ಸಾರಾಂಶ
ಸೆ. 22ರಿಂದ ಅ. 7ರ ವರೆಗೆ ಹಿಂದುಳಿದ ವರ್ಗದ ಆಯೋಗದಿಂದ ಜಾತಿ ಸಮೀಕ್ಷೆ ನಡೆಯಲಿದೆ. ಈ ವೇಳೆ ಪಂಚಮಸಾಲಿಗರು ಜಾತಿ ಕಲಂನಲ್ಲಿ ಯಾವ ಅಂಶ? ಸೇರಿಸಬೇಕು ಎನ್ನುವ ಗೊಂದಲಗಳಿವೆ. ಹೀಗಾಗಿ ರಾಜ್ಯಾದ್ಯಂತ ಎಲ್ಲ ಜಿಲ್ಲೆ ಸುತ್ತಾಡಿ, ಪಂಚಮಸಾಲಿ ಸಂಘದ ಪದಾಧಿಕಾರಿಗಳ, ಕಾರ್ಯಕರ್ತರ ಅಭಿಪ್ರಾಯ ಪಡೆಯುತ್ತಿದ್ದೇವೆ
ಕೊಪ್ಪಳ: ಹಿಂದುಳಿದ ವರ್ಗಗಳ ಸಮೀಕ್ಷೆ ವೇಳೆ ಜಾತಿ ಕಾಲಂನಲ್ಲಿ ವೀರಶೈವ ಲಿಂಗಾಯತ ಅಥವಾ ಪಂಚಮಸಾಲಿ ಲಿಂಗಾಯತವೆಂದು ಬರೆಯಿಸಬೇಕೋ ಎನ್ನುವ ಕುರಿತು ಸೆ. 17ರಂದು ರಾಜ್ಯ ಪಂಚಮಸಾಲಿ ಘಟಕದಿಂದ ಬೆಂಗಳೂರಿನಲ್ಲಿ ಕರೆಯಲಾಗಿರುವ ಸಭೆಯಲ್ಲಿ ನಿರ್ಣಯಿಸಲಾಗುವುದು ಎಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದಶ್ರೀ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ. 22ರಿಂದ ಅ. 7ರ ವರೆಗೆ ಹಿಂದುಳಿದ ವರ್ಗದ ಆಯೋಗದಿಂದ ಜಾತಿ ಸಮೀಕ್ಷೆ ನಡೆಯಲಿದೆ. ಈ ವೇಳೆ ಪಂಚಮಸಾಲಿಗರು ಜಾತಿ ಕಲಂನಲ್ಲಿ ಯಾವ ಅಂಶ? ಸೇರಿಸಬೇಕು ಎನ್ನುವ ಗೊಂದಲಗಳಿವೆ. ಹೀಗಾಗಿ ರಾಜ್ಯಾದ್ಯಂತ ಎಲ್ಲ ಜಿಲ್ಲೆ ಸುತ್ತಾಡಿ, ಪಂಚಮಸಾಲಿ ಸಂಘದ ಪದಾಧಿಕಾರಿಗಳ, ಕಾರ್ಯಕರ್ತರ ಅಭಿಪ್ರಾಯ ಪಡೆಯುತ್ತಿದ್ದೇವೆ. ಪ್ರಸ್ತುತ ಆಯೋಗದ ಜಾತಿ ಕಲಂನಲ್ಲಿ ವೀರಶೈವ ಪಂಚಮಸಾಲಿ, ಲಿಂಗಾಯತ ಪಂಚಮಸಾಲಿ ಎನ್ನುವ ಅಂಶ ಬಂದಿದೆ. ಇದರಲ್ಲಿ ಯಾವ ಅಂಶ ಬರೆಯಿಸಬೇಕು ಎಂಬುದರ ಕುರಿತು ಜಿಲ್ಲಾವಾರು ಅಭಿಪ್ರಾಯ ಪಡೆದು, ಬೆಂಗಳೂರಿನಲ್ಲಿ ನಡೆಯುವ ಸಭೆಯಲ್ಲಿ ಅಂತಿಮ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಜಿಲ್ಲಾಧ್ಯಕ್ಷ ಬಸನಗೌಡ ತೊಂಡಿಹಾಳ, ತಾಲೂಕಾಧ್ಯಕ್ಷ ಕರಿಯಪ್ಪ ಮೇಟಿ, ಪಾಲಾಕ್ಷಪ್ಪ ಕೆಂಡದ, ದೇವೇಂದ್ರಪ್ಪ ಬಳೂಟಗಿ, ಮಹಿಳಾ ಜಿಲ್ಲಾಧ್ಯಕ್ಷೆ ಸುಮಂಗಲಾ ಹಂಚಿನಾಳ, ತಾಲೂಕಾಧ್ಯಕ್ಷರಾದ ಪ್ರತೀಮಾ ಪಟ್ಟಣಶೆಟ್ಟರ್, ಬಸಲಿಂಗಪ್ಪ ಭೂತೆ, ಶಶಿಧರಗೌಡ ಪಾಟೀಲ್, ಶರಣಪ್ಪ ಹ್ಯಾಟಿ, ಗವಿಸಿದ್ದಪ್ಪ ಯರಕಲ್, ಬಸವರಾಜ ಹಳ್ಳೂರು, ಬಸಪ್ಪ ಕಂಪ್ಲಿ, ಕಳಕನಗೌಡ ಪಾಟೀಲ್, ಸುದೇಶ ಪಟ್ಟಣ ಶೆಟ್ಟಿ, ಶರಣಪ್ಪ ಜಿಗೇರಿ, ಶೇಖರ ಮುತ್ತೇನವರ್, ಗವಿಸಿದ್ದಪ್ಪ ಡಂಬಳ, ಮಲ್ಲಿಕಾರ್ಜುನ ಸಿಳ್ಳಿನ ಸೇರಿದಂತೆ ಇತರರು ಇದ್ದರು.

;Resize=(128,128))
;Resize=(128,128))
;Resize=(128,128))
;Resize=(128,128))