಳು, ನಂದಿಹಾಳದ ಶ್ರೀಗಳು, ತಿಂಥಣಿ ಮೌನೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಪರಮಣ್ಣ ಬಡಿಗೇರ ಹಾಗೂ ಇಂಗಳಗೇರಿ ಗ್ರಾಮದ ಮತ್ತು ಗೊರಬಾಳ ಗ್ರಾಮದ ಸದ್ಭಕ್ತರು ಉಪಸ್ಥಿತರಿದ್ದರು._______________