ಕುಶಾಲನಗರ ರೋಟರಿ 50ರ ಸಂಭ್ರಮದಲ್ಲಿ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡಿದ್ದು ಸ್ವಚ್ಛ ಕುಶಾಲನಗರ ಕಾರ್ಯಕ್ರಮಗಳು ಇತರರಿಗೆ ಮಾದರಿಯಾಗಿವೆ ಎಂದು ರೋಟರಿ 3181 ರಾಜ್ಯಪಾಲರಾದ ಟಿ ಕೆ ರಾಮಕೃಷ್ಣ ಹೇಳಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರ ಕುಶಾಲನಗರ ರೋಟರಿ 50ರ ಸಂಭ್ರಮದಲ್ಲಿ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡಿದ್ದು ಸ್ವಚ್ಛ ಕುಶಾಲನಗರ ಕಾರ್ಯಕ್ರಮಗಳು ಇತರರಿಗೆ ಮಾದರಿಯಾಗಿವೆ ಎಂದು ರೋಟರಿ 3181 ರಾಜ್ಯಪಾಲರಾದ ಟಿ ಕೆ ರಾಮಕೃಷ್ಣ ಹೇಳಿದರು. ಅವರು ಕುಶಾಲನಗರ ಸಮೀಪದ ಭುವನಗಿರಿ ಕಸ ವಿಲೇವಾರಿ ಕೇಂದ್ರದಲ್ಲಿ ಹಸಿ ಕಸ ನಿರ್ವಹಣಾ ಘಟಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈ ಸಂದರ್ಭ ಮಾತನಾಡಿದ ಕುಶಾಲನಗರ ರೋಟರಿ ಅಧ್ಯಕ್ಷ ಮನು ಪೆಮ್ಮಯ್ಯ, ತ್ಯಾಜ್ಯ ವಿಲೇವಾರಿ ಘಟಕ ಭುವನಗಿರಿಯಲ್ಲಿ ಹಸಿ ಕಸ ನಿರ್ವಹಣಾ ಘಟಕಕ್ಕೆ ಎಸ್ ಎಲ್ ಎನ್ ಕಾಫಿ ಸಂಸ್ಥೆ ಮೂಲಕ ಸುಮಾರು 15 ಲಕ್ಷ ಮೊತ್ತದ ಸಹಾಯಧನ ಕಲ್ಪಿಸಲಾಗಿದೆ.ಕುಶಾಲನಗರ ಪಟ್ಟಣದ ಹೃದಯ ಭಾಗ ಸೇರಿದಂತೆ ಹಾರಂಗಿ ಚಿಕ್ಲಿಹೊಳೆ ಪ್ರವಾಸಿ ಕೇಂದ್ರಗಳಲ್ಲಿ ಸೇರಿದಂತೆ ಒಟ್ಟು ಎಂಟು ಕಡೆಗಳಲ್ಲಿ ಇಂತಹ ತೊಟ್ಟಿಗಳನ್ನು ನಿರ್ಮಿಸಲಾಗಿದೆ ಎಂದರು. ಕುಶಾಲನಗರ ಕೊಪ್ಪ ಗಡಿ ಭಾಗದಲ್ಲಿ ಕಾವೇರಿ ನದಿ ಹಳೆಯ ಸೇತುವೆ ಪುನಶ್ಚೇತನ ಕಾಮಗಾರಿಯೊಂದಿಗೆ ಪಾರ್ಕ್ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಅಂದಾಜು 25 ಲಕ್ಷದಲ್ಲಿ ಕಾಮಗಾರಿ ನಡೆಯುತ್ತಿದ್ದು ಈಗಾಗಲೇ ಶೇಕಡ 60ರಷ್ಟು ಕಾಮಗಾರಿ ನಡೆದಿದೆ ಎಂದರು. ರೋಟರಿ ಸಹಾಯಕ ರಾಜ್ಯಪಾಲ ಉಲ್ಲಾಸ್ ಕೃಷ್ಣ, ರೋಟರಿ ಕಾರ್ಯದರ್ಶಿ ಮಂಜುನಾಥ್ ಹೆಚ್ ಪಿ ಇದ್ದರು.