ಕೋಳಿ ಶೀತ ಜ್ವರದ ಶಂಕೆ; ಜಿಲ್ಲಾಡಳಿತ ತಲೆಬಿಸಿ

| Published : Mar 01 2025, 01:01 AM IST

ಕೋಳಿ ಶೀತ ಜ್ವರದ ಶಂಕೆ; ಜಿಲ್ಲಾಡಳಿತ ತಲೆಬಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ದೇಶ-ವಿದೇಶಗಳಿಂದ ವಲಸೆ ಬರುತ್ತಿರುವ ಪಕ್ಷಗಳ ಮೇಲೆ ನಿಗಾ ವಹಿಸುವುದರ ಜೊತೆಗೆ ಅವುಗಳ ತಪಾಸಣೆ, ರಕ್ಷಣೆಯ ಸವಾಲು ಇದೀಗ ಜಿಲ್ಲಾಡಳಿತ, ಜಿಲ್ಲಾ ಪಶುಸಂಗೋಪನಾ ಇಲಾಖೆಗೆ ಇದೀಗ ತಲೆನೋವಾಗಿ ಪರಿಣಮಿಸಲು ಆರಂಭಿಸಿದೆ.

ಕನ್ನಡಪ್ರಭ ವಾರ್ತೆ ರಾಯಚೂರುಜಿಲ್ಲೆಯಲ್ಲಿ ಪಕ್ಷಗಳಿ ನಿಗೂಢ ಸಾವಿನಿಂದಾಗಿ ಉಂಟಾಗಿರುವ ಕೋಳಿ ಶೀತ (ಹಕ್ಕಿ) ಜ್ವರದ ಶಂಕೆಯ ಭೀತಿ ಬೆನ್ನಲ್ಲೆ ಹಲವಾರು ತಾಪತ್ರಯಗಳು ಎದುರಾಗುತ್ತಿವೆ.ತಾಲೂಕಿನ ಮಲಿಯಾಬಾದ್, ಮನ್ಸಲಾಪುರ ಸೇರಿದಂತೆ ಇತರೆ ಪ್ರದೇಶಗಳಿಗೆ ದೇಶ-ವಿದೇಶಗಳಿಂದ ವಲಸೆ ಬರುತ್ತಿರುವ ಪಕ್ಷಗಳ ಮೇಲೆ ನಿಗಾ ವಹಿಸುವುದರ ಜೊತೆಗೆ ಅವುಗಳ ತಪಾಸಣೆ, ರಕ್ಷಣೆಯ ಸವಾಲು ಇದೀಗ ಜಿಲ್ಲಾಡಳಿತ, ಜಿಲ್ಲಾ ಪಶುಸಂಗೋಪನಾ ಇಲಾಖೆಗೆ ತಲೆನೋವಾಗಿ ಪರಿಣಮಿಸಲು ಆರಂಭಿಸಿದೆ.ಸಂತಾನೋತ್ಪತ್ತಿ ಸೇರಿ ಇತರೆ ಕಾರಣಗಳಿಂದಾಗಿ ದೇಶ-ವಿದೇಶಗಳಿಂದ ನಾನಾ ರೀತಿಯ ಪ್ರಭೇದದ ಪಕ್ಷಿಗಳು ಪ್ರತಿ ವರ್ಷ ಬೇಸಿಗೆ ಸಮಯದಲ್ಲಿ ಜಿಲ್ಲೆಯ ವಿವಿಧ ಕೆರೆಗಳಿಗೆ ವಸಲೆ ಬರುತ್ತವೆ. ಈ ಬಾರಿ ತೆಲಂಗಾಣ,ಆಂಧ್ರ ಮತ್ತು ಮಹಾರಾಷ್ಟ್ರಗಳಲ್ಲಿ ಹಕ್ಕಿ ಜ್ವರದ ಹಾವಳಿಯಿಂದಾಗಿ ಅಲ್ಲಿಂದ ಬಂದ ಪಕ್ಷಿಗಳಿಂದ ವೈರಸರ್ ಬಂದಿರಬಹುದು ಇಲ್ಲವೇ ವಲಸಿಗ ಪಕ್ಷಗಳಿಗೆ ಈ ಭಾಗದ ವೈರಸ್ ಸಹ ಹಬ್ಬುವ ಸಾಧ್ಯತೆಗಳಿರಬಹುದು, ಅವುಗಳ ತಪಾಸಣೆ ಹಾಗೂ ರಕ್ಷಣೆ ಕಾರ್ಯವನ್ನು ಸರ್ಕಾರ ಮಾಡಬೇಕು ಎಂದು ಪಕ್ಷಿಪ್ರೇಮಿಗಳು ಆಗ್ರಹಿಸುತ್ತಿದ್ದಾರೆ.ಗೋಳಿ ಫಾಮ್‌ ನಿರ್ವಹಣೆ ಕಷ್ಟ:

ಸಂಶಯಾಸ್ಪದ ಹಕ್ಕು ಜ್ವರದ ಸುದ್ದಿಗಳಿಂದಾಗಿ ಗೋಳಿ ಫಾಮ್‌ಗಳ ನಿರ್ವಹಣೆ ಮಾಲೀಕರಿಗೆ ಕಷ್ಟಕರವಾಗಿ ಪರಿಣಮಿಸಿದೆ. ರಾಯಚೂರು ತಾಲೂಕಿನ ಬಿಜ್ಜನಗೇರಾ ಸಮೀಪದ ಫಾಮ್‌ನ ಸ್ವಚ್ಛತೆ ಹಾಗೂ ಇತರೆ ಮುಂಜಾಗೃತಾ ಕ್ರಮಗಳನ್ನು ವಹಿಸಲಾಗಿದೆ ಅದೇ ರೀತಿ ಉಳಿದ ಫಾಮ್‌ಗಳಲ್ಲಿಯೂ ಸಹ ಅಗತ್ಯ ಮುನ್ನೆಚ್ಚರಿಕೆಗಳನ್ನು ವಹಿಸಲಾಗುತ್ತಿದೆ. ಮುಂಜಾಗ್ರತೆ ವಹಿಸಲು ಸೂಚನೆ:

ಕೋಳಿ ಶೀತ ಜ್ವರದ ರೋಗೋದ್ರೇಕವಾಗಿರುವ ಹಿನ್ನೆಲೆಯಲ್ಲಿ ಮುಂಜಾಗ್ರತೆ ಕ್ರಮ ವಹಿಸಲು ಜಿಲ್ಲಾಡಳಿತವು ಅಗತ್ಯ ಸೂಚನೆಗಳನ್ನು ಹೊರಡಿಸಿದೆ. ಈ ಕುರಿತು ಹೇಳಿಕೆ ನೀಡಿರುವ ಜಿಲ್ಲಾ ಮಟ್ಟದ ಪ್ರಾಣಿಜನ್ಯ ರೋಗಗಳ ತುರ್ತು ನಿರ್ವಹಣಾ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲೆಯ ಜಿಲ್ಲಾಧಿಕಾರಿಗಳು ನಿತೀಶ್ ಕೆ. ಅವರು ಸಾರ್ವಜನಿಕರು ಮತ್ತು ಕೋಳಿ ಸಾಕಾಣಿಕೆದಾರರಿಗೆ ಸೂಚನೆ ನೀಡಿದ್ದಾರೆ.

ಕೋಳಿ ಅಥವಾ ಪಕ್ಷಿಗಳಲ್ಲಿ ಹಠಾತ್ ಸಾವು, ಅಸಾಧಾರಣ ಸಾವು, ಸತ್ತ ಕೋಳಿಗಳ ಮೂಗೂ,ಬಾಯಿ ಮತ್ತು ಕಣ್ಣಿನಿಂದ ನೀರು ಸುರಿಯುವುದು. ಕೋಳಿಗಳ ಮೊಣಕಾಲು ಮತ್ತು ಪಾದಗಳು ನೀಲಿ ಬಣ್ಣಕ್ಕೆ ತಿರುಗುವುದು ರೋಗದ ಲಕ್ಷಣಗಳಾಗಿವೆ. ಸರಿಯಾಗಿ ಬೇಯಿಸದ ಕೋಳಿ ಮಾಂಸ ಮತ್ತು ಮೊಟ್ಟೆಗಳ ಸೇವನೆಯಿಂದ, ಸೂಕ್ತ ರಕ್ಷಕ ಕವಚಗಳನ್ನು ಧರಿಸದೇ ರೋಗ ಪೀಡಿತ ಕೋಳಿ ಮತ್ತು ಕುಲುಷಿತ ಸಲಕರಣೆಗಳ ಸಂಪರ್ಕದಿಂದ ಕಳೆದ ವಾರ ಪಕ್ಕದ ತೆಲಂಗಾಣ ರಾಜ್ಯದಲ್ಲಿ ಕೋಳಿ ಶೀತ ಜ್ವರದ ರೋಗೋದ್ರೇಕವಾಗಿರುತ್ತದೆ. ಆದ್ದರಿಂದ ಮುಂಜಾಗೃತೆ ಕ್ರಮಗಳನ್ನು ವಹಿಸುವ ಅವಶ್ಯಕತೆಯಿರುತ್ತದೆ.ಕೋಳಿ ಫಾರಂ ಮಾಲೀಕರಿಗೆ ಹಾಗೂ ಮಾರಾಟಗಾರರಿಗೆ ಸೂಚನೆಗಳು:

ಜಿಲ್ಲೆಯಿಂದ ಹೊರಗೆ ಹಾಗೂ ಜಿಲ್ಲೆಯ ಹೊರಗಿನಿಂದ ಜಿಲ್ಲೆಗೆ ಪ್ರವೇಶಿಸುವ ಸೋಂಕಿತ ಕೋಳಿ, ಕೋಳಿ ಉತ್ಪನ್ನಗಳು, ಕೋಳಿ ಆಹಾರ, ಸಂಬಂಧಿತ ಪರಿಕರಗಳು ಹಾಗೂ ಸಾಗಾಣಿಕೆ ವಾಹನಗಳನ್ನು ಸೋಂಕು ನಿವಾರಿಕಗಳಿಂದ ಸಿಂಪಡಿಸಿದ ನಂತರವೇ ಚಲನ-ವಲನಕ್ಕೆ ಕ್ರಮವಹಿಸುವುದು. ತಮ್ಮ ಫಾರಂ ಪ್ರದೇಶವನ್ನು ಶುಚಿಯಾಗಿಟ್ಟುಕೊಳ್ಳುವುದು ಹಾಗೂ ನಿಯಮಿತವಾಗಿ ಸೋಂಕು ನಿವಾರಕ ದ್ರಾವಣವನ್ನು ಸಿಂಪಡಿಸುವುದು. ವಲಸೆ ಬರುವ ಅಥವಾ ಅಲ್ಲಿಯೇ ವಾಸಿಸುವ ಹಕ್ಕಿ ಪಕ್ಷಿಗಳು ಫಾರಂ ಪ್ರವೇಶಿಸದಂತೆ ಹಾಗೂ ಫಾರಂನಲ್ಲಿನ ಕೋಳಿ, ಕೋಳಿ ಆಹಾರ, ಕುಡಿಯುವ ನೀರಿನ ಸಂಪರ್ಕಕ್ಕೆ ಬರದಂತೆ ಕ್ರಮವಹಿಸುವುದು. ಒಡೆದ ಕೋಳಿ ಮೊಟ್ಟೆ ಹಾಗೂ ಸತ್ತ ಕೋಳಿಗಳನ್ನು ಸುಡುವುದು. ಕೋಳಿಗಳಲ್ಲಿ ಅಸಹಜ ಸಾವು ಸಂಭವಿಸಿದ್ದಲ್ಲಿ ತಕ್ಷಣವೇ ಫಾರಂ ವ್ಯಾಪ್ತಿಗೊಳಪಡುವ ಅಥವಾ ಹತ್ತಿರ ಪಶುವೈದ್ಯಕೀಯ ಸಂಸ್ಥೆಯ ಅಧಿಕಾರಿ, ಸಿಬ್ಬಂದಿಯವರಿಗೆ ಮಾಹಿತಿ ನೀಡುವುದು. ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಅಧಿಕಾರಿ ಅಥವಾ ಸಿಬ್ಬಂದಿ ಫಾರಂಗಳಿಗೆ ಭೇಟಿ ನೀಡಲು ಬಂದಾಗ ಕಡ್ಡಾಯವಾಗಿ ಅನುಮತಿ ನೀಡುವುದು ಹಾಗೂ ಮಾದರಿಗಳನ್ನು ಸಂಗ್ರಹಿಸಲು ಸಹಕರಿಸಬೇಕು ಎಂದು ಜಿಲ್ಲಾಡಳಿತ ತಿಳಿಸಿದೆ.ಸಾರ್ವಜನಿಕರಿಗೆ ಸೂಚನೆಗಳು:ಹೆಚ್ಚಿನ ಸಂಖ್ಯೆಯಲ್ಲಿ ಕೋಳಿಗಳು ಅಸಹಜ ಸಾವನ್ನಪ್ಪಿದರೆ, ತಕ್ಷಣವೇ ಹತ್ತಿರದ ಪಶು ವೈದ್ಯರು ಅಥವಾ ಸಿಬ್ಬಂದಿಯ ಗಮನಕ್ಕೆ ತರುವುದು. ರೋಗ ನಿಯಂತ್ರಣ ಹಾಗೂ ಆರೋಗ್ಯ ರಕ್ಷಣೆಯ ಹಿತದೃಷ್ಟಿ ಯಿಂದ ಕೋಳಿ ಫಾರಂಗಳಿಗೆ ಅನುಮತಿಯಿಲ್ಲದೇ ಪ್ರವೇಶಿಸಬಾರದು. ಕೆರೆ, ಕಟ್ಟೆ, ನೀರಿನ ತೊರೆ, ನದಿ ಮತ್ತು ಇತರೇ ನೀರಿನ ಜಾಗಕ್ಕೆ ವಲಸೆ ಬರುವ ಅಥವಾ ಅಲ್ಲಿಯೇ ವಾಸಿಸುವ ಹಕ್ಕಿ ಪಕ್ಷಿಗಳು ಅಸಹಜವಾಗಿ ಸತ್ತರೆ ತಕ್ಷಣವೇ ಪಶು ವೈದ್ಯಕೀಯ ಇಲಾಖೆಯ ಗಮನಕ್ಕೆ ತರುವುದು. ಕೋಳಿ ಮತ್ತು ಕೋಳಿ ಉತ್ಪನ್ನಗಳನ್ನು ಮುಟ್ಟಿದ್ದಲ್ಲಿ ಸೋಪಿನಿಂದ ಕೈತೊಳೆಯುವುದು. 70 ಡಿಗ್ರಿ ಸೇಂಟಿಗ್ರೇಡ್‌ನಲ್ಲಿ ಹತ್ತು ನಿಮಿಷ ಕೋಳಿ ಮಾಂಸ ಮತ್ತು ಮೊಟ್ಟೆಯನ್ನು ಬೇಯಿಸಿ ಸೇವಿಸಬೇಕು.