ಮಾರ್ಗಸೂಚಿಯ ನಿಯಮಾವಳಿಗಳಂತೆ ಹೈಸ್ಪೀಡ್ ಇಂಟರ್ನೆಟ್ ಮತ್ತು ದೂರವಾಣಿ ಸಂಪರ್ಕ ಕಲ್ಪಿಸಿ, ರಾಷ್ಟ್ರಪತಿ ಪ್ರೋಟೋಕಾಲ್ ಅನುಸಾರ ವೇದಿಕೆ, ರಾಷ್ಟ್ರಪತಿಗಳು ಹಾಗೂ ಭದ್ರತಾ ಸಿಬ್ಬಂದಿ ವಾಹನ ನಿಲುಗಡೆ ಪ್ರದೇಶ ಪರಿಶೀಲಿಸಿ ಯಾವುದೇ ಸರ್ಕಾರಿ, ಖಾಸಗಿ ವಾಹನಗಳು ಸದರಿ ಪ್ರದೇಶದಲ್ಲಿ ನಿಲ್ಲದಂತೆ ಕ್ರಮ ಕೈಗೊಳ್ಳಿ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಶಿವರಾತ್ರೀಶ್ವರ ಶಿವಯೋಗಿಗಳ ಜಯಂತಿ ಅಂಗವಾಗಿ ಪಟ್ಟಣಕ್ಕೆ ಶ್ರೀಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮೀಜಿ ಆಗಮಿಸಿ ಜಿಲ್ಲಾಧಿಕಾರಿ ಡಾ.ಕುಮಾರ್ ನೇತೃತ್ವದಲ್ಲಿ ವೇದಿಕೆ ನಿರ್ಮಾಣದ ಸ್ಥಳ, ಮಾರೇಹಳ್ಳಿ ಬಳಿಯ ಹೆಲಿಪ್ಯಾಡ್ ಪ್ರದೇಶವನ್ನು ಪರಿಶೀಲಿಸಿದರು.

ಮೂರು ಹೆಲಿಕಾಪ್ಟರ್ ಲ್ಯಾಂಡಿಂಗ್‌ಗೆ ಸ್ಥಳಗಳನ್ನು ಸಿದ್ದಪಡಿಸಲಾಗಿದ್ದು, ಕೂಡಲೇ ಲ್ಯಾಂಡಿಂಗ್ ಸ್ಥಳವನ್ನು ಗುರುತಿಸಲು ಸೂಚನೆ ನೀಡಿದರು. ಡಿ.14ರಂದು ಕೇಂದ್ರಿಂದ ಪರಿಶೀಲನಾ ತಂಡವು ಆಗಮಿಸಿ ಗುರುತಿಸಿರುವ ಹೆಲಿಪ್ಯಾಡ್ ಅನ್ನು ಸಮತಟ್ಟಾಗಿಸಿ, ನಿಯಮಾನುಸಾರ ಅಂತರ ಕಾಯ್ದುಕೊಳ್ಳುವುದು ಮತ್ತು ಧೂಳು ರಹಿತ ವ್ಯವಸ್ಥೆ ಕಲ್ಪಿಸಿ ಗ್ರೀನ್ ರೂಂ ನಿರ್ಮಾಣಕ್ಕೆ ಕೈಗೊಳ್ಳಿ ಎಂದರು.

ಮಾರ್ಗಸೂಚಿಯ ನಿಯಮಾವಳಿಗಳಂತೆ ಹೈಸ್ಪೀಡ್ ಇಂಟರ್ನೆಟ್ ಮತ್ತು ದೂರವಾಣಿ ಸಂಪರ್ಕ ಕಲ್ಪಿಸಿ, ರಾಷ್ಟ್ರಪತಿ ಪ್ರೋಟೋಕಾಲ್ ಅನುಸಾರ ವೇದಿಕೆ, ರಾಷ್ಟ್ರಪತಿಗಳು ಹಾಗೂ ಭದ್ರತಾ ಸಿಬ್ಬಂದಿ ವಾಹನ ನಿಲುಗಡೆ ಪ್ರದೇಶ ಪರಿಶೀಲಿಸಿ ಯಾವುದೇ ಸರ್ಕಾರಿ, ಖಾಸಗಿ ವಾಹನಗಳು ಸದರಿ ಪ್ರದೇಶದಲ್ಲಿ ನಿಲ್ಲದಂತೆ ಕ್ರಮ ಕೈಗೊಳ್ಳುವಂತೆ, ಯಾವುದೇ ನಿಯಮಗಳು ಉಲ್ಲಂಘನೆಯಾಗದಂತೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಅನಾರೋಗ್ಯದ ನಡುವೆಯೂ ವೀಲ್ ಚೇರ್ ಮೂಲಕ ವೇದಿಕೆ ನಿರ್ಮಾಣದ ಸ್ಥಳಕ್ಕೆ ಅಗಮಿಸಿ ಪರಿಶೀಲನೆ ನಡೆಸಿದ ಶ್ರೀಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳು, ಸುದೀರ್ಘ ಸಭೆ ನಡೆಸಿದ್ದರು. ಆದರೆ, ಕೊರೋನಾ ಕಾರಣದಿಂದ ಮುಂದೂಡಲಾಗಿದ್ದ ಸುತ್ತೂರು ಜಯಂತಿ ಆಚರಣೆ ಈಗ ನಡೆಯುತ್ತಿದೆ ಎಂದರು.

ಈ ವೇಳೆ ಕನಕಪುರ ದೇಗುಲಮಠದ ಕಿರಿಯಶ್ರೀ ಚನ್ನಬಸವ ಸ್ವಾಮಿಗಳು, ಅಲಮಟ್ಟಿಶ್ರೀಗಳು, ತಾಲೂಕಿನ ಹರಗುರು ಚರಮೂರ್ತಿಗಳು, ಜೆ.ಎಸ್.ಎಸ್.ವಿದ್ಯಾಪೀಠದ ಕಾರ್ಯದರ್ಶಿ ಎಸ್.ಪಿ.ಮಂಜುನಾಥ್, ಮಾಜಿ ಶಾಸಕ ಡಾ.ಕೆ.ಅನ್ನದಾನಿ, ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಎಸಿ ಶಿವಮೂರ್ತಿ, ಡಿವೈಎಸ್ಪಿ ಯಶವಂತ್ ಕುಮಾರ್, ಪುರಸಭೆ ಮುಖ್ಯಾಧಿಕಾರಿ ನಾಗರತ್ನ, ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಸೋಮಶೇಖರ್, ವೃತ್ತ ನಿರೀಕ್ಷಕರಾದ ಶ್ರೀಧರ್, ಬಸವರಾಜು, ಜಯಂತಿ ಮಹೋತ್ಸವದ ವಿವಿಧ ಸಮಿತಿಗಳ ಪದಾಧಿಕಾರಿಗಳು, ಜೆ.ಎಸ್.ಎಸ್.ವಿದ್ಯಾಪೀಠದ ಅಧಿಕಾರಿಗಳು, ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಮತ್ತು ಜಿಲ್ಲಾ ಮಟ್ಟದ ಪದಾಧಿಕಾರಿಗಳು, ಸರ್ವಪಕ್ಷಗಳ ಮುಖಂಡರು, ತಾಲೂಕು ಮಟ್ಟದ ಅಧಿಕಾರಿಗಳು ನೂರಾರು ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು.