ಗ್ರಾಮೀಣ ಪ್ರತಿಭೆಗಳಿಂದ ಉಳಿದ ಕ್ರೀಡೆ: ಮುರಳ್ಳಿ

| Published : Jan 07 2025, 12:33 AM IST

ಸಾರಾಂಶ

ಕ್ರೀಡಾಕೂಟಗಳು ಮನರಂಜನೆಗೆ ಸೀಮಿತಗೊಳ್ಳದೆ ಸದೃಢ ಹಾಗೂ ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗಿದೆ. ಮನುಷ್ಯನ ಹುಟ್ಟು-ಸಾವು ಆಕಸ್ಮಿಕವಾಗಿದ್ದು ಇರುವಷ್ಟು ದಿನ ಸಮಾಜಕ್ಕೆ ಉತ್ತಮ ಕೆಲಸ ಮಾಡುವ ಮೂಲಕ ಸಾರ್ಥಕ ಬದುಕು ಸಾಧಿಸಬೇಕು.

ಕಲಘಟಗಿ:

ನಶಿಸಿ ಹೋಗುತ್ತಿರುವ ಕ್ರೀಡೆಗಳನ್ನು ಗ್ರಾಮೀಣ ಭಾಗದ ಪ್ರತಿಭೆಗಳು ಕ್ರೀಡಾಕೂಟ ಆಯೋಜಿಸುವ ಮೂಲಕ ಅವುಗಳನ್ನು ಉಳಿಸಿ-ಬೆಳೆಸುತ್ತಿದ್ದಾರೆಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥಗೌಡ ಮುರಳ್ಳಿ ಹೇಳಿದರು.ತಾಲೂಕಿನ ಮಲಕನಕೊಪ್ಪ ಗ್ರಾಮದಲ್ಲಿ ಗಜಾನನ ಯುವಕರ ಬಳಗದಿಂದ ಆಯೋಜಿಸಿದ್ದ 50 ಕೆಜಿ ಒಳಗಿನ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡಾಕೂಟಗಳು ಮನರಂಜನೆಗೆ ಸೀಮಿತಗೊಳ್ಳದೆ ಸದೃಢ ಹಾಗೂ ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗಿದೆ. ಮನುಷ್ಯನ ಹುಟ್ಟು-ಸಾವು ಆಕಸ್ಮಿಕವಾಗಿದ್ದು ಇರುವಷ್ಟು ದಿನ ಸಮಾಜಕ್ಕೆ ಉತ್ತಮ ಕೆಲಸ ಮಾಡುವ ಮೂಲಕ ಸಾರ್ಥಕ ಬದುಕು ಸಾಧಿಸಬೇಕೆಂದು ಕರೆ ನೀಡಿದರು.

ಪಂದ್ಯಾವಳಿಯಲ್ಲಿ 10 ತಂಡಗಳು ಭಾಗವಹಿಸಿದ್ದವು. ಸಲಕಿನಕೊಪ್ಪ ತಂಡ ಪ್ರಥಮ, ಗಜಾನನ ಗೆಳೆಯರ ಬಳಗ ಮಲಕನಕೊಪ್ಪ ದ್ವಿತೀಯ, ಜೈ ಹನುಮಾನ ಬಾಗಲಕೋಟಿ ತೃತೀಯ, ಸಲಕಿನಕೊಪ್ಪ ಬಿ. ತಂಡ ಚತುರ್ಥಿ ಬಹುಮಾನ ಹಾಗೂ ಟ್ರೋಫಿ ಪಡೆದುಕೊಂಡವು.

ಪ್ರಭಯ್ಯ ಹಿರೇಮಠ ಸಾನ್ನಿಧ್ಯ ವಹಿಸಿದ್ದರು. ತಾಪಂ ಮಾಜಿ ಅಧ್ಯಕ್ಷ ಬಸವಣ್ಣಯ್ಯ ಹಿರೇಮಠ, ಜಿನ್ನೂರ ಗ್ರಾಪಂ ಅಧ್ಯಕ್ಷ ಮಲ್ಲಪ್ಪ ಹರ್ತಿ, ಸದಸ್ಯರಾದ ರಮೇಶ ರೊಟ್ಟಿ, ಕಲ್ಲಪ್ಪ ಅಗಡಿ, ನಿಜಲಿಂಗಪ್ಪ ಹುಲಮನಿ, ಬಸವರಾಜ ಹೊನ್ನಳ್ಳಿ, ರಮೇಶ ಕರಡಿ, ಮಲ್ಲಿಕಾರ್ಜುನ ಕುಂಕೂರ, ಪ್ರಭು ಅಂಗಡಿ, ಈಶ್ವರ ಜಾಲಿಹಾಳ, ಫಕೀರೇಶ ಕರಡಿ, ಶಿವನಪ್ಪ ಮಡ್ಲಿ, ರಾಮಣ್ಣ ತಂಬೂರ, ಶಿವು ಮಿರ್ಜಿ ಇದ್ದರು.