18 ಶಾಸಕರ ಅಮಾನತು; ಕಾಂಗ್ರೆಸ್‌ ವಿರುದ್ಧ ಬಿಜೆಪಿ ಆಕ್ರೋಶ

| Published : Mar 25 2025, 12:45 AM IST

ಸಾರಾಂಶ

ರಾಯಚೂರಿನ ಡಾ.ಬಿ.ಆರ್.ಅಂಬೇಡ್ಕರ್‌ ವೃತ್ತದಲ್ಲಿ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬಿಜೆಪಿಗರು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ರಾಯಚೂರು18 ಬಿಜೆಪಿ ಶಾಸಕರ ಅಮಾನತು, ಗುತ್ತಿಗೆಯಲ್ಲಿ ಮುಸ್ಲಿಂರಿಗೆ ಶೇ.4% ಮೀಸಲಾತಿ ಹೆಚ್ಚಳ ಖಂಡಿಸಿ, ಬೆಲೆ ಏರಿಕೆ, ಗ್ಯಾರಂಟಿಗೆ ಅನ್ಯ ಅನುದಾನ ಬಳಕೆ ಸೇರಿ ರಾಜ್ಯ ಸರ್ಕಾರದ ಜನ ವಿರೋಧಿ ನೀತಿಗಳ ವಿರುದ್ಧ ಬಿಜೆಪಿ ಜಿಲ್ಲಾ ಸಮಿತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.ಸ್ಥಳೀಯ ಡಾ.ಬಿ.ಆರ್.ಅಂಬೇಡ್ಕರ್‌ ವೃತ್ತದಲ್ಲಿ ಸೇರಿದ ಪಕ್ಷದ ಮುಖಂಡರು ಕಾಂಗ್ರೆಸ್‌ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಜಿಲ್ಲಾಡಳಿತದ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು. ವಿಧಾನಸಭಾಧ್ಯಕ್ಷರು ಕಾನೂನು ಬಾಹಿರ, ಅಸಂವಿಧಾನಿಕ, ಏಕಪಕ್ಷೀಯವಾಗಿ ಹಾಗೂ ಮನಸೋ ಇಚ್ಛೆಯಿಂದ ಬಿಜೆಪಿಯ 18 ಶಾಸಕರನ್ನು 6 ತಿಂಗಳ ಕಾಲ ಅಮಾನತು ಮಾಡಿರುವುದು ತೀವ್ರ ಖಂಡನೀಯವಾಗಿದ್ದು, ಇದರು ಕಾಂಗ್ರೆಸ್‌ ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆಗೆ ದ್ರೋಹ ಮಾಡಿದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಗುತ್ತಿಗೆಯಲ್ಲಿ ಮುಸ್ಲಿಂಮರಿಗೆ ಶೇ.4 ರಷ್ಟು ಮೀಸಲಾತಿಯನ್ನು ನೀಡಿದೆ. ಅಷ್ಟೇ ಅಲ್ಲದೇ ಶಾದಿ ಭಾಗ್ಯ, ಮುಸ್ಲಿಂ ವಿದ್ಯಾರ್ಥಿಗಳಿಗೆ ನೀಡುವ ಸಹಾಯಧನದ ಮೊತ್ತವನ್ನು ಹೆಚ್ಚಿಸಿರುವುದು ಹೀಗೆ ಕಾಂಗ್ರೆಸ್‌ ಮತ್ತೊಮ್ಮೆ ತುಷ್ಟೀಕರಣ ರಾಜಕೀಯ ಮಾಡಿ ತಮ್ಮ ಹಳೇ ಚಾಳಿಯನ್ನು ಮುಂದುವರೆಸಿರುವುದನ್ನು ಯಾವುದೇ ಕಾರಣಕ್ಕು ಸಹಿಸುವುದಿಲ್ಲ ಎಂದರು.ಗ್ಯಾರಂಟಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಿರುವ ಕಾಂಗ್ರೆಸ್‌ ಎಸ್ಸಿ-ಎಸ್ಟಿಹ ವಿಶೇಷ ಅನುದಾನದ ದುರ್ಬಳಕೆ ಮಾಡಿಕ ಶೋಷಿತ ಸಮುದಾಯಗಳಿಗೆ ಇದರೊಟ್ಟಿಗೆ ಅಗತ್ಯ ವಸ್ತುಗಳ ಬೆಲೆಯನ್ನು ಹೆಚ್ಚಿಸಿ ರಾಜ್ಯದ ಸರ್ವ ಜನರಿಗೆ ದ್ರೋಹವೆಸಗುತ್ತಿದೆ ಎಂದು ಆರೋಪಿಸಿದರು.ಕೂಡಲೇ 18 ಶಾಸಕರ ಅಮಾನತನ್ನು ವಾಪಸ್ಸು ಪಡೆಯಬೇಕು, ಶೇ.4 ರಷ್ಟು ಮೀಸಲಾತಿಯನ್ನು ರದ್ದು ಪಡಿಸಬೇಕು, ಹಿಂದೂ ವಿರೋಧಿ ನೀತಿಗಳನ್ನು ಕೈಬಿಟ್ಟು ಸಮಗ್ರ ಅಭಿವೃದ್ಧಿಗೆ ಮುಂದಾಗಬೇಕು ಇಲ್ಲವಾದಲ್ಲಿ ತೀವ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.ಪ್ರತಿಭಟನೆಯಲ್ಲಿ ಶಾಸಕ ಡಾ.ಶಿವರಾಜ ಪಾಟೀಲ್, ಜಿಲ್ಲಾಧ್ಯಕ್ಷ ವೀರನಗೌಡ ಲೆಕ್ಕಿಹಾಳ,ಮುಖಂಡರಾದ ಎನ್‌.ಶಂಕ್ರಪ್ಪ, ಬಿ.ವಿ.ನಾಯಕ,ರವೀಂದ್ರ ಜಲ್ದಾರ್‌,ರಾಮಚಂದ್ರ ಕಡಗೋಳ, ವಿ.ಪಿ.ರೆಡ್ಡಿ,ಸುಮಾಗಸ್ತಿ, ನಾಗವೇಣಿ ಪಾಟೀಲ್‌ ಸೇರಿ ವಿವಿಧ ಮೋರ್ಚಾಗಳ ಪ್ರಮುಖರು, ಕಾರ್ಯಕರ್ತರು ಇದ್ದರು. ಎರಡೂವರೆ ದಶಕಗಳ ಹಿಂದೆಯೇ ರಾಯಚೂರಿನಲ್ಲಿ ಹನಿಟ್ರ್ಯಾಪ್: ಶಾಸಕ ಶಿವರಾಜ ಹೊಸ ಬಾಂಬ್ರಾಯಚೂರು:ಸುಮಾರು ಎರಡೂವರೆ ದಶಕಗಳ (25 ವರ್ಷ) ಹಿಂದೆಯೇ ರಾಯಚೂರಿನಲ್ಲಿ ಹನಿಟ್ರ್ಯಾಪ್‌ ನಡೆದಿತ್ತು ಎಂದು ಸ್ಥಳೀಯ ಶಾಸಕ ಡಾ.ಶಿವರಾಜ ಪಾಟೀಲ್‌ ಹೊಸ ಬಾಂಬ್‌ ಸಿಡಿಸಿದರು.ಸ್ಥಳೀಯ ಡಾ.ಬಿ.ಆರ್.ಅಂಬೇಡ್ಕರ್‌ ವೃತ್ತದಲ್ಲಿ ಬಿಜೆಪಿ ಹೋರಾಟದ ನಂತರ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ಜಿಲ್ಲೆಯಲ್ಲಿ ಹನಿಟ್ರ್ಯಾಪ್‌ ಮಾಡುವ ವಿಶ್ವವಿದ್ಯಾಲಯವೇ ಇದೆ. 25 ವರ್ಷಗಳ ಹಿಂದೆ ಅದು ನಡೆದಿತ್ತು ಆಗ ನಾವೆಲ್ಲರೂ ಚಿಕ್ಕವರಿದ್ದೇವು. ಇದೀಗ ನಾವು ನಮ್ಮವರೆಲ್ಲಾ ಶುಷಾರಾಗಿದ್ದೇವೆ. ಧುಬುಕ್ಕನೆ ಹೋಗಿ ಭಾವಿಗೆ ಬೀಳೋರಲ್ಲ, ಸದ್ಯಕ್ಕೆ ಜಿಲ್ಲೆಯ ಯಾರ ಮೇಲೂ ಹನಿಟ್ರ್ಯಾಪ್‌ ಯತ್ನ ನಡೆದಿಲ್ಲ ಎಂದರು.ರಾಜ್ಯ ಕಾಂಗ್ರೆಸ್‌ ಸರ್ಕಾರದಲ್ಲಿ ಸಚಿವರಿಗೆ, ಶಾಸಕರಿಗೆ ಅಭದ್ರತೆ ಕಾಡುತ್ತಿದೆ. ಸರ್ಕಾರದ ಸಚಿವರೇ ಹನಿಟ್ರ್ಯಾಪ್‌ ಬಗ್ಗೆ ತಿಳಿಸಿದ್ದು, ಇದಕ್ಕಿಂತ ಮತ್ತೊಂದು ದುರಂತವಿಲ್ಲ. ಇದರಿಂದಾಗಿ ಇಡೀ ಕಾಂಗ್ರೆಸ್‌ನಲ್ಲಿ ಬಿನ್ನಮತ ಬುಗಿಲೆದ್ದಿದೆ ಎಂದು ದೂರಿದರು.ಸಚಿವ ಕೆ.ಎನ್ ರಾಜಣ್ಣ ಅವರು ಹನಿಟ್ರ್ಯಾಪ್ ಕುರಿತು ಮಾತನಾಡಿದನ್ನು ಬಿಜೆಪಿ ಪಕ್ಷದ ಎಲ್ಲ ಬೆಂಬಲಿಸಿದ್ದೇವೆ. ಸಚಿವ ರಾಜಣ್ಣ ಅವರ ಹಿರಿಯ ನಾಯಕರು ಎಲ್ಲರೂ ಒಪ್ಪುವಂತ ವ್ಯಕ್ತಿಯಾಗಿದ್ದಾರೆ. ಯಾರದ್ದು ಒತ್ತಡದಿಂದ ಅವರು ದೂರು ಸಲ್ಲಿಸಲು ಮುಂದಾಗಿರಬಹುದು ಎಂದು ತಿಳಿಸಿದರು.