ಮನೆ - ಮನಗಳಲ್ಲಿ ಸ್ವದೇಶಿ ಚಿಂತನೆ ಹೆಚ್ಚಿದಾಗ ದೇಶದಲ್ಲಿ ಸ್ವಉದ್ಯೋಗ, ಉದ್ಯೋಗಾವಕಾಶಗಳು ಸೃಷ್ಟಿಯಾಗುವುದರ ಜೊತೆಗೆ ದೇಶದ ಆರ್ಥಿಕತೆಗೆ ಕೊಡುಗೆಯಾಗಬಲ್ಲುದು ಎಂದು ಕಿದಿಯೂರು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಕೆ. ಉದಯ ಕುಮಾರ್ ಶೆಟ್ಟಿ ಹೇಳಿದ್ದಾರೆ.

ಉಡುಪಿ: ಮನೆ - ಮನಗಳಲ್ಲಿ ಸ್ವದೇಶಿ ಚಿಂತನೆ ಹೆಚ್ಚಿದಾಗ ದೇಶದಲ್ಲಿ ಸ್ವಉದ್ಯೋಗ, ಉದ್ಯೋಗಾವಕಾಶಗಳು ಸೃಷ್ಟಿಯಾಗುವುದರ ಜೊತೆಗೆ ದೇಶದ ಆರ್ಥಿಕತೆಗೆ ಕೊಡುಗೆಯಾಗಬಲ್ಲುದು ಎಂದು ಕಿದಿಯೂರು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಕೆ. ಉದಯ ಕುಮಾರ್ ಶೆಟ್ಟಿ ಹೇಳಿದ್ದಾರೆ.ಸಮಾಜಸೇವಕ ಕೆ. ಕೃಷ್ಣಮೂರ್ತಿ ಆಚಾರ್ಯರ ನೇತೃತ್ವದಲ್ಲಿ ಶಕ್ತಿ ಈವೆಂಟ್ಸ್ ಸಹಯೋಗದಲ್ಲಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಅಡಿಟೋರಿಯಂ ಆವರಣದಲ್ಲಿ ಮೂರು ದಿನಗಳ ಕಾಲ ನಡೆಯುವ ಸ್ವದೇಶಿ ಖಾದ್ಯ ಮೇಳ (ನಮ್ಮ ನೆಲದ ರುಚಿ -ನಮ್ಮವರ ಉತ್ಪನ್ನ) ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.ಉದ್ಯಮಿ ಪ್ರಸಾದ್‌ರಾಜ್ ಕಾಂಚನ್ ಮಾತನಾಡಿ, ಗುಡಿ ಕೈಗಾರಿಕೆ, ಸಾಂಪ್ರದಾಯಿಕ ಬೆಳವಣಿಗೆಯ ಅರಿವು ಇಂತಹ ಮೇಳಗಳಿಂದ ಪಡೆಯಲು ಸಾಧ್ಯ ಎಂದರು.ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಉದ್ಯಮಿ ಸುಭಾಷ್ ಸಾಲ್ಯಾನ್, ಸ್ವದೇಶಿ ಖಾದ್ಯ ಮೇಳ ಸಂಘಟಕ ಕೆ. ಕೃಷ್ಣಮೂರ್ತಿ ಆಚಾರ್ಯ ಮಾತನಾಡಿದರು.ಉಡುಪಿ ಜಿಲ್ಲಾ ಕೃಷಿಕ ಸಂಘದ ಉಪಾಧ್ಯಕ್ಷ ಶ್ರೀನಿವಾಸ ಬಲ್ಲಾಳ್, ಕಾರ್ಯದರ್ಶಿ ರವೀಂದ್ರ ಪೂಜಾರಿ ಗುಜ್ಜರಬೆಟ್ಟು, ಅಮೃತಾ ಕೃಷ್ಣಮೂರ್ತಿ, ಸಹಕಾರಿ ಧುರೀಣ ವೈ. ಸುರ್ ಕುಮಾರ್, ಚರಣ್‌ರಾಜ್ ಬಂಗೇರ, ಶಕ್ತಿ ಈವೆಂಟ್ಸ್ ಸಂಸ್ಥೆಯ ಗುರುಪ್ರಸಾದ್, ಸಂತೋಷ್, ಯೋಗೀಶ್ ಇದ್ದರು.